ಶಮಿತಾ ಶೆಟ್ಟಿಗೆ ಸ್ಪರ್ಧೆ ನೀಡಲು ಸನ್ನಿ ಲಿಯೋನಿ ಎಂಟ್ರಿ: ಬಿಗ್ಶ ಬಾಸ್ ಮನೆಯಲ್ಲಿ ಶಮಿತಾ ಚಾರ್ಮ್ ಕುಗ್ಗಲಿದ್ಯಾ??

Written by Soma Shekar

Published on:

---Join Our Channel---

ಮನರಂಜನಾ ಲೋಕದಲ್ಲಿ ಬಿಗ್ ಬಾಸ್ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿದೆ. ಹಿಂದಿಯಲ್ಲಿ ಮೊದಲಿಗೆ ಪ್ರಾರಂಭವಾದ ಈ ಶೋ ಇದೀಗ ಪ್ರಾದೇಶಿಕ ಭಾಷೆಗಳಲ್ಲಿ ಸಹಾ ಪ್ರಸಾರವಾಗುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ. ಇನ್ನು ಇದು ಶೋ ವಿಷಯವಾದರೆ, ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟಿಯರ ಸಾಲಿನಲ್ಲಿ ಸನ್ನಿ ಲಿಯೋನಿ ಹೆಸರು ಕೂಡಾ ಕೇಳಿ ಬರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಜಾಹೀರಾತುಗಳು, ಸಿನಿಮಾಗಳಲ್ಲಿ ವಿಶೇಷ ಹಾಡುಗಳು, ಸಿನಿಮಾ ಪ್ರಮೋಷನ್ ಗಳು ಹೀಗೆ ಸನ್ನಿ ಲಿಯೋನಿ ಅವರಿಗೆ ಬಹಳ ಬೇಡಿಕೆಯಿದೆ. ವಿಶೇಷ ಎಂದರೆ ಸನ್ನಿ ಲಿಯೋನಿ ಭಾರತದ ಮನರಂಜನಾ ಜಗತ್ತಿಗೆ ಕಾಲನ್ನು ಇರಿಸಿದ್ದು ಬಿಗ್ ಬಾಸ್ ಶೋ ನ ಮೂಲಕ. ಬಿಗ್ ಬಾಸ್ ಸೀಸನ್ ಐದರಲ್ಲಿ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶಿಸಿದ ಸನ್ನಿ ಲಿಯೋನಿ, ಮನೆಯಿಂದ ಹೊರ ಬಂದ ಮೇಲೆ ಬಾಲಿವುಡ್ ಸ್ಟಾರ್ ಆದರು.

ಇನ್ನು ಬಿಗ್ ಬಾಸ್ ನಲ್ಲಿ ಸಹಾ ಈ ಬಾರಿ ಒಂದು ಮಹತ್ವದ ಬದಲಾವಣೆ ಆಗಿದೆ. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಓಟಿಟಿ ಪ್ಲಾಟ್ ಫಾರಂ ನಲ್ಲೂ ಕೂಡಾ ಬಿಗ್ ಬಾಸ್ ಪ್ರಾರಂಭವಾಗಿದೆ. ಅಲ್ಲದೇ ಈ ಹೊಸ ಬಿಗ್ ಬಾಸ್ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವೊಂದು ವಿವಾದಗಳನ್ನು ಸಹಾ ಈಗಾಗಲೇ ಹುಟ್ಟು ಹಾಕಿದೆ. ಈಗ ಈ ಬಿಗ್ ಬಾಸ್ ಗೆ ಮತ್ತಷ್ಟು ಮೆರುಗನ್ನು ನೀಡುವ ಸಲುವಾಗಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲು ಸನ್ನಿ ಲಿಯೋನಿ ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಗೆ ಎರಡನೇ ಬಾರಿ ಸ್ಪರ್ಧಿಯಾಗಿ ಪ್ರವೇಶ ಮಾಡಲು ಸನ್ನಿ ಸಿದ್ಧವಾಗಿದ್ದು, ಆಯೋಜನರು ಶೋ ವನ್ನು ಇನ್ನಷ್ಟು ವರ್ಣರಂಜಿತ ಮಾಡಲು ಸನ್ನಿ ಲಿಯೋನಿ ರನ್ನು ಮನೆಯೊಳಗೆ ಕಳುಹಿಸುತ್ತಿದ್ದಾರೆ.

ಬಿಗ್ ಬಾಸ್ ಓಟಿಟಿ ಯಲ್ಲಿ ಈಗಾಗಲೇ ಸಾಕಷ್ಟು ಜನ ಸೆಲೆಬ್ರಿಟಿಗಳು ಇದ್ದಾರೆ. ಆದರೆ ಬಹಳಷ್ಟು ಜನಪ್ರಿಯತೆ ಪಡೆದಿರುವ ಸ್ಪರ್ಧಿ ಎಂದರೆ ಅದು ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ. ಅವರನ್ನು ಬಿಟ್ಟರೆ ಹೊರಗೆ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಮತ್ತಾವುದೇ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇಲ್ಲ. ಆದ್ದರಿಂದಲೇ ಇದೀಗ ಸನ್ನಿ ಲಿಯೋನಿ ಮನೆಯನ್ನು ಪ್ರವೇಶ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಸನ್ನಿ ಒಂಟಿಯಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ. ಬದಲಾಗಿ ಅವರ ಪತಿ ಡೇನಿಯಲ್ ವೆಬರ್ ಕೂಡಾ ಸನ್ನಿ ಗೆ ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಲಿದ್ದಾರೆ. ಶಮಿತಾ ಶೆಟ್ಟಿ ಚಾರ್ಮ್ ಗೆ ಸನ್ನಿ ಶಾ ಕ್ ಕೊಡ್ತಾರಾ?? ಕಾದು ನೋಡಬೇಕಿದೆ.

Leave a Comment