ವಿಶೇಷ ಚೇತನ ಮಕ್ಕಳಿಗೆ ತಾಯಿಯಾದ ನಟಿ ಶ್ರೀಲೀಲಾ!! ಅಪಾರ ಮೆಚ್ಚುಗೆ ಹರಿಸುತ್ತಿದ್ದಾರೆ ನೆಟ್ಟಿಗರು

0 3

ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ನಟಿ ಶ್ರೀಲೀಲಾ, ನಂತರ ಭರಾಟೆ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಇನ್ನಷ್ಟು ಹತ್ತಿರವಾದರು. ಪ್ರಸ್ತುತ ಬೈಟು ಲವ್ ಸಿನಿಮಾ ವಿಚಾರವಾಗಿ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ಶ್ರೀಲೀಲಾ ಪೆಳ್ಳಿ ಸಂದಡಿ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೂ ಕೂಡಾ ಕಾಲಿಟ್ಟಿದ್ದಾರೆ. ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯದೇ ಹೋದರೂ, ಶ್ರೀಲೀಲಾ ಅವರ ಜನಪ್ರಿಯತೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶವನ್ನು ಪಡೆದುಕೊಂಡು ಸುದ್ದಿಯಾಗಿದ್ದಾರೆ.

ಸದಾ ಸಿನಿಮಾಗಳ ವಿಷಯವಾಗಿಯೇ ಸುದ್ದಿಯಲ್ಲಿರುತ್ತದ್ದ ನಟಿ ಶ್ರೀಲೀಲಾ ಇದೀಗ ತಾವು ಮಾಡಿರುವ ಒಂದು ಮಾನವೀಯ ಹಾಗೂ ಮಾದರಿ ಕಾರ್ಯದಿಂದ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೌದು ನಟಿ ಶ್ರೀ ಲೀಲಾ ಅವರು ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕ ಎರಡು ಮಕ್ಕಳ ತಾಯಿಯಾಗಿದ್ದರೆ. ಯುವನಟಿಯು ಮದುವೆಗೂ ಮುಂಚೆ ಹೀಗೆ ಮಕ್ಕಳನ್ನು, ಅದರಲ್ಲೂ ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆದುಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಟಿ ಶ್ರೀಲೀಲಾ ಅವರು ಪ್ರಸ್ತುತ ನಟ ಧನ್ವೀರ್ ಅವರು ನಾಯಕನಾಗಿರುವ ಬೈಟು ಲವ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥಾ ಹಂದರದಲ್ಲಿ ಅನಾಥ ಮಕ್ಕಳ ಕಥೆಯೂ ಕೂಡಾ ಬೆಸೆದಿದ್ದು, ಸಿನಿಮಾದ ಕೆಲವು ಸನ್ನಿವೇಶಗಳಲ್ಲಿ ನಟಿ ಶ್ರೀಲೀಲಾ ಭಾವುಕರಾಗಿದ್ದರು ಎನ್ನಲಾಗಿದೆ. ಅಲ್ಲದೇ ಸಿನಿಮಾದಲ್ಲಿ ನಟಿಸುವಾಗಲೇ ಅವರಿಗೆ ಮಕ್ಕಳೊಂದಿಗೆ ಒಂದು ರೀತಿಯ ಭಾವನಾತ್ಮಕ ಬಂಧ ಬೆಸೆದಿತ್ತು ಎಂದು ತಿಳಿದುಬಂದಿದೆ.

ತಮ್ಮ ಬೈ ಟು ಲವ್ ಸಿನಿಮಾದ ಪ್ರಚಾರ ಕಾರ್ಯದ ಅಂಗವಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿದೆ ಚಿತ್ರತಂಡ. ಈ ವೇಳೆ ಮೈಸೂರಿನಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ನಟಿ ಶ್ರೀಲೀಲಾ ಅವರು ಭೇಟಿ ನೀಡಿದ್ದಾರೆ. ಅವರು ಇಲ್ಲಿನ ವಿಶೇಷ ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆದಿದ್ದಾರೆ. ಆಗ ನಟಿ ಈ ಮಕ್ಕಳನ್ನು ಕಂಡು ಭಾವುಕರಾಗಿದ್ದಾರೆ. ಅಲ್ಲದೇ ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿರುವ ಎರಡು ಮಕ್ಕಳನ್ನು ದತ್ತು ಪಡೆದು ಕೊಂಡಿದ್ದಾರೆ. 8 ತಿಂಗಳ ಗುರು ಹಾಗೂ ಶೋಭಿತಾ ಎನ್ನುವ ಮುದ್ದು ಕಂದಮ್ಮಗಳನ್ನು ಶ್ರೀಲೀಲಾ ದತ್ತು ಪಡೆದುಕೊಂಡಿದ್ದಾರೆ.

ಈ ಎರಡು ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದಾರೆ ನಟಿ. ಚಿಕ್ಕವಯಸ್ಸಿನಲ್ಲಿಯೇ ಯುವ ನಟಿಯೊಬ್ಬರು ಹೀಗೆ ಮಕ್ಕಳನ್ನು ದತ್ತು ಪಡೆದಿರುವುದು ಇದೇ ಮೊದಲ ಬಾರಿ. ಅನಾಥ ಮಕ್ಕಳಿಗೆ ತಾಯಿಯಾಗುವ ಮೂಲಕ ನಟಿ ಶ್ರೀಲೀಲಾ ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾ ಗಳಲ್ಲಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ.

Leave A Reply

Your email address will not be published.