ಶಬರಿಗಿರಿವಾಸ ಅಯ್ಯಪ್ಪನಿಗೆ ಅತ್ಯಮೂಲ್ಯ ಕಾಣಿಕೆ ಸಮರ್ಪಿಸಿದ ಭಕ್ತ!!

Entertainment Featured-Articles News
58 Views

ಶಬರಿಮಲೆ ಅಯ್ಯಪ್ಪ ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿದ್ದು, ಅನಂತ ಭಕ್ತಕೋಟಿಯು ಅಯ್ಯಪ್ಪನ ದರ್ಶನವನ್ನು ಪಡೆಯಲು ಮಾಲೆ ಧಾರಣೆ ಮಾಡಿ, 41 ದಿನಗಳ ಕಠಿಣ ವ್ರತವನ್ನು ಆಚರಿಸಿ ಶಬರಿಗಿರಿಯನ್ನು ಕಾಲ್ನಡಿಗೆಯಲ್ಲಿ ಏರಿ, ಹದಿನೆಂಟು ಮೆಟ್ಟಿಲುಗಳ ಮೇಲೆ ಅಡಿಯಿಟ್ಟು, ಶಬರಿಮಲೆ ಗಿರಿವಾಸ ಸ್ವಾಮಿ ಅಯ್ಯಪ್ಪನ ದಿವ್ಯ ದರ್ಶನವನ್ನು ಮಾಡಿ ಪುನೀತರಾಗುವರು. ಭಕ್ತರು ಆ ದಿವ್ಯ ಸಾನಿಧ್ಯದಲ್ಲಿ ತಮ್ಮನ್ನು ತಾವು ಮರೆತು ಭಕ್ತಿಯಲ್ಲಿ ತೇಲುವರು, ಅಯ್ಯಪ್ಪನ ನಾಮ‌ಸ್ಮರಣೆಯಲ್ಲಿ ಕಳೆದು ಹೋಗುವರು.

ಭಕ್ತರ ಕೋರಿಕೆಗಳನ್ನು ನೆರವೇರಿಸುವ ಅಯ್ಯಪ್ಪನಿಗೆ ಆಂಧ್ರಪ್ರದೇಶದ ಭಕ್ತರೊಬ್ಬರು ವಜ್ರದ ಕಿರೀಟವನ್ನು ತಮ್ಮ ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಈ ಮೂಲಕ ಅವರು ತಮ್ಮ ಹರಕೆಯನ್ನು ಪೂರ್ತಿ ಮಾಡಿದ್ದಾರೆ. ಕರ್ನೂಲು ಜಿಲ್ಲೆಯ ನಂದ್ಯಾಲದ ಮಾರಂ ವೆಂಕಟಸುಬ್ಬಯ್ಯ ನವರು ಶಬರಿಮಲೆಯ ಅಯ್ಯಪ್ಪನಿಗೆ ವಜ್ರದ ಹೊದಿಕೆಯ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ಕೇರಳದ ಹೈಕೋರ್ಟ್ ನ ವಕೀಲರೊಬ್ಬರ ನೆರವಿನೊಂದಿಗೆ ಮಾರಂ ವೆಂಕಟಸುಬ್ಬಯ್ಯ ಶುಕ್ರವಾರ ಕಿರೀಟವನ್ನು ದೇಗುಲದ ಮುಖ್ಯ ಅರ್ಚಕರಿಗೆ ಸಮರ್ಪಿಸಿದ್ದಾರೆ.

ವೆಂಕಟಸುಬ್ಬಯ್ಯ ಅವರು ಶಬರಿಮಲೆಯ ಅಯ್ಯಪ್ಪನ ಭಕ್ತರಾಗಿದ್ದಾರೆ. ಅವರು ಕಳೆದ ಹಲವು ವರ್ಷಗಳಿಂದಲೂ ಶಬರಿಮಲೆಗೆ ಬಂದು‌ ಅಯ್ಯಪ್ಪನ ದರ್ಶನವನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಅವರಿಗೆ ಕೊರೊನಾ ಸೋಂಕು ತಗುಲಿ, ಸೋಂಕಿನ ತೀ ವ್ರ ತೆ ಹೆಚ್ಚಿದ ಕಾರಣ ಹದಿನೈದು ದಿನಗಳ ಕಾಲ ಅವರು ಐಸಿಯು ನಲ್ಲಿ ಇದ್ದು ಚಿಕಿತ್ಸೆ ಪಡೆದು, ಸಾ ವು ಬದುಕಿನ ನಡುವೆ ಒಂದು ಹೋ ರಾ ಟವನ್ನೇ ನಡೆಸಿದ್ದರು. ಆಗಲೇ ಅವರು ಚೇತರಿಸಿಕೊಂಡಲ್ಲಿ ಅಯ್ಯಪ್ಪನಿಗೆ ವಜ್ರದ ಕಿರೀಟ ನೀಡುವ ಹರಕೆ ಮಾಡಿಕೊಂಡಿದ್ದರು.

ಈಗ ಹರಕೆ ಮಾಡಿಕೊಂಡಂತೆ ಅವರು ಶಬರಿಗಿರಿಗೆ ಬಂದು, ಅಯ್ಯಪ್ಪನಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದ್ದಾರೆ. ಅವರು ನಾನು ಅಯ್ಯಪ್ಪನ ಆಶೀರ್ವಾದದಿಂದಲೇ ಬದುಕಿ ಉಳಿದಿರುವುದು ಎನ್ನುವ ಮಾತನ್ನು ಹೇಳಿರುವ ವೆಂಕಟಸುಬ್ಬಯ್ಯ ನವರು ತಮ್ಮ ಭಕ್ತಿಯ ಕಾಣಿಕೆಯನ್ನು ದೇವರಿಗೆ ಸಮರ್ಪಣೆ ಮಾಡುವ ಮೂಲಕ‌ ಸಂತೋಷ ಪಟ್ಟಿದ್ದಾರೆ. ಅವರು ದೇವರಿಗೆ ಕಿರೀಟ ಸಮರ್ಪಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Leave a Reply

Your email address will not be published. Required fields are marked *