ವೇತನ ನೀಡಿಲ್ಲವೆಂದು ಜನಪ್ರಿಯ ನಟಿ ಮೇಲೆ ಮಾಜಿ ಉದ್ಯೋಗಿ ದೂರು: ವಂಚನೆ ಆರೋಪದಲ್ಲಿ ನಟಿಗೆ ನೋಟೀಸ್ ಜಾರಿ

Written by Soma Shekar

Published on:

---Join Our Channel---

ಶ್ವೇತಾ ತಿವಾರಿ ಬಾಲಿವುಡ್ ಸಿನಿಮಾ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಮಾಡಿರುವಂತಹ ಈ ನಟಿಯು, ಕಿರುತೆರೆಯಲ್ಲಿ ಕೂಡಾ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಎನಿಸಿಕೊಂಡಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ ಶ್ವೇತಾ ತಿವಾರಿ.‌‌ ಇದಲ್ಲದೇ ಡ್ಯಾನ್ಸ್ ರಿಯಾಲಿಟಿ ಶೋ ಗಳ ಮೂಲಕ ತಾನೊಬ್ಬ ಅತ್ಯುತ್ತಮ ನೃತ್ಯಗಾರ್ತಿ ಎಂದು ತನ್ನ ನೃತ್ಯ ಪ್ರತಿಭೆಯನ್ನು ಸಹಾ ಅನಾವರಣ ಮಾಡಿರುವ ಶ್ವೇತಾ ತಿವಾರಿ ಸದಾ ಒಂದಲ್ಲ ಒಂದು ವಿಷಯವಾಗಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿರುತ್ತಾರೆ. ತನ್ನ ಸೌಂದರ್ಯ ಹಾಗೂ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಈ ನಟಿಗೆ ಸಮಸ್ಯೆಗಳು ಕೂಡಾ ಸಂಗಾತಿಗಳೇ ಏನೋ ಎನ್ನುವಂತೆ ಒಂದರ ನಂತರ ಮತ್ತೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶ್ವೇತಾ ಅವರ ಪತಿ ತಮ್ಮ ಪತ್ನಿಯ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈಗ ಅದರ ಬೆನ್ನಲ್ಲೇ ಶ್ವೇತಾ ತಿವಾರಿ ಅವರ ಆ್ಯಕ್ಟಿಂಗ್ ಸ್ಕೂಲ್ ನ ಮಾಜಿ ಉದ್ಯೋಗಿ ಒಬ್ಬರು ಶ್ವೇತಾ ತಿವಾರಿ ಅವರ ಮೇಲೆ ವಂಚನೆಯ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಶ್ವೇತಾ ತಿವಾರಿಗೆ ನೋಟೀಸ್ ಕೂಡಾ ನೀಡಲಾಗಿದೆ. ಹೌದು ಶ್ವೇತಾ ತಿವಾರಿ ಮುಂಬೈನಲ್ಲಿ ಒಂದು ನಟನೆಯ ತರಬೇತಿ ನೀಡುವ ಶಾಲೆಯನ್ನು ತೆರೆದಿದ್ದರು. ಆ ಶಾಲೆಯ ಹೆಸರು ಶ್ವೇತಾ ತಿವಾರಿ ಕ್ರಿಯೇಟಿವ್ ಸ್ಕೂಲ್ ಆಫ್ ಆ್ಯಕ್ಟಿಂಗ್. ರಾಜೇಶ್ ಪಾಂಡೆ ಆ ಶಾಲೆಯಲ್ಲಿ ನಟನಾ ತರಬೇತಿ ನೀಡುವ ಶಿಕ್ಷಕರಾಗಿದ್ದರು.

ರಾಜೇಶ್ ಪಾಂಡೆ ಮಾದ್ಯಮವೊಂದರ ಮುಂದೆ ಮಾತನಾಡಿ ನಾನು 2012 ರಿಂದ ಶ್ವೇತಾ ತಿವಾರಿ ಅವರ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸವನ್ನು ಮಾಡಿದ್ದೇನೆ. ಆದರೆ ಅವರು ಡಿಸೆಂಬರ್ 2018 ರಲ್ಲಿ ನನಗೆ ನನ್ನ ಸಂಬಳವನ್ನು ನೀಡಿಲ್ಲ. ಅಲ್ಲದೇ ನನ್ನ ಟಿಡಿಎಸ್ ಹಣವನ್ನು ಕೂಡಾ ಜಮೆ ಮಾಡಿಲ್ಲ. ಅವರ ಶಾಲೆಯಲ್ಲಿ ನಾನು ಅಷ್ಟು ವರ್ಷಗಳು ಕೆಲಸ ಮಾಡಿದರೂ ಕೊನೆಗೆ ನನಗೆ ಸಿಕ್ಕಿದ್ದೇನು?? ಎಂದು ವಿಶಾದವನ್ನು ವ್ಯಕ್ತಪಡಿಸಿದ್ದಾರೆ. ತಾವು ಬಹಳ‌ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಂಬಳದ ಹಣ ಕೇಳಲು ನಟಿಗೆ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಅದನ್ನು ಪರೀಕ್ಷೆ ಮಾಡಲು ಮಾದ್ಯಮದವರು ಕರೆ ಮಾಡಿದಾಗಲೂ ಶ್ವೇತಾ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ..

ಇನ್ನು ನಟಿ ಶ್ವೇತಾ ತಿವಾರಿ ಅವರ ಪತಿ ಅಭಿನವ್ ಕೊಹ್ಲಿ ಹೌದು ಶ್ವೇತಾ ರಾಜೇಶ್ ಪಾಂಡೆ ಗೆ ಐವತ್ತು ಸಾವಿರ ನೀಡಬೇಕು. ಆದರೆ ನೀಡಿಲ್ಲ, ನನಗೆ ಆತ ಪರಿಚಯ ಇದ್ದಾನೆ. ತೊಂದರೆಯಲ್ಲಿ ಇರುವ ಆತನಿಗೆ ಶ್ವೇತ ಹೀಗೆ ಮಾಡಬಾರದಿತ್ತು, ಎರಡು ವರ್ಷಗಳಿಂದ ಆತ ಹಣಕ್ಕಾಗಿ ಪ್ರಯತ್ನ ಪಡುತ್ತಿದ್ದಾನೆ, ಆದರೆ ಶ್ವೇತ ತನ್ನ ಜನಪ್ರಿಯತೆ ಕಾರಣದಿಂದ ರಾಜೇಶ್ ತನ್ನ ಹಿಂದೆ ಬಿದ್ದಿದ್ದಾನೆ ಎಂದು ಹೇಳಿದ್ದಾಳೆ ಎಂದಿದ್ದಾರೆ. ಶ್ವೇತ ಅವರ ಪತಿ ಅಭಿನವ್ ಜೊತೆಯಲ್ಲಿ ಇಲ್ಲ, ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

Leave a Comment