ವಿಶ್ವದ ಸರ್ವಶ್ರೇಷ್ಠ ಪ್ರೇಮಿಗಳಿಗೆ ತನ್ನ ಹಾಗೂ ಮಂಜು ಸ್ನೇಹವನ್ನು ಹೋಲಿಸಿದ ದಿವ್ಯ ಸುರೇಶ್

Written by Soma Shekar

Published on:

---Join Our Channel---

ಬಿಗ್ ಬಾಸ್ ಸೀಸನ್ ಎಂಟು ಈಗ ಬಿಗ್ ಬಾಸ್ ಶೋ ಅಭಿಮಾನಿಗಳಿಗೆ ಒಂದು ನೆನಪು ಮಾತ್ರ. ಭರ್ಜರಿ ಗ್ರಾಂಡ್ ಫಿನಾಲೆ ಮೂಲಕ ಈ ಎಂಟನೇ ಸೀಸನ್ ಗೆ ತೆರೆ ಬಿದ್ದಾಯ್ತು. ಮಂಜು ಪಾವಗಡ ‌ಟ್ರೋಫಿ ತನ್ನದಾಗಿಸಿಕೊಂಡು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಬೀಗಿದ್ದಾರೆ. ಇದೇ ವೇಳೆ ಬಹಳಷ್ಟು ಜನರ ಫೇವರಿಟ್ ಆಗಿದ್ದು, ಅವರೇ ಗೆಲ್ಲಬಹುದು ಎಂದು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದ ಅರವಿಂದ್ ಕೆಪಿ ಅವರು ರನ್ನರ್ ಅಪ್ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಬೇಸರವನ್ನು ಮೂಡಿಸಿದೆ. ಬಿಗ್ ಬಾಸ್ ಅಲ್ಲಿಗೆ ಮುಗಿಯಿತಾ?? ಎನ್ನುವುದಾದರೆ ಇಲ್ಲ, ಶೋ ಮುಗಿದಿದೆ ಅಷ್ಟೇ.‌ ಶೋ ನಿಂದ ಹೊರ ಬಂದಿರುವ ಬಿಗ್ ಬಾಸ್ ಸ್ಪರ್ಧಿಗಳ ಸಂದರ್ಶನ ಗಳು ಎಲ್ಲೆಲ್ಲೂ ಸದ್ದು ಮಾಡುತ್ತಿವೆ. ಈ ಸಂದರ್ಶನಗಳ ಮೂಲಕ ಸ್ಪರ್ಧಿಗಳ ಕುರಿತಾಗಿ ಹೊಸ ಹೊಸ ವಿಚಾರಗಳು ಹೊರಗೆ ಬರುವ ಮೂಲಕ ಈಗ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.‌

ಹೌದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಮಂಜು ಪಾವಗಡ ಜೊತೆ ಹೆಸರು ತಳಕು ಹಾಕಿಕೊಂಡು, ಹೊರಗೆ ಅದರಿಂದಲೇ ಭರ್ಜರಿ ಟ್ರೋಲ್ ಗಳಿಗೂ ಆಹಾರವಾಗಿದ್ದ ದಿವ್ಯ ಸುರೇಶ್ ಅವರು ಮಾದ್ಯಮವೊಂದರ ಸಂದರ್ಶನದಲ್ಲಿ ಆಡಿರುವ ಮಾತುಗಳೀಗ ಸದ್ದು ಮಾಡಿದೆ. ಸಂದರ್ಶನದ ವೇಳೆಯಲ್ಲಿ ದಿವ್ಯ ತಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಮೊದಲು ನಡೆದ ಮಧುರವಾದ ಘಟನೆಗಳನ್ನು ಸ್ಮರಸಿದ್ದಾರೆ. ದಿವ್ಯ ಅವರು ಆ ದಿನ ನಾನು ಬಹಳ ಖುಷಿಯಾಗಿದ್ದೆ, ಮಂಜುಗೆ ನಾನು ಸರ್ಪ್ರೈಸ್ ಕೊಟ್ಟೆ, ಕೇಕ್ ತಿನ್ನಿಸಿದೆ, ಅದೊಂದು ವಿಶೇಷ ದಿನವಾಗಿತ್ತು. ಅಂದು ಮಂಜು ಪಾವಗಡ ಅವರ ಫೋಟೋ ವಾಲ್ ನಲ್ಲಿ ನನ್ನ ಫೋಟೋಗಳೇ ಹೆಚ್ಚಾಗಿದ್ದವು.

