ವಿಶ್ರಾಂತಿ ಬೇಕಿದ್ರೆ IPL ಬಿಡಿ, ದೇಶಕ್ಕಾಗಿ ಆಡೋವಾಗಲ್ಲ ವಿಶ್ರಾಂತಿ!! ಸುನೀಲ್ ಗವಾಸ್ಕರ್ ಸಿಟ್ಟು

Entertainment Featured-Articles News Sports

ಭಾರತದ ಮಾಜಿ ಕ್ರಿಕೆಟ್ ಆಟಗಾರ, ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅವರು ಭಾರತದ ಪ್ರಸ್ತುತ ಕ್ರಿಕೆಟ್ ತಂಡದಲ್ಲಿರುವ ಸೀನಿಯರ್ ಆಟಗಾರರ ವಿ ರುvದ್ಧ ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ. ಕ್ರಿಕೆಟ್ ಆಟಗಾರರು ಅಂತರರಾಷ್ಟ್ರೀಯ ಸಿರೀಸ್ ಗಳಿಂದ ವಿಶ್ರಾಂತಿಯನ್ನು ಪಡೆದುಕೊಂಡು, ಐಪಿಎಲ್ ಪಂದ್ಯಗಳಲ್ಲಾದರೆ ವಿಶ್ರಾಂತಿ ಪಡೆಯದೇ ಆಟವಾಡುತ್ತಿರುವುದನ್ನು ತೀ ವ್ರ ವಾಗಿ ಖಂಡಿಸಿದ್ದಾರೆ. ಅವರು ಹೇಳಿರುವ ವಿಚಾರಗಳು ಹಾಗೂ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವೆಸ್ಟ್ ಇಂಡೀಸ್ ಜೊತೆಗೆ ನಡೆಯುತ್ತಿರುವ ಸೀರೀಸ್ ಪಂದ್ಯಗಳಲ್ಲಿ ಸೀನಿಯರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಅವರಿಗೆ ವಿಶ್ರಾಂತಿಯನ್ನು ನೀಡಿದ ಬೆನ್ನಲ್ಲೇ ಸುನಿಲ್ ಗವಾಸ್ಕರ್ ಅವರು ನೀಡಿರುವ ಹೇಳಿಕೆಗಳು ಅಥವಾ ಮಾಡಿರುವ ವ್ಯಾಖ್ಯಾನಗಳು ಈಗ ಎಲ್ಲರ ಗಮನವನ್ನು ಸೆಳೆದಿವೆ. ಆಟಗಾರರಿಗೆ ವಿಶ್ರಾಂತಿಯನ್ನು ನೀಡಬೇಕು ಎನ್ನುವ ಅಭಿಪ್ರಾಯದೊಂದಿಗೆ ತಾನು ಏಕೀಭವಿಸುವುದಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ವಾಹಿನಿಯೊಂದರ ಸಂದರ್ಶನದಲ್ಲಿ ಅವರು ಮಾತನಾಡುತ್ತಾ, ಆಟಗಾರರಿಗೆ ವಿಶ್ರಾಂತಿಯನ್ನು ನೀಡಬೇಕು ಎನ್ನುವ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ, ಅದರ ಅಗತ್ಯವಿಲ್ಲ. ಐಪಿಎಲ್ ಗಾಗಿ ವಿಶ್ರಾಂತಿ ಇಲ್ಲದೇ ಆಡಿ ಈಗ ದೇಶಕ್ಕಾಗಿ ಆಡುವ ಸಂದರ್ಭದಲ್ಲಿ ಏಕೆ ವಿಶ್ರಾಂತಿ ಬೇಕೆಂದು ಕೇಳುತ್ತಿದ್ದಾರೆ. ನೀವು ಭಾರತದ ಪರವಾಗಿ ಆಡಬೇಕಿದೆ. ವಿಶ್ರಾಂತಿಯ ಕುರಿತಾಗಿ ಮಾತನಾಡಬೇಡಿ. ಟಿ-ಟ್ವೆಂಟಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ಕೇವಲ 20 ಓವರ್ ಗಳು ಮಾತ್ರವೇ ಇರುತ್ತದೆ.

ಇದು ನಿಮ್ಮ ಶರೀರದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದಿಲ್ಲ. ಟೆಸ್ಟ್ ಮ್ಯಾಚ್ ಗಳಲ್ಲಾದರೆ ಅದು ಮನಸ್ಸು ಮತ್ತು ಶರೀರದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎನ್ನುವುದು ನನಗೆ ಅರ್ಥವಾಗುತ್ತದೆ. ಆದರೆ ಟಿ20ಯಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.
ವಿಶ್ರಾಂತಿಯ ವಿಚಾರದಲ್ಲಿ ಕ್ರಿಕೆಟ್ ಬೋರ್ಡ್ ಆಫ್ ಇಂಡಿಯಾ ಮಧ್ಯ ಪ್ರವೇಶೆ ಮಾಡುವ ಅಗತ್ಯವಿದೆ. ಬಿಸಿಸಿಐ ಈ ವಿಶ್ರಾಂತಿ ವಿಧಾನದ ಕುರಿತಾಗಿ ಪರಾಮರ್ಶೆ ನಡೆಸಬೇಕಾಗಿದೆ.

ಗ್ರೇಡ್ ಎ ಕ್ರಿಕೆಟ್ ಆಟಗಾರರಿಗೆ ಒಳ್ಳೊಳ್ಳೆ ಕಾಂಟ್ರಾಕ್ಟ್ ಗಳು ಬಂದಿದೆ. ಪ್ರತಿ ಮ್ಯಾಚ್ ಗಳ ನಂತರ ಅವರಿಗೆ ಹಣ ಬರುತ್ತಿದೆ. ಅದೇ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದರೆ ಕಂಪನಿಯ ಸಿಇಒ ಅಥವಾ ಅಲ್ಲಿನ ಎಂಡಿಗಳಿಗೆ ವಿಶ್ರಾಂತಿಯನ್ನು ನೀಡಲಾಗುತ್ತದೆಯೇನು?? ಇಂದು ಸುನೀಲ್ ಗವಾಸ್ಕರ್ ಅವರು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.