ವಿಶ್ವ ಪರ್ಯಟನೆ ಮಾಡುವ ಈ 1 ವರ್ಷದ ಮಗುವಿನ ಒಂದು ತಿಂಗಳ ಗಳಿಕೆ ಇಷ್ಟೊಂದಾ!! ಅತ್ಯಾಶ್ಚರ್ಯ ಆಗೋದು ಖಂಡಿತ:

Entertainment Featured-Articles News Viral Video Wonder
41 Views

ಸಾಮಾನ್ಯವಾಗಿ ಜನರು ಸುತ್ತಾಡುವ ಮೂಲಕ ತಮ್ಮಲ್ಲಿರುವ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇಲ್ಲೊಂದು ಮಗು ಆ ವಿಚಾರಕ್ಕೆ ತದ್ವಿರುದ್ಧವಾಗಿದೆ. ಈ ಮಗು ಕೂಡಾ ಸುತ್ತಾಡುತ್ತದೆ ಆದರೆ ಅದರ ಬದಲಿಗೆ ಮಾಸಿಕ 75 ಸಾವಿರ ರೂಪಾಯಿಗಳನ್ನು ಗಳಿಸುತ್ತಿದೆ ಎಂದು ಹೇಳಿದರೆ ನಿಮಗೆ ಸಿಕ್ಕಾಪಟ್ಟೆ ಆಶ್ಚರ್ಯ ಎನಿಸಬಹುದು ಅಲ್ಲವೇ? ನಿಮಗೆ ಇನ್ನೂ ಆಶ್ಚರ್ಯ ಆಗುವ ವಿಷಯ ಏನೆಂದರೆ ಈ ಮಗುವಿಗೆ ಈಗ ಕೇವಲ ಒಂದು ವರ್ಷ ಮಾತ್ರ. ಈ ಮಗುವಿನ ವಿಚಾರ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ಮಗುವಿನ ವಿಚಾರ ಕೇಳಿದವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಪಡುವುದು ವಾಸ್ತವ.

ಈ ಅದ್ಭುತವಾದ ಮಗುವಿನ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ನೆಟ್ಟಿಗರು ಈ ಮಗುವನ್ನು ಹೊಗಳುವುದಕ್ಕೆ ಆಯಾಸ ಪಡುತ್ತಿಲ್ಲ ಹಾಗೂ ಈ ವಯಸ್ಸಿನಲ್ಲೇ ಮಗುವು ಇಷ್ಟೊಂದು ಗಳಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ. ವಾಸ್ತವವಾಗಿ ಈ ಮಗುವಿನ ಬಗ್ಗೆ ಸಾಹಸದ ಬಗ್ಗೆ ವೇರೀಸ್ ಬ್ರಿಗ್ಸ್ ಎನ್ನುವ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಡೈಲಿ ಮೇಲ್ ನ ವರದಿಯ ಪ್ರಕಾರ ಒಂದು ವರ್ಷದ ಬ್ರಿಗ್ಸ್ ಎನ್ನುವ ಈ ಮಗು ಈಗಾಗಲೇ 45 ವಿಮಾನಗಳಲ್ಲಿ ಪ್ರಯಾಣ ಮಾಡಿದೆ.

ಅಲಾಸ್ಕಾ, ಕ್ಯಾಲಿಫೋರ್ನಿಯಾ, ಫ್ಲೊರಿಡಾ, ಉತಾಹ್, ಇಡಾಹೋ ಸೇರಿದಂತೆ ಅಮೆರಿಕಾದ 16 ರಾಜ್ಯಗಳಿಗೆ ಭೇಟಿ ನೀಡಿದೆ ಈ ಪುಟ್ಟ ಮಗು. ಬ್ರಿಗ್ಸ್ ನ ತಾಯಿ ಜೆಸ್ ಅವರು ಕಳೆದ ವರ್ಷ ಅಕ್ಟೋಬರ್ 14 ರಂದು ಬ್ರಿಗ್ಸ್ ಜನಿಸಿದ್ದು, ಬ್ರಿಗ್ಸ್ ಜನಿಸಿದ ಮೂರು ವಾರಗಳ ನಂತರ ಮೊದಲನೇ ಪ್ರವಾಸವನ್ನು ಮಾಡಿದ್ದಾಗಿ ಹೇಳಿದ್ದಾರೆ. ಆಕೆ ತನ್ನ ಮಗು ಅಲಾಸ್ಕಾದಲ್ಲಿ ಕರಡಿಗಳನ್ನು , ಎಲ್ಲೊಸ್ಟಾನ್ ನ್ಯಾಷನಲ್ ಪಾರ್ಕ್ ನಲ್ಲಿ ತೋಳಗಳು, ಉತಾಹ್ ನಲ್ಲಿ ಡೆಲಿಕೇಟ್ ಆರ್ಕ್ ನೋಡಿದ್ದು, ಕ್ಯಾಲಿಫೋರ್ನಿಯಾದ ಬೀಚ್ ನಲ್ಲಿ ಮಜಾ ಕೂಡಾ ಅನುಭವಿಸಿದೆ ಎಂದಿದ್ದಾರೆ.

