ವೃಕ್ಷ ಕಾಳಜಿ ಜೊತೆ ಪ್ರತಿಯೊಬ್ಬರೂ ಆಲೋಚಿಸುವಂತಹ ಪ್ರಮುಖ ವಿಚಾರ ತಿಳಿಸಿದ ನಟ ಅನಿರುದ್ಧ್

Written by Soma Shekar

Updated on:

---Join Our Channel---

ಕನ್ನಡ ಕಿರುತೆರೆಯ ಲೋಕದಲ್ಲಿ ಜೊತೆ ಜೊತೆಯಲಿ ಸೀರಿಯಲ್ ಪಡೆದಿರುವ ಸ್ಥಾನ ಹಾಗೂ ಜನಪ್ರಿಯತೆ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಏಕೆಂದರೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿರುವ ಜೊತೆ ಜೊತೆಯಲಿ ಸೀರಿಯಲ್ ಮನೆ ಮನೆ ಮಾತಾಗಿದೆ. ಈ ಸೀರಿಯಲ್ ಮೂಲಕ ನಟ ಅನಿರುದ್ಧ್ ಅವರು ಸಹಾ ಇಂದು ನಾಡಿನ ಜನ ಮೆಚ್ಚಿನ ನಟನಾಗಿದ್ದಾರೆ‌. ಅನಿರುದ್ಧ್ ಅವರು ಆರ್ಯವರ್ಧನ್ ಆಗಿ ಜನ ಮನ ಗೆದ್ದಿದ್ದಾರೆ. ನಟ ಅನಿರುದ್ಧ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಕ್ರಿಯವಾಗಿದ್ದು, ಅನೇಕ ವಿಷಯ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

ನಟ ಅನಿರುದ್ದ್ ಅವರು ಅನೇಕ ಸಂದರ್ಭಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಜನರಲ್ಲಿ ಒಂದು ಜಾಗೃತಿಯನ್ನು ಮೂಡಿಸುವ ಜೊತೆಗೆ, ಕೆಲವೊಂದು ವಿಷಯಗಳ ಕಡೆಗೆ ಜನರ ಗಮನವನ್ನು ಸೆಳೆಯುವ ಅತ್ಯುತ್ತಮ ಪ್ರಯತ್ನಗಳನ್ನು ಸಹಾ ಅವರು ಮಾಡುತ್ತಾರೆ. ಪ್ರಸ್ತುತ ಅವರು ಅಂತಹುದೇ ಒಂದು ಅರ್ಥ ಪೂರ್ಣವಾದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆಯನ್ನು ನೀಡುತ್ತಿದ್ದಾರೆ..

ಹೌದು, ಅನಿರುದ್ದ್ ಅವರು ವೃಕ್ಷ ಕಾಳಜಿಯನ್ನು ತೋರಿಸುವ ವಿಚಾರವೊಂದನ್ನು ಎಲ್ಲರ ಮುಂದೆ ಇರಿಸಿದ್ದಾರೆ. ಹೇಗೆ ನಗರದ ಒಂದು ಭಾಗದಲ್ಲಿ ಇರುವ ಮರವೊಂದಕ್ಕೆ ಯಾವುದ್ಯಾವುದೋ ತಂತಿಗಳನ್ನು ಸುತ್ತಿ ಮರವೊಂದಕ್ಕೆ ಎದುರಾಗಿರುವ ದುಸ್ಥಿತಿಯನ್ನು ತೋರಿಸಿದ್ದಾರೆ ಅನಿರುದ್ದ್ ಅವರು. ಅವರು ಫೋಟೋ ಶೇರ್ ಮಾಡಿಕೊಂಡು, “ನಮ್ಮ ಕೃತ್ಯದಿಂದ ಈ ಮರ ಸತ್ತೇ ಹೋಗಿದೆ. ಮರ ಗಿಡಗಳಿಗೆ ಈ ರೀತಿ ತಂತಿ ಕೇಬಲ್‌ಗಳಿಂದ ಸುತ್ತುವುದನ್ನು ನಾವು ನಿಲ್ಲಿಸೋಣ” ಎಂದು ಬರೆದುಕೊಂಡಿದ್ದಾರೆ.

ಅನಿರುದ್ದ್ ಅವರು ಶೇರ್ ಮಾಡಿಕೊಂಡ ಈ ಫೋಟೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಸಹಾ ಅಪಾರವಾದ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಬಹಳಷ್ಟು ಜನರು ಕಾಮೆಂಟ್ ಗಳನ್ನು ಮಾಡುತ್ತಾ, ನೀವು ಹೇಳಿರುವುದು ಸರಿಯಾಗಿದೆ, ಇದನ್ನು ಮೊದಲು ಬಂದ್ ಮಾಡಬೇಕಿದೆ ಎಂದು ಹೇಳಿದ್ದಾರೆ.‌ ಒಂದಿಬ್ಬರು ತಪ್ಪನ್ನು ಸಮರ್ಥನೆ ಮಾಡಿದ್ದು, ಅನಿರುದ್ಧ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿ ನಿಮ್ಮನ್ನು ಹೀಗೆ ಸುತ್ತಿ ಇಟ್ರೆ ಪರವಾಗಿಲ್ವಾ?? ಎಂದು ಪ್ರಶ್ನೆ ಮಾಡಿದ್ದಾರೆ.

Leave a Comment