ವ್ಯವಹಾರದಲ್ಲಿ ಯಶಸ್ಸು ಬೇಕಿದ್ದರೆ ಚಾಣಾಕ್ಯನ ಈ ಪಂಚ ನೀತಿಗಳನ್ನು ಮರೆಯದೇ ಪಾಲಿಸಿ..

Written by Soma Shekar

Published on:

---Join Our Channel---

ಸಫಲತೆ ಮತ್ತು ಸುಖವನ್ನು ಪಡೆಯುವುದಕ್ಕಾಗಿ ಮನುಷ್ಯ ತನ್ನ ಜೀವನವೆಲ್ಲಾ ಸಾಕಷ್ಟು ಪ್ರಯತ್ನವನ್ನು ಪಡುತ್ತಾನೆ. ಆದರೆ ಅನೇಕ ಬಾರಿ ಮನುಷ್ಯ ಇಷ್ಟೆಲ್ಲಾ ಶ್ರಮ ಪಟ್ಟರೂ ಸಹಾ ಯಶಸ್ಸು ಸಿಗುವುದಿಲ್ಲ. ಆದರೆ ಇನ್ನೂ ಕೆಲವರು ಹೆಚ್ಚು ಶ್ರಮ ಪಡೆದೆಯೇ ಜೀವನದಲ್ಲಿ ಯಶಸ್ಸನ್ನು ತಮ್ಮದಾಗಿಸಿಕೊಂಡು ಬಿಡುತ್ತಾರೆ. ಮನುಷ್ಯನಿಗೆ ಆತನ ಜೀವನದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಸಫಲತೆಯ ಸರಿಯಾದ ಸಂಪೂರ್ಣ ಮಾಹಿತಿ ದೊರೆಯದ ಕಾರಣ ಅವರಿಗೆ ಸಫಲತೆ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆಚಾರ್ಯ ಚಾಣಾಕ್ಯನ ನೀತಿಯು ಬಹಳ ಉಪಯುಕ್ತ ಎನ್ನಲಾಗಿದೆ.

ಇಂದು ಯಶಸ್ಸನ್ನು ಪಡೆಯಲು ಆಚಾರ್ಯ ಚಾಣಾಕ್ಯನು ಹೇಳಿರುವ ಕೆಲವೊಂದು ನೀತಿ ಸೂತ್ರಗಳ ಬಗ್ಗೆ ನಾವಿಂದು ತಿಳಿಯೋಣ. ಅಂದು ಆಚಾರ್ಯ ಚಾಣಾಕ್ಯನು ಹೇಳಿರುವ ಈ ಸಾಲುಗಳು ಇಂದಿಗೂ ಸಹಾ ಅನೇಕರಿಗೆ ಮಾರ್ಗದರ್ಶನ ನೀಡುವ ಮಾರ್ಗಸೂಚಿಗಳಾಗಿವೆ. ಅನೇಕರು ಈ ನೀತಿಗಳನ್ನು ತಮ್ಮ ಜೀವನದಲ್ಲಿ ಸಹಾ ಅಳವಡಿಸಿಕೊಂಡು ಯಶಸ್ಸನ್ನು ಪಡೆದುಕೊಂಡಿದ್ದಾರೆ. ಅಂತಹ ಪ್ರಮುಖ ನೀತಿ ಸೂತ್ರಗಳು ಯಾವುವು ಎನ್ನುವುದನ್ನು ನಾವು ಇಂದು ಅರ್ಥ ಮಾಡಿಕೊಳ್ಳೋಣ.

ಯಾವುದೇ ಕೆಲಸವನ್ನು ಮಾಡುವ ಮುನ್ನ ಅದನ್ನು ಅರ್ಥ ಮಾಡಿಕೋ : ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು, ಯಾವುದೇ ಒಂದು ಹೊಸ ಕೆಲಸವನ್ನು ಆರಂಭಿಸುವ ಮೊದಲು ತನ್ನನ್ನು ತಾನೇ ಈ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. 1. ನಾನು ಈ ಕೆಲಸವನ್ನು ಏಕೆ ಮಾಡುತ್ತಿದ್ದೇನೆ?? 2. ಇದರ ಫಲಿತಾಂಶ ಏನಾಗುತ್ತದೆ?? ಮತ್ತು ನಾನು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆಯೇ? ಈ ಪ್ರಶ್ನೆಗಳ ಬಗ್ಗೆ ಚಿಂತಿಸಿ, ಈ ಮೂರು ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರವನ್ನು ಪಡೆದಾಗ ಮಾತ್ರ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿ.

