ವಿರಾಟ್ ಕೊಹ್ಲಿ ಬಯೋಪಿಕ್, “ನನ್ನ ಬಿಟ್ಟು ಬೇರೆ ಯಾರೂ ಮಾಡಕ್ಕಾಗಲ್ಲ” ಅಂದ ನಟ: ನೆಟ್ಟಿಗರು ಕೊಟ್ರು ತಿರುಗೇಟು

Entertainment Featured-Articles Movies News

ರೌಡಿ ಹೀರೋ ಎನ್ನುವ ಖ್ಯಾತಿಯನ್ನು ಪಡೆದಿರುವ ನಟ ವಿಜಯ ದೇವರಕೊಂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ನಟ ವಿಜಯ ದೇವರಕೊಂಡ ಲೈಗರ್ ಸಿನಿಮಾದ ಮೂಲಕ ದೊಡ್ಡ ಸೋಲಿನ ರುಚಿಯನ್ನು ನೋಡಿದ್ದಾರೆ. ಪ್ರಸ್ತುತ ಅವರು ಪೂರಿ ಜಗನ್ನಾಥ್ ನಿರ್ದೇಶನದ ಜನ ಗಣ ಮನ ಮತ್ತು ನಿರ್ದೇಶಕ ಶಿವ ಅವರ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿರುವ ಖುಷಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಚಿತ್ರೀಕರಣದ ನಡುವೆ ಸ್ವಲ್ಪ ಬ್ರೇಕ್ ಪಡೆದುಕೊಂಡ ನಟ ಇತ್ತೀಚಿಗೆ ದುಬೈನಲ್ಲಿ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ದುಬೈಗೆ ತೆರಳಿದ ವಿಷಯ ಎಲ್ಲರಿಗೂ ತಿಳಿದೇ ಇದೆ. ಆ ಈವೆಂಟ್ ವೇಳೆ ನಟ ನೀಡಿರುವ ಒಂದು ಭೀ ಭ ತ್ಸ ಹೇಳಿಕೆ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ನಟ ವಿಜಯ ದೇವರಕೊಂಡು ಹೇಳಿದ ವಿಚಾರ ಕೇಳಿ ಎಲ್ಲರೂ ಶಾ ಕ್ ಆಗಿದ್ದಾರೆ. ಹಾಗಾದರೆ ನಟ ಹೇಳಿದ್ದೇನು ಎನ್ನುವುದಾದರೆ, ತಾನು ಭಾರತೀಯ ದಿಗ್ಗಜ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರ ಬಯೋಪಿಕ್ ನಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಆದರೆ ಈ ಮಾತನ್ನು ನಟ ಹೇಳಿದ ದಾಟಿಯನ್ನು ಕೇಳಿ ಕೆಲವರು ನಟನನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಸಹಾ ಮಾಡುತ್ತಿದ್ದಾರೆ. ನಟ ವಿಜಯ ದೇವರಕೊಂಡ ವಿರಾಟ್ ಕೊಹ್ಲಿ ಬಯೋಪಿಕ್ ಮಾಡ್ತಾರೋ, ಇಲ್ಲವೋ ಮುಂದಿನ ಮಾತು, ಆದರೆ ಅವರು ನೀಡಿದ ಹೇಳಿಕೆ ದೊಡ್ಡ ಸುದ್ದಿಯಾಗಿದೆ‌.

ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ಅನ್ನು ಸುಶಾಂತ್ ರಜಪೂತ್ ನಾಯಕನಾಗಿ ಈಗಾಗಲೇ ನಿರ್ಮಾಣ ಮಾಡಿದ್ದಾರೆ. ನಾನು ಈಗ ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದೇನೆ. ವಿರಾಟ್ ಪಾತ್ರವನ್ನು ನಾನು ಬಿಟ್ಟು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದು ನಟ ಹೇಳಿದ್ದಾರೆ. ಪ್ರಸ್ತುತ ನಟನ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಲೈಗರ್ ಸಿನಿಮಾಕ್ಕೂ ಹೀಗೆ ಹೇಳಿದೆ, ಆದರೆ ಆಗಿದ್ದೇನು? ಎಂದು ಕೆಲವರು ನಟ ಕಾಲೆಳೆಯುವ ಕೆಲಸವನ್ನು ಮಾಡಿದ್ದಾರೆ.

ಇನ್ನೂ ಕೆಲವರು, ಇಂತಹ ಓವರ್ ಕಾನ್ಫಿಡೆನ್ಸ್ ಕಡಿಮೆ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂದು ಸಲಹೆಯನ್ನು ನೀಡಿದ್ದಾರೆ. ಇನ್ನೂ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಬರುವುದು ಖಂಡಿತ ಎನ್ನಲಾಗಿದೆ. ಆದರೆ ಆ ಸಿನಿಮಾದಲ್ಲಿ ಯಾರು ನಾಯಕನಾಗಲಿದ್ದಾರೆ ಎನ್ನುವುದು ತಿಳಿಯಬೇಕಿದೆ. ಆದರೆ ನಟ ವಿಜಯ ದೇವರಕೊಂಡ ಹೇಳಿದ ಮಾತುಗಳನ್ನು ಕೇಳಿ ನಟನ ಅಭಿಮಾನಿಗಳು ಮಾತ್ರ ಸಿನಿಮಾದಲ್ಲಿ ವಿಜಯ್ ವಿರಾಟ್ ಪಾತ್ರ ಮಾಡಿದರೆ ಹೇಗಿರುತ್ತದೆ ಎಂದು ಊಹಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published.