ವೈವಾಹಿಕ ಜೀವನಕ್ಕೆ ಅಡಿಯಿಡಲು ತ್ರಿನಯನಿ ಖ್ಯಾತಿಯ ನಟಿ ಆಶಿಕಾ ಸಜ್ಜು:ಅವರು ಮದುವೆಯಾಗಲಿರುವ ಹುಡುಗ ಇವರೇ ನೋಡಿ

Written by Soma Shekar

Published on:

---Join Our Channel---

ಕಳೆದ ಒಂದು ವರ್ಷದಿಂದಲೂ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಲೋಕದ ಅನೇಕ ಕಲಾವಿದರು ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಒಬ್ಬರಾದ ನಂತರ ಮತ್ತೊಬ್ಬರು ಸಿಹಿಸುದ್ದಿಯನ್ನು ನೀಡುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಡಬ್ಬಿಂಗ್ ಸೀರಿಯಲ್ ತ್ರಿನಯನಿಯಲ್ಲಿ ನಾಯಕಿಯಾಗಿರುವ ಆಶಿಕಾ ಪಡುಕೋಣೆ ಅವರು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದು, ಅವರ ಮದುವೆ ಉಡುಪಿಯಲ್ಲಿ ಬಹಳ ಸಂಭ್ರಮದಿಂದ ನಡೆಯಲಿದೆ ಎನ್ನುವ ಮಾಹಿತಿಯೊಂದು ಈಗ ಸುದ್ದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ವಿವಾಹಕ್ಕೆ ಮುಂಗಡವಾಗಿಯೇ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಧಾರಾವಾಹಿ ತ್ರಿನಯನಿ. ಇದರಲ್ಲಿ ನಾಯಕ ಹಾಗೂ ನಾಯಕಿಯ ಪಾತ್ರಗಳನ್ನು ಕನ್ನಡದವರೇ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ ಬಹುತೇಕ ಕನ್ನಡದ ಕಲಾವಿದರು ಎಲ್ಲಾ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವುದು ವಿಶೇಷವಾಗಿದೆ.

ಅದೇ ರೀತಿಯಲ್ಲಿ ತ್ರಿನಯನಿ ಧಾರಾವಾಹಿಯಲ್ಲಿ ನಾಯಕ ವಿಶಾಲ್ ಪಾತ್ರದಲ್ಲಿ ಚಂದು ಗೌಡ ಹಾಗೂ ನಾಯಕಿ ನಯನಿ ( ತ್ರಿ ನಯನಿ) ಪಾತ್ರದಲ್ಲಿ ಆಶಿಕಾ ಪಡುಕೋಣೆ ಅವರು ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಜನಪ್ರಿಯತೆಯನ್ನು ಪಡೆದು ಕೊಂಡು, ಅಗ್ರಮಾನ್ಯ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಈ ಸೀರಿಯಲ್ ನ ನಟ ನಟಿಗೆ ಈಗ ಕನ್ನಡದಲ್ಲಿ ಕೂಡಾ ಜನಪ್ರಿಯತೆ ಹೆಚ್ಚಿದೆ. ಇದಕ್ಕೆ ಕಾರಣವಾಗಿದ್ದು ಲಾಕ್ ಡೌನ್.

ಹೌದು, ಲಾಕ್ ಡೌನ್ ಅವಧಿಯಲ್ಲಿ ಹಲವು ಧಾರಾವಾಹಿಗಳ ಪ್ರಸಾರಕ್ಕೆ ಬ್ರೇಕ್ ಬಿದ್ದಾಗ, ಅನ್ಯ ಭಾಷೆಯ ಜನಪ್ರಿಯ ಧಾರಾವಾಹಿಗಳನ್ನು ಡಬ್ಬಿಂಗ್ ಮೂಲಕ ಕನ್ನಡಕ್ಕೆ ತರಲಾಯಿತು. ಆಗ ತ್ರಿನಯನಿ ಧಾರಾವಾಹಿ ಕೂಡಾ ಕನ್ನಡದಲ್ಲಿ ತನ್ನ ಪ್ರಸಾರವನ್ನು ಆರಂಭಿಸಿತು. ತ್ರಿನಯನಿ ಬಹಳ ಕಡಿಮೆ ಅವಧಿಯಲ್ಲೇ ಕನ್ನಡ ಜನರ ಮೆಚ್ಚುಗೆಯನ್ನು ಪಡೆದುಕೊಂಡು, ಆಶಿಕಾ ಪಡುಕೋಣೆ ಅವರಿಗೆ ಇಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ.

ಆಶಿಕಾ ಪಡುಕೋಣೆ ಅವರು ವೈವಾಹಿಕ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದು, ಮುಂದಿನ ಅಕ್ಟೋಬರ್ ತಿಂಗಳಲ್ಲಿ ಅವರ ಮದುವೆ ನಡೆಯಲಿದೆ. ಕನ್ನಡತಿಯಾದ ಆಶಿನಾ ಅವರು ಚೇತನ್ ಶೆಟ್ಟಿ ಎನ್ನುವ ಕನ್ನಡದ ಹುಡುಗನನ್ನೇ ಮದುವೆಯಾಗುತ್ತಿದ್ದಾರೆ. ಬೆಂಗಳೂರಿನವರಾದ ಚೇತನ್ ಶೆಟ್ಟಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಮದುವೆ ಹಾಗೂ ತಮ್ಮ ಭಾವಿ ಪತಿಯ ಬಗ್ಗೆ ಬಹಳ ಸಂತೋಷದಿಂದ ಆಶಿಕಾ ಅವರು ಮಾತನಾಡಿದ್ದಾರೆ.

ತಾನು ಮದುವೆಯಾಗಲು ಬಯಸುತ್ತಿರುವ ಹುಡುಗ ಬಹಳ ಮೃದು ಸ್ವಭಾವದವರಾಗಿದ್ದು, ಅವರು ನನ್ನಂತಹ ಹುಡುಗಿಯನ್ನು ಮದುವೆಯಾಗಲು ಬಯಸಿದ್ದರು. ಅಲ್ಲದೇ ಮದುವೆಯ ನಂತರವೂ ಕೂಡ ಅವರು ನಾನು ನಟನೆ ಮುಂದುವರೆಸಲು ಇಷ್ಟ ಪಡುತ್ತಾರೆ ಅವರು ಈ ವಿಚಾರದಲ್ಲಿ ನನಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ನನ್ನನ್ನು ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳನ್ನು ಆಡಿದ್ದಾರೆ.

Leave a Comment