ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾ‌ ಅಳವಡಿಸಿರುವುದು ಭಾರತದ ಈ ನಗರದಲ್ಲಿ: ಮಹಾನಗರಕ್ಕೊಂದು ವಿಶ್ವ ಮಟ್ಟದ ಮಾನ್ಯತೆ

Written by Soma Shekar

Published on:

---Join Our Channel---

ಭಾರತದ ರಾಜಧಾನಿ ದೆಹಲಿ ಇದೀಗ ಒಂದು ಹೊಸ ವಿಶ್ವದಲ್ಲಿ ದಾಖಲೆಯನ್ನು ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಗಮನವನ್ನು ಸೆಳೆಯುತ್ತಿದೆ. ದೇಶದ ರಾಜಧಾನಿ ದೆಹಲಿಯು ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿಕೊಂಡಿರುವ ನಗರ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಫೋರ್ಬ್ಸ್ ವರದಿ ಮಾಡಿರುವ ಪಟ್ಟಿಯ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿರುವ ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ವಿಶ್ವದ 150 ನಗರಗಳಲ್ಲಿ ವಿಶ್ಲೇಷಣೆಯನ್ನು ನಡೆಸಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಸಿಟಿವಿಗಳು ದೆಹಲಿಯಲ್ಲಿ ಇದೆಯೆಂದು ಫೋರ್ಬ್ಸ್ ವರದಿ ಮಾಡಿದೆ. ವಿಶ್ಲೇಷಣೆಯ ಪ್ರಕಾರ ದೆಹಲಿಯು ಪ್ರತಿ ಚದರ ಮೈಲಿಗೆ (1,826.6 ಕ್ಯಾಮೆರಾಗಳು) ಸಾರ್ವಜನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದೆ.

ದೆಹಲಿಯನ್ನು ಹೊರತು ಪಡಿಸಿದರೆ ತಮಿಳುನಾಡಿನ ರಾಜಧಾನಿ ಚೆನ್ನೈ ಅತಿ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿರುವ ನಗರಗಳಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಪ್ರತಿ ಚದರ ಕಿಲೋಮೀಟರ್ ಗೆ 609.9 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಮುಂಬೈ ಮಹಾನಗರವು ಚದರ ಕಿಲೋಮೀಟರಿಗೆ 157.4 ಸಿಸಿಟಿವಿ ಕ್ಯಾಮರಾ ಅಳವಡಿಕೆಯೊಂದಿಗೆ 18 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತದ ಎರಡು ಮಹಾನಗರಗಳು ದೆಹಲಿ ಮತ್ತು ಮುಂಬೈ ಈ ಪಟ್ಟಿಯಲ್ಲಿ ಮೊದಲ ಮತ್ತು ಮೂರನೇ ಸ್ಥಾನವನ್ನು ಪಡೆದಿರುವುದು ವಿಶೇಷವಾಗಿದೆ.

ದೆಹಲಿ ಚೀನಾದ ಹಲವು ನಗರಗಳನ್ನು ಈ ವಿಷಯದಲ್ಲಿ ಹಿಂದಿಕ್ಕಿದೆ. ಶೆನ್​ಜೆನ್ (520.1), ವುಕ್ಸಿ (472.7), ಕ್ವಿಂಗ್ಡವೊ (415.8), ಶಾಂಘೈ (408.5) ಚೀನಾದ ಈ ನಗರಗಳು ಪ್ರತಿ ಚದರ ಮೈಲಿಗೆ ಅತಿಹೆಚ್ಚು ಕ್ಯಾಮರಾ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ದೆಹಲಿಯು ಲಂಡನ್ (1,138.5), ಸಿಂಗಾಪುರ (387.6), ನ್ಯೂಯಾರ್ಕ್ (193.7) ಮತ್ತು ಮಾಸ್ಕೋ (210) ನಗರಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ವಿಷಯವಾಗಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಟ್ವೀಟ್ ಒಂದನ್ನು ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ

ಅವರು ತಮ್ಮ ಟ್ವೀಟ್ ನಲ್ಲಿ, “ಪ್ರತಿ ಚದರ ಕಿಲೋ ಮೀಟರ್ ವ್ಯಾಪ್ತಿಯ ಸಿಸಿ ಕ್ಯಾಮೆರಾ ಅಳವಡಿಕೆಯಲ್ಲಿ ನ್ಯೂ ಯಾರ್ಕ್ ಮತ್ತು ಲಂಡನ್ ನಂತಹ ನಗರಗಳನ್ನು ದೆಹಲಿ ಹಿಂದಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ದೆಹಲಿಯು 1826 ಕ್ಯಾಮೆರಾಗಳನ್ನು ಹೊಂದಿದೆ, ಲಂಡನ್ ಪ್ರತಿ ಚದರ ಮೈಲಿಗೆ 1138 ಕ್ಯಾಮೆರಾಗಳನ್ನು ಹೊಂದಿದೆ. ಈ ಯೋಜನೆಯಲ್ಲಿ ಕೆಲಸ ಮಾಡಿದ ನಮ್ಮ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ನನ್ನ ಅಭಿನಂದನೆಗಳು ಕಡಿಮೆ ಸಮಯದಲ್ಲಿ ಇದನ್ನು ಸಾಧಿಸಿದ್ದಾರೆ ” ಎಂದು ಅಭಿನಂದಿಸಿದ್ದಾರೆ.

Leave a Comment