ಅದೆಲ್ಲಾ ನೋಡಿದಾಗ ಬಹಳ ಸಂತೋಷ ಪಟ್ಟೆ ಅಲ್ಲದೇ ಮನೆಯಿಂದ ಅಂದು ನಾನು ಹೊರಗೆ ಹೋಗ್ತಾ ಇದ್ದೀನಾ ಎನ್ನುವ ಅನುಮಾನದ ಜೊತೆಗೆ ಅಲ್ಲೇನೋ ಇದೆ ಅನಿಸೋಕೆ ಪ್ರಾರಂಭವಾಯಿತು ಎಂದು ಸಹಾ ಅವರು ಹೇಳಿದ್ದಾರೆ. ಆ ದಿನ ನಾನು ಮಂಜು ಲಿವಿಂಗ್ ಏರಿಯಾದಲ್ಲಿ ಭುಜಕ್ಕೆ ಭುಜ ಕೊಟ್ಟು ಮಲಗಿದ್ದೆವು. ನಾವು ರಾಧಾ ಕೃಷ್ಣರ ಹಾಗಿದ್ದೆವು. ಆದರೆ ಅದೇ ದಿನ ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಹಾಗಾಯಿತು. ಅದು ನನಗೆ ಬ್ರೇಕ್ ಅಪ್ ಗಿಂತ ಹೆಚ್ಚಿನ ನೋವನ್ನು ನೀಡಿತು. ಈಗ ಸಹಾ ವೀಡಿಯೋ ನೋಡಿದಾಗ ಬೇಸರವಾಗುತ್ತಿದೆ ಎಂದಿರುವ ದಿವ್ಯ, ಆದಷ್ಟು ಬೇಗ ಮಂಜುಗೆ ಮದುವೆ ಮಾಡಿ ಎಂದು ಅವರ ತಂದೆ ತಾಯಿಗೆ ಹೇಳಿರುವುದಾಗಿ ಹೇಳಿದ್ದಾರೆ.

ದಿವ್ಯ ಸುರೇಶ್ ಅವರ ಈ ಮಾತುಗಳು ಸಹಜವಾಗಿಯೇ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಕೆಲವು ಕಡೆ ಮಂಜು ದಿವ್ಯ ಸುರೇಶ್ ಮದುವೆ ಆಗೋದು ಗ್ಯಾರಂಟಿ ಎಂದರೆ, ದಿವ್ಯ ಅವರ ರಾಧಾ ಕೃಷ್ಣ ಎಂದೆಲ್ಲಾ ಹೇಳಿದ ಮಾತುಗಳನ್ನು ಕೇಳಿದ ಕೆಲವರು ಇದೆಲ್ಲಾ 53 ಲಕ್ಷ ದ ಎಫೆಕ್ಟ್ ಎಂದು ಕಾಮೆಂಟ್ ಗಳನ್ನು ಮಾಡಿರುವುದು ಸಹಾ ಸುಳ್ಳಲ್ಲ. ಒಟ್ಟಾರೆ ದಿವ್ಯ ಸುರೇಶ್ ಅವರ ಸಂದರ್ಶನ ಮಾತ್ರ ಭರ್ಜರಿ ಸದ್ದು ಮಾಡ್ತಾ ಇದೆ. ಬಿಗ್ ಬಾಸ್ ಆದ್ಮೇಲೆ ಮದುವೆ ಖಚಿತ ಅಂದಿದ್ದ ಮಂಜು ಅವರು ಸಹಾ ಮದುವೆಗೆ ಸಿದ್ಧವಾಗಿದ್ದಾರೆ. ಒಟ್ಟಾರೆ ಮಂಜು ಹಾಗೂ ದಿವ್ಯ ಸುರೇಶ್ ಮದುವೆಯಾಗ್ತಾರಾ? ಇದು ಅನೇಕರ ಪ್ರಶ್ನೆ.

Leave a Comment