ವಿವಾಹದ ತಿಂಗಳ ನಂತರ, ಪತ್ನಿಯಿಂದ ದೂರಾಗ್ತಿದ್ದಾರೆ ರವೀಂದ್ರನ್: ಈ ದೂರಕ್ಕೆ ಅಸಲಿ ಕಾರಣವೇನು ಗೊತ್ತಾ?

Entertainment Featured-Articles Movies News

ಮದುವೆಯ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಯಾವುದಾದರೂ ಸೆಲೆಬ್ರಿಟಿ ಜೋಡಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿದೆ ಎಂದರೆ ಅದು ತಮಿಳು ಸಿನಿಮಾ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಮತ್ತು ತಮಿಳು ಕಿರುತೆರೆಯ ನಟಿ ಮತ್ತು ನಿರೂಪಕರಾಗಿರುವ ಮಹಾಲಕ್ಷ್ಮಿ ಜೋಡಿಯ ಮದುವೆಯಾಗಿದೆ.‌ ಹೌದು, ರವೀಂದ್ರನ್ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಸಹಜವಾಗಿಯೇ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳು ಹರಿದುಬಂದಿದ್ದವು. ಆದರೆ ಅದೇ ಸಮಯದಲ್ಲಿ ಈ ಜೋಡಿಯನ್ನು ಕುರಿತಾಗಿ ಸಾಕಷ್ಟು ಟ್ರೋಲ್ ಮಾಡಲಾಯಿತು, ಈ ಜೋಡಿಯ ಕುರಿತಾಗಿ ವ್ಯಂಗ್ಯ ಮಾಡಲಾಯಿತು.

ತಮ್ಮ ಮದುವೆಯ ಕುರಿತಾಗಿ ಸಾಕಷ್ಟು ಟೀಕೆಗಳು ಹರಿದು ಬಂದರೂ ಕೂಡಾ ಈ ಜೋಡಿ ಮಾತ್ರ ಮದುವೆಯ ನಂತರ ತಮ್ಮ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸುತ್ತಾ, ತಾವು ಖುಷಿಪಡುತ್ತಾ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದರು. ಆದರೆ ಇದೀಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಮದುವೆಯಾಗಿ ಇನ್ನೂ ಒಂದು ತಿಂಗಳು ಆಗುವ ವೇಳೆಗೆ ರವೀಂದ್ರನ್ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ಜೋಡಿ ಒಬ್ಬರಿಂದ ಒಬ್ಬರು ದೂರ ಆಗಬೇಕಾದ ಸಂದರ್ಭವೊಂದು ಒದಗಿ ಬಂದಿದೆ. ಇದು ಅವರ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರ್ ತಿರುಪತಿಯಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಇಬ್ಬರಿಗೂ ಕೂಡಾ ಇದು ಎರಡನೇ ಮದುವೆ ಎನ್ನುವ ವಿಚಾರವನ್ನು ಇಟ್ಟುಕೊಂಡು ಅವರನ್ನು ಸಾಕಷ್ಟು ಟೀಕೆ ಮಾಡಲಾಗಿದೆ. ಆದರೆ ಈ ಜೋಡಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಮಹಾಲಕ್ಷ್ಮಿ ಅವರು ರವೀಂದ್ರನ್ ಚಂದ್ರಶೇಖರ್ ಅವರನ್ನು ಸಿನಿಮಾ ಒಂದರ ಚಿತ್ರೀಕರಣಸ ವೇಳೆಯಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಅವರ ಸ್ನೇಹ, ದಿನಕಳೆದಂತೆ ಪ್ರೀತಿಯಾಗಿ ಮಾರ್ಪಟ್ಟು ಕೊನೆಗೆ ಇಬ್ಬರು ವಿವಾಹವನ್ನು ಮಾಡಿಕೊಳ್ಳಲು ನಿಶ್ಚಯಿಸಿದರು. ಮೊದಲ ಮದುವೆಯ ವಿಚ್ಛೇದನದ ನಂತರ ಒಂಟಿಯಾಗಿದ್ದ ಮಹಾಲಕ್ಷ್ಮಿ ಅವರು ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಹಾಗಾದರೆ ಮದುವೆಯ ನಂತರ ಬಹಳ ಸಂತೋಷವಾಗಿದ್ದ, ಈ ಜೋಡಿ ಈಗ ದೂರವಾಗುತ್ತಿರುವುದಾದರೂ ಏತಕ್ಕೆ ಎನ್ನುವುದಾದರೆ ತಮಿಳಿನಲ್ಲಿ ಇದೇ ಅಕ್ಟೋಬರ್ 9 ರಿಂದ ಬಿಗ್ ಬಾಸ್ ನ ಹೊಸ ಸೀಸನ್ ಪ್ರಾರಂಭವಾಗುತ್ತಿದ್ದು, ಅದರಲ್ಲಿ ಸ್ಪರ್ಧಿಯಾಗಿ ಬಿಗ್ ಪಾಸ್ ಮನೆಯನ್ನು ಪ್ರವೇಶಿಸಲು ರವೀಂದ್ರನ್ ಚಂದ್ರಶೇಖರ್ ಅವರಿಗೆ ಆಹ್ವಾನ ಬಂದಿದೆ ಎನ್ನಲಾಗಿದೆ. ಅವರು ಈ ಅವಕಾಶವನ್ನು ಒಪ್ಪಿ ಬಿಗ್ ಬಾಸ್ ಮನೆಗೆ ತೆರಳಲು ಸಜ್ಜಾಗುತ್ತಿದ್ದಾರೆ. ಒಟ್ಟಿಗೆ ಇನ್ನಷ್ಟು ಕಾಲವನ್ನು ಕಳೆಯಬೇಕೆಂದು ಆಲೋಚಿಸಿದ್ದ ಮಹಾಲಕ್ಷ್ಮಿ ಅವರಿಗೆ ಇದು ನಿರಾಸೆಯಾದರೂ ಸಹಾ, ತನ್ನ ಪತಿಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.