ವೇದಿಕೆ ಮೇಲೆ ಗಳಗಳನೆ ಅತ್ತು, ನಟಿ ಕೃತಿ ಶೆಟ್ಟಿ ಕಣ್ಣೀರು ಹಾಕುವಂತೆ ಮಾಡಿದ ನಿರೂಪಕರು: ಇಷ್ಟಕ್ಕೂ ಅಲ್ಲಿ ಆಗಿದ್ದೇನು?

Entertainment Featured-Articles Movies News

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ತೆಲುಗು ಸಿ‌ನಿಮಾ ರಂಗದಲ್ಲಿ ಒಂದು ಹೊಸ ಕ್ರೇಜ್ ಹುಟ್ಟು ಹಾಕಿರುವ ನಟಿ. ಉಪ್ಪೆನ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದ ಕೃತಿ ಮೊದಲ ಸಿನಿಮಾದಲ್ಲಿ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡರೂ ತಮ್ಮ ಅಂದ ಮತ್ತು ಅಭಿನಯದಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಉಪ್ಪೆನ ಸಿನಿಮಾ ನಂತರ ಸಾಲು ಸಾಲು ಸಿನಿಮಾಗಳ ಅವಕಾಶ ಅವರನ್ನು ಅರಸಿ ಬರುತ್ತಿವೆ. ಆದರೆ ಕೃತಿ ಅವರು ಉತ್ತಮ ಪಾತ್ರಗಳನ್ನು ಅಳೆದು ತೂಗಿ ಆರಿಸಿಕೊಳ್ಳುವ ಕಡೆಗೆ ಗಮನವನ್ನು ನೀಡುತ್ತಿದ್ದಾರೆ.

ಮೊದಲ ಸಿನಿಮಾದ ಯಶಸ್ಸಿನ ನಂತರ ಕೃತಿ ಶೆಟ್ಟಿ ಯುವ ನಟ ನಾಗಚೈತನ್ಯ ಅವರ ಜೊತೆ ಬಂಗರ್ರಾಜು ಸಿನಿಮಾದಲ್ಲಿ, ನಟ ನಾನಿ ಜೊತೆಗೆ ಶ್ಯಾಮ್ ಸಿಂಗ್ ರಾಯ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿನದಿಂದ ದಿನಕ್ಕೆ ಟಾಲಿವುಡ್ ನಲ್ಲಿ ಕೃತಿ ಅವರ ಅಭಿಮಾನಿಗಳ ಬಳಗ ಕೂಡಾ ಹೆಚ್ಚಾಗುತ್ತಿದೆ. ಹೀಗೆ ತನ್ನ ನಟನೆಯಿಂದ ಅಭಿಮಾನಿಗಳ ಮೆಚ್ಚುಗೆ ಪಡೆದಿರುವ ನಟಿ ಸಂದರ್ಶನವೊಂದರಲ್ಲಿ ವೇದಿಕೆಯ ಮೇಲೆಯೇ ಗಳಗಳನೆ ಅತ್ತ ಘಟನೆಯೊಂದು ನಡೆದಿದ್ದು ಈಗ ಅದು ದೊಡ್ಡ ಸುದ್ದಿಯಾಗಿದೆ.

ತಮಿಳಿನ ವಾಡ ಪೋಚ್ಚೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಕೃತಿ ಶೆಟ್ಟಿ ಅವರು ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ಸಾಮಾನ್ಯವಾಗಿಯೇ ಇಬ್ಬರು ನಿರೂಪಕರು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅದೇ ರೀತಿ ಕೃತಿ ಅವರನ್ನು ಇಬ್ಬರು ನಿರೂಪಕರು ಸಂದರ್ಶನ ಮಾಡುತ್ತಿದ್ದರು. ಇಬ್ಬರೂ ನಿರೂಪಕರು ಕೃತಿ ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಹೀಗೆ ಸಂದರ್ಶನ ನಡೆಯುವ ವೇಳೆಯಲ್ಲೇ ಇಬ್ಬರೂ ನಿರೂಪಕರ ನಡುವೆ ಒಂದು ಜಗಳ ಆರಂಭವಾಗಿದೆ. ಅವರ ಜಗಳ ತಾರಕಕ್ಕೆ ಏರಿ, ನಿರೂಪಕರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದ್ದಾರೆ.

ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಕೃತಿ ಶೆಟ್ಟಿ ಅವರಿಗೆ ಇದನ್ನು ನೋಡಿ ಶಾ ಕ್ ಆಗಿದೆ. ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದ ನಟಿ ಕೈಯಲ್ಲಿದ್ದ ಮೈಕ್ ಹಿಡಿದು ಹಾಗೆ ಸುಮ್ಮನೆ ಕುಳಿತು ಬಿಟ್ಟಿದ್ದಾರೆ.‌ ಒಬ್ಬ ನಿರೂಪಕ ಮತ್ತೊಬ್ಬ ನಿರೂಪಕ ತನಗೆ ಪ್ರಶ್ನೆ ಕೇಳಲು ಬಿಡುತ್ತಿಲ್ಲ ಎಂದು ತಗಾದೆ ತೆಗೆದು ಅದು ವಾಗ್ವಾದವಾಗಿ ಕೊನೆಗೆ ಇಬ್ಬರೂ ಜಗಳ ಮಾಡುವ ಹಂತಕ್ಕೆ ತಲುಪಿದ್ದಾರೆ. ಇದನ್ನೆಲ್ಲಾ ನೋಡಿದ ನಟಿ ಕೃತಿ ಅವರು ವೇದಿಕೆಯ ಮೇಲೆಯೇ ಕಣ್ಣೀರು ಹಾಕಲು ಆರಂಭಿಸಿದ್ದು, ಗಳ ಗಳನೆ ಅತ್ತಿದ್ದಾರೆ.

ನಟಿಯು ಹೀಗೆ ಅಳುವುದು ಕೂಡಾ ಅನಿರೀಕ್ಷಿತವಾಗಿತ್ತು. ಕೊನೆಗೆ ಇಬ್ಬರೂ ನಿರೂಪಕರು ಸಹಾ ಸತ್ಯ ಏನು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇದೆಲ್ಲಾ ಕೇವಲ ತಮಾಷೆಗಾಗಿ ಮಾಡಿದ್ದು ಎಂದು ನಟಿಯನ್ನು ಸಮಾಧಾನ ಮಾಡಿದ್ದಾರೆ. ಆದರೂ ಕೃತಿ ಅವರು ಮಾತ್ರ ಯಾರಾದರೂ ಹೀಗೆ ಜಗಳ ಆಡಿದರೆ ನನಗೆ ಅದನ್ನು ನೋಡಲಾಗುವುದಿಲ್ಲ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಕೃತಿ ಅವರು ಎಷ್ಟು ಎಮೋಷನಲ್ ಎನ್ನುವುದು ಈ ಸಂದರ್ಶನದ ವೇಳೆ ತಿಳಿದು ಬಂದಿದೆ.

Leave a Reply

Your email address will not be published.