ವಿಪರೀತ ನೆಗಡಿಯಿಂದ ಕೋಮಾ ಸ್ಥಿತಿಗೆ ಮಹಿಳೆ:16 ದಿನಗಳ ನಂತರ ಎಚ್ಚರವಾದಾಗ ಕಾದಿತ್ತು ಆಘಾತ!!

Entertainment Featured-Articles News Wonder

ನೆಗಡಿ ಎನ್ನುವುದು ತೀರಾ ಸಾಮಾನ್ಯವಾದ ಒಂದು ಸಮಸ್ಯೆ ಎಂದೇ ಹೇಳಬಹುದು. ಅದರಲ್ಲೂ ಇಂದಿನ ಮಾಲಿನ್ಯ ಭರಿತ ಕಾಲದಲ್ಲಿ ವಾಯು ಮಾಲಿನ್ಯ ದಿಂದಲೂ ಅಲರ್ಜಿಯಾಗಿ ನೆಗಡಿ ಬರುವುದು ಸರ್ವೇ ಸಾಮಾನ್ಯ ಎನಿಸಿ ಹೋಗಿದೆ. ನೆಗಡಿ ಒಂದು ಸಾಮಾನ್ಯ ಸಮಸ್ಯೆ ಎನಿಸಿದರೂ ಸಹಾ ಇದು ಬಂದರೆ ಒಂದು ರೀತಿಯಲ್ಲಿ ಕಿರಿಕಿರಿ, ಆಲಸಿ ತನ, ದಣಿವಾದಂತೆ ಅನುಭೂತಿ ಗಳು ಉಂಟಾಗುತ್ತದೆ. ಸಾಕಪ್ಪಾ ಈ ನೆಗಡಿಯ ಸಹವಾಸ! ಎಂದು ಕೆಲವರು ಬೇಸರವನ್ನು ವ್ಯಕ್ತಪಡಿಸುವುದನ್ನು ಸಹಾ ನಾವು ನೋಡಿರುತ್ತೇವೆ, ನೆಗಡಿಯ ಬಾಧೆ ಏನೆಂಬುದು ನಮ್ಮಲ್ಲಿ ಬಹುತೇಕ ಎಲ್ಲರಿಗೂ ಅನುಭವಕ್ಕೂ ಬಂದಿರುತ್ತದೆ.

ಆದರೆ ಇಂತಹ ನೆಗಡಿಯ ಪರಿಣಾಮದಿಂದ ತಮ್ಮ ಜೀವನದ ಹಿಂದಿನ ಘಟನೆಗಳನ್ನು ಮರೆತು ಹೋಗುತ್ತಾರೆ ಎಂದರೆ ನಂಬುವಿರಾ? ಇದೇನಿದು ಹೊಸ ವಿಚಾರ, ಇಂತಹ ವಿಚಿತ್ರ ಎಲ್ಲಾದರೂ ಸಾಧ್ಯವಿದೆಯಾ? ಎಂತಹ ಉತ್ಪ್ರೇಕ್ಷೆಯ ಮಾತಿದು ಎನಿಸಬಹುದು ಅಲ್ಲವೇ ನಿಮಗೆ. ಹಾಗಾದರೆ ಈ ವಿಷಯವನ್ನು ನೀವು ತಪ್ಪದೇ ತಿಳಿಯಲೇಬೇಕು. ಏಕೆಂದರೆ ಇಂತಹುದೊಂದು ವಿಚಿತ್ರವಾದ ಘಟನೆ ನಡೆದಿದ್ದು, ಎಲ್ಲರಿಗೂ ಆಶ್ಚರ್ಯ ಉಂಟು ಮಾಡುವ ಇಂತಹುದೊಂದು ವಿಲಕ್ಷಣ ಘಟನೆಯು ಲಂಡನ್ ನಲ್ಲಿ ನಡೆದಿದೆ.

