ಶನಿ ಗ್ರಹ ದೋಷ ನಿವಾರಣೆಗೆ ಇದೊಂದು ಸರಳ ಉಪಾಯ ಮಾಡಿ ನೋಡಿ: ಸಮಸ್ಯೆಗೆ ಸರಳ ಪರಿಹಾರ ಇದು!

Entertainment Astrology tips Featured-Articles Movies ಜೋತಿಷ್ಯ

ಹಿಂದೂಗಳು ತುಳಸಿ ಗಿಡವನ್ನು ಪೂಜಿಸುತ್ತಾರೆ. ಇದಲ್ಲದೇ ತುಳಸಿ ಸಸ್ಯವನ್ನು ದೈವಿಕ ಔಷಧೀಯ ಸಸ್ಯ ಎಂದೂ ಕರೆಯುತ್ತಾರೆ. ಏಕೆಂದರೆ ಈ ತುಳಸಿ ಸಸ್ಯವು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಸಹಾ ಹೊಂದಿದೆ. ತುಳಸಿ ಗಿಡಗಳು ಸಾಮಾನ್ಯವಾಗಿ ಮೂರು ವಿಧಗಳಲ್ಲಿ ಇರುತ್ತವರೆ. ಅವು ಹಸಿರು ಎಲೆಗಳನ್ನು ಹೊಂದಿರುವ ರಾಮ ತುಳಸಿ. ಕೃಷ್ಣ ತುಳಸಿ, ಇದು ನೇರಳೆ ಬಣ್ಣದ ಎಲೆಗಳನ್ನು ಹೊಂದಿದೆ. ವರ್ಣ ತುಳಸಿ, ಇದು ವನ್ಯ ವಿಧವಾಗಿದ್ದು, ತೆಳು ಹಸಿರು ಎಲೆಗಳನ್ನು ಹೊಂದಿದೆ. ನಮ್ಮ ಪೂರ್ವಜರು ಅಂದಿನಿಂದಲೂ ತುಳಸಿ ಗಿಡವನ್ನು ಪೂಜಿಸುತ್ತಾ ಬಂದಿದ್ದಾರೆ ಮತ್ತು ತುಳಸಿ ಗಿಡವನ್ನು ವಿವಿಧ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಿದ್ದಾರೆ.

ಹಿಂದೂಗಳು ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು, ಬೆಳೆಸಿ ಪೂಜಿಸುತ್ತಾರೆ. ಜೊತೆಗೆ ತುಳಸಿ ಗಿಡವನ್ನು ಮನೆಯ ಹೊರಗೆ ಇಡುವುದರಿಂದ ತುಳಸಿ ಗಿಡವು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸದಂತೆ ತಡೆಯುತ್ತದೆ ಎನ್ನಲಾಗಿದೆ. ಆದರೆ ಶನಿಯಿಂದ ಎದುರಾಗುವ ಸಮಸ್ಯೆಗಳು ಅಥವಾ ಅನಿಷ್ಟವನ್ನು ಸಹಾ ದೂರವಾಗಿಸಲು ತುಳಸಿ ಗಿಡವನ್ನೂ ಪೂಜಿಸಬೇಕು ಎನ್ನಲಾಗಿದೆ. ಹಾಗಾದರೆ ಶನಿ ದೋಷ ನಿವಾರಣೆಗೆ ಯಾವ ತುಳಸಿ ಗಿಡವನ್ನು ಪೂಜಿಸಬೇಕು ಎಂದರೆ, ಕೃಷ್ಣ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುವುದರಿಂದ ಲಕ್ಷ್ಮಿಯ ಅನುಗ್ರಹವೂ ಸಿಗುತ್ತದೆ ಎನ್ನಲಾಗಿದೆ.

ಸೂರ್ಯೋದಯದ ಸಮಯದಲ್ಲಿ ತುಳಸಿ ಮಾಲೆಗಳನ್ನು ಧರಿಸಿ, ವಿಷ್ಣುವನ್ನು ಪೂಜಿಸುವುದರಿಂದ ಪುಣ್ಯವು ಸಿಗುತ್ತದೆ. ಹಾಗೆಯೇ ಶನಿ ಗ್ರಹ ದೋಷ ಇರುವವರು, ಆಯುರ್ಧಾಮ ಸಮಸ್ಯೆ ಇರುವವರು, ಆರೋಗ್ಯ ಸಮಸ್ಯೆ ಇರುವವರು, ಶನಿಗ್ರಹದ ತೊಂದರೆಗಳು ದೂರವಾಗಬೇಕಾದರೆ ಕೃಷ್ಣ ತುಳಸಿಗೆ ಪೂಜೆ ಮಾಡುವುದು ಒಳ್ಳೆಯದು ಎಂದು ಹೇಳಲಾಗಿದೆ. ಅವರು ಕೃಷ್ಣ ತುಳಸಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶನಿಗ್ರಹದ ದೋಷಗಳು ದೂರವಾಗುತ್ತವೆ ಎಂದು ಹೇಳಲಾಗಿದೆ.

Leave a Reply

Your email address will not be published.