ವ್ಯಕ್ತಿಯೊಬ್ಬರ ಫಿಟ್ನೆಸ್ ಟ್ರೈನರ್ ಆದ ಕಾಂಗರೂ: ಮಾಡಿಸಿತು ನಿಲ್ಲಿಸದೇ ಪುಷ್ ಅಪ್ಸ್, ವೈರಲ್ ವೀಡಿಯೋ

Entertainment Featured-Articles News Viral Video

ದೈಹಿಕವಾಗಿ ಸದೃಢವಾಗಿರಬೇಕಾಗಿರುವುದು ಎಷ್ಟು ಮುಖ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕಾಳಜಿಯಾಗಿದೆ‌. ಬಾಡಿ ಫಿಟ್ನೆಸ್ ಎನ್ನುವುದು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಆರೋಗ್ಯ ಉತ್ತಮವಾಗಿದ್ದರೆ, ದೈಹಿಕ ಕ್ಷಮತೆ ಕೂಡಾ ಉತ್ತಮವಾಗಿರುತ್ತದೆ ಎನ್ನುವ ಜಾಗೃತಿ ಜನರಲ್ಲಿ ಮೂಡುತ್ತಿದ್ದು, ಈ ನಿಟ್ಟಿನಲ್ಲಿ ಜನರು ಕೂಡಾ ಫಿಸಿಕಲ್ ಫಿಟ್ನೆಸ್ ಗಾಗಿ ಯೋಗ, ವ್ಯಾಯಾಮ, ಜಿಮ್ ಗಳಲ್ಲಿ ವರ್ಕೌಟ್ ಹೀಗೆ ಹತ್ತು ಹಲವು ವಿಧಾನಗಳನ್ನು ಬಳಸಿಕೊಂಡು ತಮ್ಮ ದೇಹಾರೋಗ್ಯದ ಕಾಳಜಿಯನ್ನು ವಹಿಸುತ್ತಿದ್ದಾರೆ.‌

ದೈಹಿಕ ಫಿಟ್ನೆಸ್ ಗಾಗಿ ಅನೇಕರು ತಮ್ಮ ಪರ್ಸನಲ್ ಟ್ರೈನರ್ ಗಳನ್ನು ಕೂಡಾ ಹೊಂದಿರುತ್ತಾರೆ. ಅವರಿಂದ ಅಗತ್ಯ ಇರುವ ಸಲಹೆ, ಸೂಚನೆಗಳನ್ನು ಪಡೆಯುತ್ತಾರೆ. ಒಂದು ವೇಳೆ ನಿಮ್ಮ ಈ ಪರ್ಸನಲ್ ಟ್ರೈನಲ್ ಒಂದು ಪ್ರಾಣಿಯಾದರೆ ಹೇಗಿರುತ್ತದೆ?? ಬಹುಶಃ ಇದೊಂದು ತಮಾಷೆಯ ಪ್ರಶ್ನೆ ಅನಿಸಿರಬಹುದು ಅಲ್ಲವೇ ? ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಒಂದು ವೀಡಿಯೋ ವೈರಲ್ ಆಗಿ ಜನರ ಗಮನವನ್ನು ಸೆಳೆದಿದೆ.

ವೈರಲ್ ಆಗಿರುವ ವೀಡಿಯೋವನ್ನು ನೋಡಿದಾಗ ವ್ಯಕ್ತಿಯೊಬ್ಬರು ಪುಷ್ ಅಪ್ಸ್ ಮಾಡುತ್ತಿದ್ದು, ಈ ವೇಳೆ ಅವರಿಗೆ ಸಹಾಯವನ್ನು ಮಾಡಲು ಒಂದು ಕಾಂಗರೂ ಅವರ ಬಳಿಗೆ ಬಂದಿರುವುದನ್ನು ನಾವು ನೋಡಬಹುದಾಗಿದೆ. 28 ಸೆಕೆಂಡ್ ಗಳ ಈ ಸುಂದರವಾದ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಪರ್ಸನಲ್ ಟ್ರೈನರ್ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಒಂದು ಕಾಂಗರೂ ತನ್ನ ಮಾಲೀಕರ ಬಾಡಿ ಫಿಟ್ನೆಸ್ ಕಡೆಗೆ ಇಷ್ಟೊಂದು ಗಮನ ನೀಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ತಾನ ಕುಣಿದಾಟ, ನೆಗೆದಾಟವನ್ನು ಬಿಟ್ಟು ಪುಟ್ಟ ಕಾಂಗರೂ ತನ್ನ ಮಾಲೀಕ ಪುಷ್ ಅಪ್ಸ್ ಮಾಡುವುದನ್ನು ನೋಡಿ, ಅಲ್ಲಿಗೆ ಬಂದು ಆತನ ಕುತ್ತಿಗೆಯ ಮೇಲೆ ಕೈಯಿಟ್ಡು ಪ್ರೆಶರ್ ಹಾಕಿ ಪುಷ್ ಅಪ್ಸ್ ಮಾಡಿಸುತ್ತದೆ. ಆ ವ್ಯಕ್ತಿ ಮೇಲೆ ಏಳಲು ಪ್ರಯತ್ನ ಮಾಡುವಾಗಲೂ ಓಡಿ ಬಂದು, ಆತನನ್ನು ಹಿಡಿದು ಪುಷ್ ಅಪ್ಸ್ ಮಾಡಿಸುವ ಕಾಂಗರೂವಿನ ಈ ವರ್ತನೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.

ಸುಶಾಂತ್ ನಂದ ಅವರು ಪೋಸ್ಟ್ ಮಾಡಿದ ಈ ವೀಡಿಯೋ ಯಾವ ಸ್ಥಳದ್ದು ಎನ್ನುವುದು ತಿಳಿದಿಲ್ಲವಾದರೂ, ವೀಡಿಯೋ ಮಾತ್ರ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅನೇಕ ಮಂದಿ ವೀಡಿಯೋ ನೋಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. 33 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಜನರು ಲೈಕ್ ನೀಡಿದ್ದು, ನೂರಾರು ಜನರು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಕಾಮೆಂಟ್ ಮಾಡಿದವರೆಲ್ಲಾ ಕಾಂಗರೂವನ್ನು ಹಾಡಿ ಹೊಗಳಿದ್ದಾರೆ.

Leave a Reply

Your email address will not be published.