ಹೌದು, ಲಂಡನ್ ನಲ್ಲಿ ನೆಲೆಸಿರುವ 43 ವರ್ಷದ ಮಹಿಳೆ ಕ್ಲೈರ್ ಮಫೆಟ್ ಈಗ ಇಂತಹುದೊಂದು ಸಮಸ್ಯೆಯಿಂದ ಬಳಲುವಂತಾಗಿದೆ. ಕ್ಲೈರ್ ಅವರಿಗೆ ಇಬ್ಬರು ಮಕ್ಕಳಿಗದ್ದಾರೆ. ಇವರ ಮಗನಿಗೆ ಕೆಲವು ತಿಂಗಳುಗಳ ಹಿಂದೆ ನೆಗಡಿ ಆಗಿತ್ತು. ಸಾಮಾನ್ಯವಾಗಿ ನೆಗಡಿ ಅಂಟು ವ್ಯಾಧಿಯಾಗಿರುವುದರಿಂದ ಇನ್ಫೆಕ್ಷನ್ ಆಗಿ ಬೇರೆಯವರಿಗೆ ಸಹಾ ಅದು ತಗಲುತ್ತದೆ. ಅದೇ ರೀತಿ ಕ್ಲೈರ್ ಅವರಿಗೆ ಸಹಾ ನೆಗಡಿ ಸಮಸ್ಯೆಯು ಕಾಡಿದೆ. ಆದರೆ ರಾತ್ರಿ ವೇಳೆಗೆ ಅವರ ನೆಗಡಿಯ ಸಮಸ್ಯೆ ತೀವ್ರವಾಗಿ, ಕೊನೆಗೆ ಆಸ್ಪತ್ರೆಗೆ ದಾಖಲು ಮಾಡುವ ಪರಿಸ್ಥಿತಿ ಉಂಟಾಗಿದೆ.

ನೆಗಡಿಯ ತೀವ್ರತೆ ಯಾವ ಮಟ್ಟಕ್ಕೆ ಎಂದರೆ ಆಕೆ ಕೋಮಾಕ್ಕೆ ತಲುಪಿದ್ದಾರೆ. ಕೋಮಾ ಸೇರಿದ ಆಕೆಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಯನ್ನು ನೀಡಿ ಪ್ರಾಣಾಪಾಯವನ್ನು ತಪ್ಪಿಸಿದ್ದಾರೆ. ಆದರೆ ಇದಾದ ನಂತರ ಉಂಟಾದ ಪರಿಣಾಮವೇ ಅತ್ಯಾಶ್ಚರ್ಯಕ್ಕೆ ಕಾರಣವಾಗಿದೆ. ಹೌದು ಚಿಕಿತ್ಸೆಯ ನಂತರ ಕ್ಲೈರ್ ತಮ್ಮನ್ನು ತಾನು ಮರೆತಿದ್ದಾರೆ. ಆಕೆ ತಮ್ಮ ಜೀವನದ 20 ವರ್ಷಗಳನ್ನು ಸಂಪೂರ್ಣವಾಗಿ ಮರೆತು ಹೋಗಿದ್ದಾರೆ. ಕ್ಲೈರ್ ಗೆ ಸಂಭವಿಸಿದ ಈ ವಿಚಿತ್ರ ಸಮಸ್ಯೆ ಬಗ್ಗೆ ಅಲ್ಲಿನ ಸ್ಥಳೀಯ ಚಾನೆಲ್ 4 ಮಾಹಿತಿ ನೀಡಿದೆ.

ಕ್ಲೈರ್ ಈ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತನಗೆ ಇನ್ನೂ ಅನೇಕ ವಿಚಾರಗಳು ನೆನಪಾಗುತ್ತಿಲ್ಲ ಎಂದಿದ್ದಾರೆ. ನೆಗಡಿ ಯಿಂದ ಮೆದುಳಿನಲ್ಲಿ ರಕ್ತ ಸ್ರಾವ ಉಂಟಾದ ಪರಿಣಾಮ ಇಂತಹ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಅಲ್ಲದೇ ಆಕೆ ಸುಮಾರು 16 ದಿನಗಳ ಕಾಲ ಕೋಮಾದಲ್ಲಿ ಇದ್ದರೆಂದು ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ. ಕೋಮಾದಿಂದ ಹೊರ ಬಂದ ಮೇಲೆ ಕ್ಲೈರ್ ತಮ್ಮ ಜೀವನದ ಅನೇಕ ವಿಷಯಗಳನ್ನು ಮರೆತು ಹೋಗಿದ್ದಾರೆ.‌

Leave a Reply

Your email address will not be published.