ವಿವಾಹ ಜೀವನಕ್ಕೆ ಅಡಿಯಿಡುತ್ತಿದ್ದಾರೆ ಜನಪ್ರಿಯ ಕನ್ನಡ ಸೀರಿಯಲ್ ನ ನಟಿ: ಯಾರು ಈ ನಟಿ???

0 4

ಕಳೆದ ಒಂದೂವರೆ ವರ್ಷದಿಂದಲೂ ಸಹಾ ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಅನೇಕ ಕಲಾವಿದರು ಸಪ್ತಪದಿಯನ್ನು ತುಳಿದು ಹೊಸ ಜೀವನಕ್ಕೆ ಅಡಿಯನ್ನು ಇಟ್ಟು, ದಾಂಪತ್ಯ ಜೀವನದ ಸವಿಯನ್ನು ಸವಿಯುತ್ತಿದ್ದಾರೆ. ಆದರೆ ಕೊರೊನಾ ಕಾರಣದಿಂದಾಗಿ ಹಲವು ಸೆಲೆಬ್ರಿಟಿಗಳ ಮದುವೆ ಸದ್ದು, ಅಬ್ಬರ, ಆಡಂಬರ ಹಾಗೂ ಸುದ್ದಿಗಳಾಗದೇ ಬಹಳ ಸರಳವಾಗಿ, ಕೆಲವೇ ಬಂಧುಗಳು, ಆಪ್ತರ ಸಮ್ಮುಖದಲ್ಲಿ ನಡೆದಿದೆ. ಹೀಗೆ ಸಾಲು ಸಾಲು ಕಲಾವಿದರು ಹೊಸ ಜೀವನದ ಹೊಸ್ತಿಲಿನಲ್ಲಿ ಇರುವಾಗಲೇ ಕನ್ನಡದ ಜನಪ್ರಿಯ ಸೀರಿಯಲ್ ಕಮಲಿ ಯಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿರುವ ನಟಿಯೊಬ್ಬರು ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಹಸೆ ಮಣೆಯನ್ನು ಏರಲು ಸಜ್ಜಾಗಿದ್ದಾರೆ. ನಟಿಯ ನಿಶ್ಚಿತಾರ್ಥ ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಶುಭಪ್ರದವಾಗಿ ನೆರವೇರಿದೆ.

ಕಮಲಿ ಕನ್ನಡ ಕಿರುತೆರೆಯ ಜಗತ್ತಿನಲ್ಲಿ ಜನಪ್ರಿಯ ಸೀರಿಯಲ್ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈಗ ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಟಿಯೊಬ್ಬರು ತಮ್ಮ ವಿವಾಹಕ್ಕಾಗಿ ಸಜ್ಜಾಗುತ್ತಿದ್ದಾರೆ. ಒಂದೆಡೆ ಸೀರಿಯಲ್ ನಲ್ಲಿ ನಾಯಕಿ ಕಮಲಿ ಹಾಗೂ ನಾಯಕ ರಿಷಿಯ ಕಲ್ಯಾಣೋತ್ಸವ ಎಪಿಸೋಡ್ ಗಳು ನಡೆಯುವಾಗಲೇ ಇತ್ತ ನಿಜ ಜೀವನದಲ್ಲಿ ಕಮಲಿ ಸ್ನೇಹಿತೆ ನಿಂಗಿ ಯಾಗಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರುವ ನಟಿ ಅಂಕಿತ ಅವರು ನಿಜ ಜೀವನದಲ್ಲಿ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಹೌದು ನಟಿ ಅಂಕಿತ ಅವರು ಕಮಲಿ ಸೀರಿಯಲ್ ನ ನಿಂಗಿ ಪಾತ್ರದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತವಾಗಿರುವ ನಟಿ.

ಕಮಲಿ ಸೀರಿಯಲ್ ನಲ್ಲಿ ನಾಯಕಿ ಕಮಲಿಗೆ ಸದಾ ಜೊತೆಯಾಗಿರುವ ಪಾತ್ರ ನಿಂಗಿಯದ್ದು, ಜೋರಾಗಿ ಗಡಸುಗಿತ್ತಿ , ಗ್ರಾಮೀಣ ಭಾಷೆಯೊಂದಿಗೆ ಜನರ ಮನಸ್ಸನ್ನು ಗೆದ್ದಿರುವ ಪಾತ್ರ ನಿಂಗಿಯದ್ದ. ಈ ನಿಂಗಿ ಪಾತ್ರಕ್ಕೆ ಜೀವ ತುಂಬಿರುವ ನಟಿ ಅಂಕಿತ. ಅಂಕಿತ ಅವರು ಕಮಲಿ ಸೀರಿಯಲ್ ಗೂ ಮೊದಲು ಕಾರ್ಯಕ್ರಮ ಒಂದರ ನಿರೂಪಣೆ ಮಾಡಿದ್ದರು, ಬೇರೊಂದು ಸೀರಿಯಲ್ ನಲ್ಲೂ ಕಾಣಿಸಿಕೊಂಡಿದ್ರು, ಅಲ್ಲದೇ ಸೀರಿಯಲ್ ಜಗತ್ತಿಗೆ ಕಾಲಿಡುವ ಮುನ್ನ ಒಂದು ಬ್ಯೂಟಿ ಕಾಂಟೆಸ್ಟ್ ನ ವಿನ್ನರ್ ಸಹಾ ಆಗಿದ್ದರು
ಆದರೆ ಇವೆಲ್ಲವುಗಳ ಹೊರತಾಗಿ ಕಮಲಿ ಸೀರಿಯಲ್ ನ ನಿಂಗಿ ಪಾತ್ರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದು ಕೊಟ್ಟಿದೆ.

ಇದೀಗ ಈ ನಟಿ ಜೀವನದ ಇನ್ನೊಂದು ಮಹತ್ವದ ಘಟ್ಟಕ್ಕೆ ಅಡಿಯಿಡುತ್ತಿದ್ದಾರೆ. ಅಂಕಿತಾ ಅವರ ನಿಶ್ಚಿತಾರ್ಥ ಜುಲೈ ಮೊದಲ ವಾರದಲ್ಲೇ ನಡೆದಿದೆ ಎನ್ನಲಾಗಿದ್ದು, ಕುಟುಂಬದವರ ಸಮ್ಮುಖದಲ್ಲಿ ಸಂಭ್ರಮದಿಂದ ನಿಶ್ಚಿತಾರ್ಥ ನಡೆದಿದೆ. ಅಂಕಿತಾ ಅವರು ಮದುವೆಯಾಗಲು ಹೊರಟಿರುವ ಹುಡುಗನ ಹೆಸರು ಸುಹಾಸ್. ಇವರು ಫೋಟೋ ಗ್ರಫಿಯಲ್ಲಿ ಅದರಲ್ಲೂ ವಿಶೇಷವಾಗಿ ವೈಲ್ಡ್ ಲೈಫ್ ಫೋಟೋಗ್ರಫಿ ಯಲ್ಲಿ ವಿಶೇಷ ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಸುಹಾಸ್ ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಅಂಕಿತಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಹಾಗೂ ಆಪ್ತರು ಅವರಿಗೆ ಶುಭ ಹಾರೈಸಿದ್ದಾರೆ.

Leave A Reply

Your email address will not be published.