ಬ್ರಿಗ್ಸ್ ಗೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸಂಖ್ಯೆಯ ಫಾಲೋಯಿಂಗ್ ಇದ್ದು, ಅದರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇನ್ಸ್ಟಾಗ್ರಾಂ ನಲ್ಲಿ ಬ್ರಿಗ್ಸ್ ಬೇಬಿಗೆ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಫಾಲೋಯರ್ಸ್ ಇದ್ದಾರೆ. ಬ್ರಿಗ್ಸ್ ನ ತಾಯಿ ತಾನು ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಟ್ರಾವೆಲಿಂಗ್ ಬಗ್ಗೆ ಒಂದು ಖಾತೆಯನ್ನು ಮಾಡಿದ್ದು, ಈ ಕ್ಷೇತ್ರದಲ್ಲಿ ಬಹಳ ಉತ್ತಮವಾದ ಸಂಭಾವ್ಯತೆ ಗಳು ಇದೆ ಎಂದು ತಿಳಿಯಿತು. ಮಗುವಿನ ಜೊತೆಗೆ ಟ್ರಾವೆಲ್ ಮಾಡಿ, ಅದರ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಇಂತಹ ವೀಡಿಯೋ ಹಾಗೂ ಅನುಭವಗಳನ್ನು ಶೇರ್ ಮಾಡಿಕೊಳ್ಳುವುದರಿಂದ ಮಕ್ಕಳ ಜೊತೆ ಟ್ರಾವೆಲಿಂಗ್ ಮಾಡಲು ಬಯಸುವ ಬಹಳಷ್ಟು ಜನ ಪೋಷಕರಿಗೆ ಇದು ನೆರವಾಗುತ್ತದೆ. ಅಲ್ಲದೇ ಶೇರ್ ಮಾಡುವ ಬ್ರಿಗ್ಸ್ ನ ಫೋಟೋಗಳ ಕಾರಣದಿಂದ ಸುಮಾರು ಒಂದು ಸಾವಿರ ಡಾಲರ್ ಗಳ ಗಳಿಕೆಯಾಗುತ್ತಿದ್ದು ನಾನು ಅದನ್ನು ಬ್ರಿಗ್ಸ್ ಖಾತೆಯಲ್ಲೇ ಇಡುತ್ತೇನೆ ಏಕೆಂದರೆ ಅದು ಅವನ ಸಂಪಾದನೆ ಎಂದಿದ್ದಾರೆ ಬ್ರಿಗ್ಸ್ ನ ತಾಯಿ. ಜೆಸ್ ಮಾತನಾಡುತ್ತಾ ಕೋವಿಡ್ ನಂತರ ತಾನು ಎಲ್ಲಾ ಪ್ರೊಟೋಕೊಲ್ ಪಾಲಿಸಿ ಪ್ರವಾಸ ಮಾಡುತ್ತಿದ್ದೇನೆ ಎಂದಿದ್ದಾರೆ.

ನಮ್ಮ ಫೋಕಸ್ ರೋಡ್ ಟ್ರಿಪ್ ಮತ್ತು ಸ್ಥಳೀಯ ರಜಾ ದಿನಗಳ ಮೇಲೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತವಾದ ಸ್ಥಳಗಳ ಕಡೆ ಇರುತ್ತದೆ. ನಾವು ನ್ಯೂಯಾರ್ಕ್ ನಂತಹ ದೊಡ್ಡ ನಗರಕ್ಕೆ ಹೋಗುವ ಕಡೆ ಆಸಕ್ತಿಯನ್ನು ತೋರುವುದಿಲ್ಲ ಬದಲಾಗಿ ಹೊಸ ಸ್ಥಳಗಳನ್ನು ಹುಡುಕುವುದಾಗಿದೆ. ಬೇಬಿ ಬ್ರಿಗ್ಸ್ ಗೆ ಪ್ರವಾಸದ ವೇಳೆಯಲ್ಲಿ ಅನೇಕ ಸೌಲಭ್ಯ ಗಳು ಉಚಿತವಾಗಿ ದೊರೆಯುತ್ತವೆ. ಉಚಿತ ಡೈಪರ್ ಗಳು, ವೈಪ್ ಗಳನ್ನು ಸ್ಪಾನ್ಸರ್ ಮಾಡುತ್ತಾರೆ. ಇದರಿಂದ ಕಂಪನಿಗಳು ಬ್ರಿಗ್ಸ್ ನ ಫೋಟೋ ಹಾಕಿ ಜಾಹೀರಾತು ನೀಡುತ್ತವೆ ಎಂದು ಜೆಸ್ ಹೇಳುತ್ತಾರೆ.

Leave a Reply

Your email address will not be published. Required fields are marked *