ವಿಮಾನದಲ್ಲಿ ಇದೆಂತ ಗಲಾಟೆ? ಅರಚಾಟ, ಚೀರಾಟಗಳ ಮಧ್ಯೆ 6 ಜನ ಆದ್ರು ಅರೆಸ್ಟ್: ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video

ವಿಮಾನ ದಲ್ಲಿ ಪ್ರಯಾಣ ಮಾಡುವವರಿಗೆ ಈ ಸುದ್ದಿಯನ್ನು ಕೇಳಿದರೆ ಖಂಡಿತ ಸಿಕ್ಕಾಪಟ್ಟೆ ಅಚ್ಚರಿ ಆಗಬಹುದು. ‌ಏಕೆಂದರೆ ಖಂಡಿತ ನೀವು ವಿಮಾನದಲ್ಲಿ ಇಂತಹುದೊಂದು ಜಗಳ, ಹೊಡೆದಾಟವನ್ನು ನೋಡಿರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿರುವ ಈ ವೀಡಿಯೋದಲ್ಲಿ ವಿಮಾನದಲ್ಲಿ ನಡೆದ ಒಂದು ಗಲಾಟೆಯ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ವಿಮಾನಗಳಲ್ಲೂ ಸಹಾ ಜನ ಹೀಗೆಲ್ಲಾ ಜಗಳಕ್ಕೆ ಇಳಿಯುವರೇ ಎನ್ನುವ ಅನುಮಾನ ಉಂಟಾಗುವುದು ಸಹಜ.

ವೈರಲ್ ಆಗಿರುವ ವಿಡಿಯೋ ನೋಡಿದಾಗ ನಮಗೆ ಆ ಜಗಳದ ತೀವ್ರತೆ ಹೇಗಿತ್ತು ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ವೀಡಿಯೋದಲ್ಲಿ ನೋಡಿದಾಗ ವಿಮಾನದಲ್ಲಿ ಜಗಳ ಯಾವ ಮಟ್ಡಕ್ಕೆ ನಡೆದಿದೆ ಎಂದರೆ ವಿಮಾನದೊಳಗೆ ಕೂಗಾಟ, ಅರಚಾಟಗಳು ಸಹಾ ಕೇಳಿ ಬರುತ್ತಿದ್ದು, ಸಂಪೂರ್ಣವಾಗಿ ಒಂದು ಗದ್ದಲದ ಹಾಗೂ ಅಶಾಂತಿಯ ವಾತಾವರಣ ಅಲ್ಲಿ ನಿರ್ಮಾಣ ಆಗಿರುವುದು ನಮಗೆ ಕಾಣುತ್ತದೆ. ಅದೇ ವೇಳೆ ಅಚ್ಚರಿ ಮತ್ತು ಗಾಬರಿಯನ್ನು ಉಂಟು ಮಾಡುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗ ಈ ವೀಡಿಯೋ ವೈರಲ್ ಆಗುತ್ತಿದೆ. ಡಚ್ ನ್ಯೂಸ್ ನ ಪ್ರಕಾರ ಈ ಘಟನೆಯು ಕೆಎಲ್ಎಂ ಏರ್ಲೈನ್ಸ್ ನ ವಿಮಾನದಲ್ಲಿ ನಡೆದಿದೆ. ವಿಮಾನವು ಬ್ರಿಟನ್ ನ ಮ್ಯಾಂಚೆಸ್ಟರ್‌ ನಿಂದ ನೆದರ್ಲೆಂಡ್ಸ್‌ ನ ಆಮ್ಸ್ಟರ್ ಡ್ಯಾಂ ಕಡೆಗೆ ಹೊರಟಿತ್ತು ಎನ್ನಲಾಗಿದೆ. ಈ ವೇಳೆ ವಿಮಾನದಲ್ಲಿ ಎರಡು ಗುಂಪಿನ ನಡುವಿನ ಘರ್ಷಣೆಯು ಮಾ ರಾ ಮಾರಿಯಾಗಿ ಬದಲಾಗಿ, ಗುದ್ದಾಟಗಳು, ಒಬ್ಭರನ್ನೊಬ್ಬರು ಹೊಡೆಯುವುದು ಹೀಗೆ ಗಲಾಟೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಇದರಿಂದಾಗಿ ವಿಮಾನದ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಸಹಾ ಆಗಿವೆ. ವೈರಲ್ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ವರದಿಗಳ ಪ್ರಕಾರ ಗಲಾಟೆಯಲ್ಲಿ ತೊಡಗಿದ್ದ ಆರು ಜನ ಬ್ರಿಟನ್ ಪ್ರಜೆಗಳನ್ನು ಪೋಲಿಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಜಗಳದ ಕುರಿತು ತನಿಖೆಯನ್ನು ಆರಂಭಿಸಲಾಗಿದ್ದು, ತನಿಖೆ ಪೂರ್ತಿಯಾದ ಮೇಲೆಯೇ ಸೂಕ್ತ ಕ್ರಮವನ್ನು ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *