ನಟ ಚಂದನ್ ಕುಮಾರ್ ಶೇರ್ ಮಾಡಿದ ಈ ಫೋಟೋದಲ್ಲಿದೆ ಒಂದು ವಿಶೇಷ: ನಟ ಹೇಳಿದ ಆ ವಿಶೇಷವೇನು??
ಕನ್ನಡ ಕಿರುತೆರೆಯ ಲೋಕದಲ್ಲಿನ ಜನಪ್ರಿಯ ಹಾಗೂ ಪ್ರಮುಖ ನಟನಾಗಿ ಗುರ್ತಿಸಿಕೊಂಡಿದ್ದಾರೆ ನಟ ಚಂದನ್ ಕುಮಾರ್. ಕನ್ನಡ ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟ ಕೂಡಾ ಆಗಿರುವ ಚಂದನ್ ಕುಮಾರ್ ಅವರು ಒಂದಾದ ನಂತರ ಮತ್ತೊಂದು ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಚಂದನ್ ಕುಮಾರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿದ್ದು, ಅವರನ್ನು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಿಸುವ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವಿಶೇಷ ಫೋಟೋಗಳನ್ನು ಹಾಗೂ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುವ ಚಂದನ್ ಅವರು ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಶೇಷ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಚಂದನ್ ಕುಮಾರ್ ಅವರು ತಮ್ಮ ಬಹುಕಾಲದ ಗೆಳತಿ ಕವಿತಾ ಗೌಡ ಅವರನ್ನು ಏಪ್ರಿಲ್ ನಲ್ಲಿ ಮದುವೆಯಾದ ವಿಷಯ ದೊಡ್ಡ ಸದ್ದನ್ನು ಮಾಡಿತ್ತು. ಎಲ್ಲೆಲ್ಲೂ ಅವರ ಮದುವೆ ಫೋಟೋ, ವೀಡಿಯೋಗಳು ವೈರಲ್ ಆಗಿತ್ತು.
ಚಂದನ್ ಅವರು ಶೇರ್ ಮಾಡಿಕೊಳ್ಳುವ ಫೋಟೋ ಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರುತ್ತದೆ. ಈ ಬಾರಿ ಅವರು ಹಂಚಿಕೊಂಡ ಫೋಟೋಗೆ ಒಂದು ವಿಶೇಷತೆ ಕೂಡಾ ಇದೆ. ಏಕೆಂದರೆ ಈ ಫೋಟೋ ಮೂಲಕ ಅವರು ತಮ್ಮ ಪತ್ನಿಯ ಜೊತೆಗಿನ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. ಹೌದು ಚಂದನ್ ಅವರು ತಾವು ಹಾಗೂ ಕವಿತಾ ಗೌಡ ಅವರು ಜೊತೆಯಾಗಿರುವ ಒಂದು ಹಳೆಯ ಫೋಟೋ ವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋ ವನ್ನು ಶೇರ್ ಮಾಡಿಕೊಂಡ ಚಂದನ್ ಅವರು ಅದರ ಕ್ಯಾಪ್ಷನ್ ನಲ್ಲಿ ನಮ್ಮ ಮೊದಲ ಫೋಟೋ 2013 ಎಂದು ಬರೆದುಕೊಂಡು, ಆ ಫೋಟೋ ತಾನು ಮತ್ತು ಕವಿತಾ ಗೌಡ ಅವರು ಜೊತೆಯಾಗಿ ತೆಗಿಸಿಕೊಂಡಿದ್ದ ಮೊದಲ ಫೋಟೋ ಎಂದು ಹಿಂದಿನ ನೆನಪನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಚಂದನ್ ಮತ್ತು ಕವಿತಾ ಜೊತೆಯಾಗಿ ಕಾಣಿಸಿಕೊಂಡಿದ್ದು ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ. ಅನಂತರ ಇಬ್ಬರೂ ಸಹಾ ಆ ಸೀರಿಯಲ್ ನಿಂದ ಒಬ್ಬರಾದ ನಂತರ ಇನ್ನೊಬ್ಬರು ಹೊರ ಬಂದಿದ್ದರು.