ಕೆಲಸವನ್ನು ಅರ್ಧದಲ್ಲೇ ಬಿಡಬೇಡಿ: ಆಚಾರ್ಯ ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ಮಾಡುವ ಯಾವುದೇ ಕೆಲಸದಲ್ಲಿಯೇ ಆಗಲಿ ಅಲ್ಲೊಂದು ಅಡಚಣೆ ಖಂಡಿತವಾಗಿಯೂ ಇರುತ್ತದೆ. ಆದರೆ ನೀವು ಯಾವುದೇ ಕೆಲಸವನ್ನು ಆರಂಭಿಸಿದಾಗ ನಿಮಗೆ ಎದುರಾಗಬಹುದಾದ ಅಡೆತಡೆಗಳಿಗೆ ಹೆದರಿ ಅದನ್ನು ಮಧ್ಯದಲ್ಲೇ ಬಿಡಬೇಡಿ. ಇಲ್ಲದೇ ಹೋದಲ್ಲಿ ಎಲ್ಲಾ ಅರ್ಥಹೀನ ಎನಿಸಿಬಿಡುತ್ತದೆ.

ಯಶಸ್ಸಿನ ಗುಟ್ಟನ್ನು ಯಾರಿಗೂ ಹೇಳಬೇಡಿ: ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಯಶಸ್ಸಿನ ರಹಸ್ಯವನ್ನು ಯಾವುದೇ ಕಾರಣಕ್ಕೂ ಬೇರೆಯವರ ಬಳಿ ಹೇಳಬಾರದು. ಅವನು ನಿಮ್ಮ ಜೀವನದಲ್ಲಿ ಬಹು ಮುಖ್ಯ ಸ್ನೇಹಿತನೇ ಆಗಿದ್ದರೂ ಹೇಳಬಾರದು. ನಿಮ್ಮ ಯಶಸ್ಸಿನ ಗುಟ್ಟನ್ನು ಬೇರೆಯವರಿಗೆ ಹೇಳಿದರೆ ಅವರೂ ಅದೇ ಹಾದಿಯಲ್ಲಿ ನಡೆದು ಯಶಸ್ಸನ್ನು ಸಾಧಿಸುತ್ತಾರೆ.

ಅತಿಯಾದ ಪ್ರಾಮಾಣಿಕತೆ ಹಾನಿಯನ್ನು ಉಂಟು ಮಾಡಬಹುದು : ಆಚಾರ್ಯ ಚಾಣಕ್ಯನ ಪ್ರಕಾರ, ಒಬ್ಬರು ತುಂಬಾ ಪ್ರಾಮಾಣಿಕರಾಗಿರಬಾರದು. ಏಕೆಂದರೆ, ಪ್ರಾಮಾಣಿಕರೇ ಯಾವಾಗಲೂ ಮೊದಲು ಮೋಸ ಹೋಗುತ್ತಾರೆ. ನೀವು ಉದ್ಯೋಗ ಮಾಡುವ ಕಡೆಯಲ್ಲಿ ತುಂಬಾ ಪ್ರಾಮಾಣಿಕವಾಗಿರಲು ಎಂದೂ ಕೂಡಾ ಪ್ರಯತ್ನವನ್ನು ಮಾಡಬೇಡಿ. ಏನಾದರೂ ತಪ್ಪಾಗಿದೆ ಎಂದು ನೀವು ಭಾವಿಸಿದರೆ ಅದನ್ನು ನಿಮ್ಮಲ್ಲೇ ಇರಿಸಿ, ನಿಮ್ಮ ಸ್ವಂತ ಆಸಕ್ತಿಯ ಕಡೆ ಗಮನ ನೀಡಿ‌. ನಿಮ್ಮ ಕಾಲಿಗೆ ಕೊಡಲಿಯಿಂದ ಹೊಡೆದುಕೊಂಡು ಪ್ರಾಮಾಣಿಕತೆಯನ್ನು ಮೆರೆಯುವ ಅಗತ್ಯ ಇಲ್ಲ.

ಪ್ರತಿಯೊಂದು ಸಂಬಂಧದ ಹಿಂದೆಯೂ ಸ್ವಾರ್ಥ ಇರುತ್ತದೆ ಎಂಬುದನ್ನು ಮರೆಯಬೇಡಿ: ಆಚಾರ್ಯ ಚಾಣಕ್ಯನ ಪ್ರಕಾರ ಪ್ರತಿಯೊಂದು ಸಂಬಂಧದ ಹಿಂದೆಯೂ ಒಂದಷ್ಟು ಸ್ವಾರ್ಥ ಇದ್ದೇ ಇರುತ್ತದೆ. ಇದು ಕೆಲಸದ ಸ್ಥಳಕ್ಕೆ ಮಾತ್ರವಲ್ಲದೇ ನಮ್ಮ ವೈಯಕ್ತಿಕ ಜೀವನಕ್ಕೂ ಸಹಾ ಅನ್ವಯಿಸಬಹುದು. ಅದು ನಮ್ಮ ಸಹೋದ್ಯೋಗಿಗಳು, ಸ್ನೇಹಿತರು ಅಥವಾ ಸಂಬಂಧಿಕರು ಹೀಗೆ ಎಲ್ಲರ ಸಂಬಂಧದ ಅಡಿಪಾಯವೂ ಒಂದಲ್ಲ ಒಂದು ಸ್ವಾರ್ಥದ ಮೇಲೆ ನಿಂತಿದ್ದು, ಮೋಸ ಹೋಗದಂತೆ ಎಚ್ಚರಿಕೆಯಿಂದ ಇರಿ.

Leave a Comment