ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಪಾರು ಸೀರಿಯಲ್ ಇತ್ತೀಚಿಗೆ ತನ್ನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುವುದು ಮಾತ್ರವೇ ಅಲ್ಲದೇ ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗಿದೆ. ಅರಸನ ಕೋಟೆಯ ಮಹಾರಾಣಿಯಂತಹ ಅಖಿಲಾಂಡೇಶ್ವರಿಗೆ ಇಷ್ಟ ಇಲ್ಲದೇ ಹೋದರೂ ಪಾರು ಆದಿಯ ಪತ್ನಿಯಾಗಿ ಅರಸನ ಕೋಟೆಯ ಹಿರಿ ಸೊಸೆಯಾಗಿ ಬಂದಾಗಿದೆ. ವೀರಣ್ಣನ ಸಲಹೆಯಂತೆ ಅಖಿಲಾಂಡೇಶ್ವರಿ ಪಾರು ಅರಸನ ಕೋಟೆಗೆ ತಕ್ಕ ಸೊಸೆ ಎಂದು ಸಾಬೀತು ಮಾಡಿಕೊಳ್ಳಲು ಕೆಲವು ಟಾಸ್ಕ್ ನೀಡಿದ್ದರು.
ಆದರೆ ಪಾರು ವಿನ ಮುಗ್ಧತೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಅಖಿಲಾಂಡೇಶ್ವರಿಯ ಶತೃಗಳು ಪಾರುವನ್ನು ಸಂಕಷ್ಟದ ಮೋಸದ ಜಾಲದೊಳಗೆ ಸಿಲುಕಿಸಿಯಾಗಿದೆ. ಅರಸನ ಕೋಟೆಯ ಹಾಗೂ ಅವರ ವ್ಯಾಪಾರಗಳ ಘನತೆಯನ್ನು ಹಾಳು ಮಾಡುವ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಅನಾಥ ಮಕ್ಕಳ ನೆರವಿಗೆ ಎಂದು ಪಾರುವನ್ನು ನಂಬಿಸಿ, ಮೋಸ ಮಾಡಿ ಆದಿತ್ಯನ ರೈವಲ್ ಕಂಪನಿಯ ಜಾಹೀರಾತಿನಲ್ಲಿ ಪಾರು ಬ್ರಾಂಡ್ ಅಂಬಾಸಿಡರ್ ರೀತಿ ನಟಿಸುವಂತೆ ಮಾಡಿದ ಶತೃಗಳು, ಅದಕ್ಕೆ ಪಾರು 60 ಲಕ್ಷ ಸಂಭಾವನೆ ಪಡೆದಿದ್ದಾಳೆ ಎಂದು ಸಾಬೀತು ಮಾಡಿದ್ದಾರೆ.
ಸೊಸೆಯ ಸಾಮರ್ಥ್ಯ ಸಾಬೀತು ಮಾಡಲು ತನ್ನೆಲ್ಲಾ ಅಧಿಕಾರವನ್ನು ಅಖಿಲಾಂಡೇಶ್ವರಿ ಪಾರು ಗೆ ನೀಡಿದ್ದರು. ಕೊಟ್ಟ ಟಾಸ್ಕ್ ನ ಭಾಗವಾಗಿ ಪಾರು ಕಂಪನಿಯಲ್ಲಿ 300 ಕೋಟಿ ಹೂಡಿಕೆದಾರರನ್ನು ಸೆಳೆದಿದ್ದಳು. ಆದರೆ ಶತೃಗಳ ಆಟದ ಫಲ ಎನ್ನುವ ಹಾಗೆ ಈಗ ಪಾರು ಸಂಕಷ್ಟಕ್ಕೆ ಸಿಲುಕಿದ್ದು, ಹೂಡಿಕೆದಾರರು ಮನೆಗೆ ಬಂದು ಅಖಿಲಾಂಡೇಶ್ವರಿ ಮುಂದೆಯೇ ಪಾರುವನ್ನು ಹೀಯಾಳಿಸಿ, ಹೂಡಿಕೆ ಹಿಂದಕ್ಕೆ ಪಡೆಯುವ ವಿಚಾರವನ್ನು ಹೇಳಿದ್ದಾರೆ. ಅಲ್ಲದೇ ಪಾರು ಬಗ್ಗೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ಹಾಗಾಗಿದೆ. ಅಖಿಲಾಂಡೇಶ್ವರಿ ತನ್ನ ಅಧಿಕಾರ ಮರಳಿ ಪಡೆದಿದ್ದಾರೆ.
ದಮಯಂತಿ ಮತ್ತು ರಾಣನ ಕುತಂತ್ರ ಫಲಿಸಿದೆ. ಪಾರು ಅ ಪ ರಾ ಧಿ ಸ್ಥಾನದಲ್ಲಿ ನಿಂತಿದ್ದಾಳೆ. ಮಗಳ ತಪ್ಪಿನ ಫಲದಿಂದ ಸ್ವಾಭಿಮಾನಿಯಾದ ಡ್ರೈವರ್ ಹನುಮಂತು ಅಖಿಲಾಂಡೇಶ್ವರಿ ಮುಂದೆ ಅವಮಾನ ಪಡುವಂತೆ ಆಗಿದೆ. ಪಾರು ತಪ್ಪು ಮಾಡಿದ್ದಾಳೆ ಎನ್ನುವ ಸಾಕಷ್ಟು ಸಾಕ್ಷಿಗಳು ಎಲ್ಲರ ಕಣ್ಮುಂದೆಯೇ ಇದೆ. ಜನನಿ ಕೂಡಾ ಪಾರು ಪರ ಇಲ್ಲ, ಆದಿ ಕೂಡಾ ಮುಂದೆ ಏನು ಮಾಡಲಿದ್ದಾನೆ?? ಹಾಗಾದ್ರೆ ಈ ಎಲ್ಲಾ ಸಂಕಷ್ಟಗಳಿಂದ ಪಾರು ಪಾರಾಗುವುದು ಹೇಗೆ?? ಪಾರುವಿನ ರಕ್ಷಣೆಗೆ ಯಾರು ಬರ್ತಾರೆ? ಪಾರು ತಾನು ನಿರಪರಾಧಿ ಅಂತ ಹೇಗೆ ಸಾಬೀತು ಮಾಡ್ತಾಳೆ ಅನ್ನೋದು ಪ್ರೇಕ್ಷಕರ ಪ್ರಶ್ನೆಗಳಾಗಿವೆ.