ವಿಷಯ ದೊಡ್ಡದು ಮಾಡ್ಬೇಡಿ: ನಿತ್ಯಾನಂದ ಜೊತೆ ಮದುವೆಗೆ ರೆಡಿ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

Entertainment Featured-Articles Movies News
63 Views

ಮಲೆಯಾಳಂ ನ ಸ್ಟಾರ್ ನಟಿ, ಬಹು ಭಾಷಾ ಖ್ಯಾತಿಯ ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಜೊತೆ ತೆರೆಯನ್ನು ಹಂಚಿಕೊಂಡು ಕನ್ನಡ ಸಿನಿ ಪ್ರೇಮಿಗಳ ಮನಸ್ಸನ್ನು ಸಹಾ ಗೆದ್ದಿರುವ ನಟಿಯಾಗಿದ್ದಾರೆ. ನಿನ್ನೆಯಿಂದಲೂ ನಟ ಪ್ರಿಯಾ ಆನಂದ್ ಅವರ ಕುರಿತಾಗಿ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾದ್ಯಮಗಳ ಸುದ್ದಿಗಳಲ್ಲಿ ವೈರಲ್ ಆಗಿದೆ. ನಟಿ ಪ್ರಿಯಾ ಆನಂದ್ ಅವರು ಇತ್ತೀಚಿಗೆ ಒಂದು ಸಂದರ್ಶನದ ವೇಳೆ ತಮ್ಮ ಮದುವೆಯ ವಿಚಾರ ಬಂದಾಗ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದೇ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ನಟಿಯು ತಮ್ಮ ಮದುವೆಯ ವಿಚಾರದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ತನ್ನ ವಿ ವಾ ದಗಳಿಂದಲೇ ಸುದ್ದಿಯಾಗಿ, ಅನಂತರ ದೇಶ ಬಿಟ್ಟು ಪರಾರಿಯಾಗಿ, ತನ್ನದೇ ದೇಶ ಕೈಲಾಸ ವನ್ನು ನಿರ್ಮಾಣ ಮಾಡಿಕೊಂಡು ನೆಲೆಸಿರುವ ನಿತ್ಯಾನಂದನ ಬಗ್ಗೆ ಹೇಳುತ್ತಾ, ತಾನು ನಿತ್ಯಾನಂದನನ್ನು ಮದುವೆಯಾಗಲು ಸಿದ್ಧ, ಅವರನ್ನು ಅಸಂಖ್ಯಾತ ಮಂದಿ ಭಕ್ತರು ಪೂಜೆ ಮಾಡುತ್ತಾರೆ, ಆರಾಧಿಸುತ್ತಾರೆ, ಅವರನ್ನು ಮದುವೆಯಾದರೆ ನಾನು ಹೆಸರನ್ನು ಸಹಾ ಬದಲಾಯಿಸಿಕೊಳ್ಳಬೇಕಾಗಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದರು.

ನಟಿಯು ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲೆಲ್ಲೂ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ನಟಿ ಪ್ರಿಯಾ ಆನಂದ್ ಅವರು ಇದರ ಬಗ್ಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ‌. ನಟಿಯು ತಮ್ಮ ಹೇಳಿಕೆಯ ಬಗ್ಗೆ ಮಾತನಾಡುತ್ತಾ, ಈಗಾಗಲೇ ಆ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ನಾನು ಅಂತಹುದೊಂದು ಹೇಳಿಕೆಯನ್ನು ನೀಡಿದ್ದು ಕೇವಲ ತಮಾಷೆಯಾಗಿಯೇ ಹೊರತು ಅದು ಯಾವುದೇ ಉದ್ದೇಶದಿಂದ ಆಡಿದ ಮಾತಲ್ಲ.

ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಸ್, ಮೀಮ್ಸ್, ವಿಡಿಯೋಗಳು ಎಂದರೆ ನನಗೆ ಬಹಳ ಇಷ್ಟ. ನಾನು ಅವರನ್ನು ಮದುವೆ ಆಗುತ್ತೇನೆ ಎಂದಿದ್ದು ಕೇವಲ ಕಾಮಿಡಿಗಾಗಿ ಅಷ್ಟೇ ಎಂದಿದ್ದು ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದು ಹೇಳಿದ್ದು, ಈ ಮೂಲಕ ನಿನ್ನೆಯಿಂದಲೂ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡಿರುವ ನಿತ್ಯಾನಂದನ ಜೊತೆಗೆ ತನ್ನ ಮದುವೆ ವಿಚಾರಕ್ಕೆ ನಟಿ ಪ್ರಿಯಾ ಆನಂದ್ ಸ್ಪಷ್ಟನೆ ನೀಡಿ, ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *