ವೇದಿಕೆ ಮೇಲೆ ಭಾವುಕಳಾಗಿ ಗಳಗಳನೆ ಅತ್ತ ನಟಿ ಸಾಯಿ ಪಲ್ಲವಿ: ಕಾರಣ ತಿಳಿದು ಚಪ್ಪಾಳೆ ತಟ್ಟಿದ ಅಭಿಮಾನಿಗಳು

Written by Soma Shekar

Published on:

---Join Our Channel---

ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಸಾಯಿ ಪಲ್ಲವಿ ಈಗಾಗಲೇ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ, ನಟನೆ ಹಾಗೂ ನೃತ್ಯದಲ್ಲಿ ತನಗೆ ತಾನೇ ಸರಿಸಾಟಿ ಎಂಬುದನ್ನು ಹಲವು ಬಾರಿ ಸಾಬೀತು ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಕೈಯಲ್ಲಿ ಹಲವು ಹೊಸ ಸಿನಿಮಾಗಳ ಆಫರ್ ಗಳು ಇವೆ. ಈ ವರ್ಷ ತೆರೆಕಂಡ ನಾಗಚೈತನ್ಯ ನಾಯಕನಾಗಿ ನಟಿಸಿದ್ದ ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸು ಸಾಯಿ ಪಲ್ಲವಿ ಅವರಿಗೆ ಹೆಸರನ್ನು ತಂದು ಕೊಟ್ಟಿದೆ.

ಇನ್ನು ಇದೀಗ ಸಾಯಿ ಪಲ್ಲವಿ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ನಾನಿ ನಾಯಕನಾಗಿರುವ ಶ್ಯಾಮ ಸಿಂಗ್ ರಾಯ್ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಸಾಯಿ ಪಲ್ಲವಿ ಭಾವುಕರಾಗಿ ಕಣ್ಣೀರು ಹಾಕುತ್ತಾ ಗಳಗಳನೆ ಅತ್ತಿದ್ದಾರೆ. ಒಂದು ಕ್ಷಣ ನಟಿಯು ಅಳುವುದನ್ನು ನೋಡಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಆದರೆ ಅನಂತರ ನಟಿ ಸಾಯಿ ಪಲ್ಲವಿ ತಾನು ಭಾವುಕಳಾಗಿ ಅತ್ತಿದ್ದು ಏಕೆ ಎನ್ನುವುದನ್ನು ವಿವರಿಸಿದ್ದಾರೆ.

ಶ್ಯಾಮ್ ಸಿಂಗ್ ರಾಯ ಸಿನಿಮಾದಲ್ಲಿ ನಟ ನಾನಿ ಜೊತೆಗೆ ಸಾಯಿ ಪಲ್ಲವಿ, ಕೃತಿ ಶೆಟ್ಟಿ ಹಾಗೂ ಮಡೊನಾ ಸೆಬಾಸ್ಟಿಯನ್ ನಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ಸಾಯಿಪಲ್ಲವಿ ಮಾತನಾಡಲು ಮೈಕ್ ಹಿಡಿದಾಗ ಅಭಿಮಾನಿಗಳು ಸಾಯಿ ಪಲ್ಲವಿ ಹಿಂದೆ ನಟಿಸಿದ್ದ ಸಿನಿಮಾಗಳಲ್ಲಿನ ಪಾತ್ರದ ಹೆಸರಿನ ಮೂಲಕ ಅವರನ್ನು ಕರೆದಿದ್ದು ಕೇಳಿ ನಟಿ ಭಾವುಕರಾಗಿದ್ದಾರೆ. ತನಗೆ ಒಂದು ಒಳ್ಳೆ ಫ್ಲಾಟ್ ಫಾರಂ ಕೊಟ್ಟ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಷ್ಟೋ‌ ಜನಕ್ಕೆ ಸಿನಿಮಾ ರಂಗದಲ್ಲಿ ಯಶಸ್ಸು ಪಡೆಯಬೇಕೆಂಬ ಕನಸು ಇರುತ್ತದೆ ಆದರೆ ಸಕ್ಸಸ್ ಪಡೆಯೋಕೆ ಎಲ್ಲರಿಗೂ ಅವಕಾಶ ಸಿಗಲ್ಲ. ನನಗೆ ಇಂತಹ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳು ಇದು ನಿಜಕ್ಕೂ ಅದೃಷ್ಟ ಎಂದಿದ್ದಾರೆ. ಅಭಿಮಾನಿಗಳು ತನಗೆ ನೀಡಿರುವ ಪ್ರೀತಿಗೆ ಧನ್ಯವಾದಗಳು ಎಂದ ಸಾಯಿ ಪಲ್ಲವಿ ಅವರು ತೆಲುಗಿನಲ್ಲಿ ಮಾತನಾಡುವಾಗ ತಪ್ಪಾದರೆ ಕ್ಷಮಿಸಿ ಎಂದಿದ್ದಾರೆ. ನಮಗೆ ಯಾವುದೇ ಪ್ರಶಸ್ತಿ ಸಿಕ್ಕಿದಾಗ ಭಾವುಕರಾಗಬಹುದು ಆದರೆ ನಾನು ನಿಮ್ಮ ಅಭಿಮಾನಕ್ಕೆ ಭಾವುಕಳಾಗಿದ್ದೇನೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.‌

Leave a Comment