ವೀಕ್ಷಕರ ಬೇಸರದ ನಡುವೆಯೇ ಗಟ್ಟಿಮೇಳ ಸೀರಿಯಲ್ ನೀಡಿದ ಖುಷಿ ಸುದ್ದಿ: ಧನ್ಯವಾದ ಹೇಳಿದ ನಟ

Entertainment Featured-Articles News

ಕಿರುತೆರೆಯಲ್ಲಿ ಮನರಂಜನೆಯ ಪ್ರಮುಖ ಮೂಲವಾಗಿರುವುದು ಧಾರಾವಾಹಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಧಾರಾವಾಹಿಗಳು ಪಡೆದಿರುವಂತಹ ಜನಮನ್ನಣೆ ಅದಕ್ಕೆ ಸಾಕ್ಷಿಯಾಗಿದೆ. ಕೆಲವು ಧಾರಾವಾಹಿಗಳು ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿರುವ ಕಾರಣ ಟಾಪ್ ಸೀರಿಯಲ್ ಗಳಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಆದರೆ ಈ ಸ್ಥಾನ ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಪ್ರೇಕ್ಷಕರನ್ನು ಹೆಚ್ಚು ರಂಜಿಸುವ ಧಾರವಾಹಿ ಗಳು ಟಾಪ್ ಸೀರಿಯಲ್ ಗಳು ಮಾತ್ರ ಸದಾ ತಮಗೊಂದು ಸ್ಥಾನವನ್ನು ಖಂಡಿತ ಹೊಂದಿರುತ್ತವೆ.

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವಂತಹ ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಗಟ್ಟಿಮೇಳ ಧಾರಾವಾಹಿಯೂ ಸೇರಿದೆ. ಯುವ ಪ್ರತಿಭೆಗಳ ಒಂದು ದೊಡ್ಡ ದಂಡೇ ಇರುವ ಈ ಧಾರಾವಾಹಿ ನಾಡಿನ ಜನರ ಅಪಾರವಾದ ಪ್ರೀತಿಯನ್ನು ಗಳಿಸಿಕೊಂಡು ಯಶಸ್ಸಿನಿಂದ ಮುಂದೆ ಸಾಗುತ್ತಿದೆ. ಟಾಪ್ ಫೈವ್ ಸೀರಿಯಲ್ ಗಳಲ್ಲಿ ಕಳೆದ ಕೆಲವು ತಿಂಗಳಿನಿಂದಲೂ 2ನೇ ಸ್ಥಾನದಲ್ಲಿ ಇದ್ದಂತಹ ಗಟ್ಟಿಮೇಳ ಧಾರಾವಾಹಿ ಕಳೆದ ವಾರ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ.

ತಮ್ಮ ಧಾರವಾಹಿಗೆ ನಂಬರ್ ಒನ್ ಸ್ಥಾನ ಸಿಕ್ಕಿದ ಖಷಿಯನ್ನು ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕ ಹಾಗೂ ಸೀರಿಯಲ್ ನಲ್ಲಿ ನಾಯಕ ವೇದಾಂತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಕ್ಷ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ತಮ್ಮ ಧಾರಾವಾಹಿಗೆ ನಂಬರ್ ವನ್ ಸ್ಥಾನವನ್ನು ತಂದುಕೊಟ್ಟ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೇ ಫೋಟೋ ಒಂದನ್ನು ಹಂಚಿಕೊಂಡು ಅವರು ತಮ್ಮ ಧಾರಾವಾಹಿಗೆ ಸಿಕ್ಕಿರುವ ರೇಟಿಂಗ್ ಅನ್ನು ತಿಳಿಸಿದ್ದಾರೆ.

ಗಟ್ಟಿಮೇಳ ಧಾರಾವಾಹಿಯಲ್ಲಿ ಇತ್ತೀಚಿನ ಕೆಲವು ತಿರುವುಗಳು ಪ್ರೇಕ್ಷಕರನ್ನು ಇನ್ನಷ್ಟು ತನ್ನ ಕಡೆ ಸೆಳೆದಿದೆ. ನಾಯಕನ ಸಹೋದರ ಹಾಗೂ ಸೀರಿಯಲ್ ನ ಪ್ರಮುಖ ಪಾತ್ರವೂ ಆಗಿರುವ ಧೃವನ ಸಾವು, ನಾಯಕನ ಚಿಕ್ಕಮ್ಮ, ವಿಲನ್ ಪಾತ್ರವಾದ ಸುಹಾಸಿನಿಯ ತಂತ್ರಗಳಿಗೆ ಮತ್ತೊಮ್ಮೆ ಸಿಕ್ಕ ಜಯ ಈ ಎಲ್ಲಾ ಅಂಶಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಧೃವನ ಸಾವಿನ ಸಂಚಿಕೆಯ ನಂತರ ಜನರು ಆ ಪಾತ್ರದ ಸಾವು ತಮಗೆ ಬೇಸರವನ್ನುಂಟು ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಹೀಗೆ ಹಲವು ಹೊಸ ತಿರುವುಗಳ ಮೂಲಕ ಸಾಗುತ್ತಿರುವ ಧಾರಾವಾಹಿ ಇನ್ನಷ್ಟು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ನಟ ರಕ್ಷ್ ಅವರು ಐಪಿಎಲ್ ಪಂದ್ಯಾವಳಿಗಳ ನಡುವೆಯೂ ಜನರು ತಮ್ಮ ಧಾರಾವಾಹಿಗೆ ಗಮನ ನೀಡಿರುವುದಕ್ಕೆ ಎಲ್ಲಾ ಪ್ರೇಕ್ಷಕರಿಗೂ ಕೂಡಾ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಅವರು ಶೇರ್ ಮಾಡಿಕೊಂಡ ಪೋಸ್ಟ್ ನೋಡಿದ ಅಭಿಮಾನಿಗಳು ಧಾರಾವಾಹಿ ಇನ್ನಷ್ಟು ಯಶಸ್ಸನ್ನು ಪಡೆಯಲಿ ಎಂದು ಶುಭವನ್ನು ಹಾರೈಸಿದ್ದಾರೆ.

Leave a Reply

Your email address will not be published.