ವಿಧಿಯೇಕೆ ಇಷ್ಟೊಂದು ಕಠೋರ:ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ 6 ವರ್ಷದ ಸಮನ್ವಿ ಇನ್ನಿಲ್ಲ

0 2

ವಿಧಿಯಾಟ ಯಾವಾಗ ಎಂತಹ ದುಃಖವನ್ನು ನೀಡುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸುವುದು ಖಂಡಿತ ಸಾಧ್ಯವಿಲ್ಲ. ಇಂತಹುದೇ ಒಂದು ವಿಧಿಯ ಆಟದಲ್ಲಿ ಮರಳಿ ಬಾರದ ಊರಿಗೆ ಹೊರಟು ಬಿಟ್ಟಿದ್ದಾಳೆ ಬಾಲ ಪ್ರತಿಭೆ ಸಮನ್ವಿ. ಕನ್ನಡ ಕಿರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ 6 ವರ್ಷದ ಸಮನ್ವಿ ಭೀ ಕ ರ ರಸ್ತೆ ಅಪಘಾತದಲ್ಲಿ ಸಾ ವ ನ್ನ ಪ್ಪಿದ್ದಾಳೆ. ಸಮನ್ವಿ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಮೃತ ನಾಯ್ಡು ಅವರ ಮಗಳು. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿ,‌ಅವರ ಮೆಚ್ಚುಗೆ ಪಡೆದಿದ್ದ‌ ಬಾಲ ಪ್ರತಿಭೆ ಸಮನ್ವಿ.

ನಿನ್ನೆ ಸಂಜೆ ಅಮೃತಾ ಅವರು ಮಗಳ ಜೊತೆಗೆ ಶಾಪಿಂಗ್ ಗೆ ಎಂದು ಮನೆಯಿಂದ ಸ್ಕೂಟಿಯಲ್ಲಿ ಹೊರಟಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಅಮೃತಾ ಅವರು ಹೊರಟಿದ್ದ ಸ್ಕೂಟಿಯು ಬೆಂಗಳೂರಿನ ಕೋಣನ‌ ಕುಂಟೆ ಬಳಿ ವಾಜರಹಳ್ಳಿಯಲ್ಲಿ ಭೀ ಕ ರ ವಾದ ರಸ್ತೆ ಅಪಘಾತಕ್ಕೆ ಒಳಗಾಗಿದೆ. ತಾಯಿ ಅಮೃತಾ ಜೊತೆಗೆ ಸ್ಕೂಟಿಯಲ್ಲಿ ತೆರಳುವಾಗ ಲಾರಿ ಡಿಕ್ಕಿಯಾಗಿದ್ದು, ಬಾಲಕಿ ಸಮನ್ವಿ ಈ ಅ ಪ ಘಾ ತ ದಲ್ಲಿ ಮೃ ತ ಪಟ್ಟಿದ್ದಾಳೆ. ಅಮ್ಮ ಮಗಳು ತೆರಳುತ್ತಿದ್ದ ಸ್ಕೂಟಿಗೆ ಟಿಪ್ಪರ್ ಲಾರಿ ಬಂದು ಗುದ್ದಿದೆ ಎನ್ನಲಾಗಿದೆ.

ಅಮೃತಾ ಅವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪುಟ್ಟು ಕಂದಮ್ಮ ಸಮನ್ವಿ ಸ್ಥ ಳ ದಲ್ಲೇ ಮೃತಪಟ್ಟಿದ್ದಾಳೆ. ಅಮೃತಾ ನಾಯ್ಡು ಅವರು ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು. ಅವರು ಸಹಾ ಹರಿಕಥೆಗಳನ್ನು ಮಾಡುವಲ್ಲಿ ಪರಿಣಿತಿ ಪಡೆದಿದ್ದಾರೆ. ಅಮೃತಾ ಅವರು ಈಗ ನಾಲ್ಕು ತಿಂಗಳ ಗರ್ಭಿಣಿ, ಈ ವೇಳೆ ತಮ್ಮ ಜೀವವೇ ಆಗಿದ್ದ ಮುದ್ದಿನ ಮಗಳನ್ನು ಕಳೆದುಕೊಂಡಿದ್ದಾರೆ.

ಅವರ ನೋವನ್ನು ಊಹಿಸುವುದು ಖಂಡಿತ ಸಾಧ್ಯವಿಲ್ಲ. ಮೊದಲ ಮಗು ಕಳೆದುಕೊಂಡ ನಂತರ ಸಮನ್ವಿ ದೇವರು ಕೊಟ್ಟ ವರ ಎಂದು ಅಮೃತಾ ಅವರು ಶೋ ನಲ್ಲಿ ಹೇಳಿಕೊಂಡಿದ್ದರು. ಇದೇ ಶೋ ಮೂಲಕ ಅಮೃತ ಹಾಗೂ ಸಮನ್ವಿ ಜನರ ಮನಸ್ಸನ್ನು ಗೆದ್ದಿದ್ದರು. ಮಗಳ ಅಗಲಿಕೆಯ ನೋವಿನಿಂದ ಹೊರ ಬರುವುದು ಸುಲಭವಲ್ಲ. ಆ ದೇವರು ಅಮೃತ ಅವರಿಗೆ ಧೈರ್ಯ ನೀಡಲೆಂದು ಪ್ರಾರ್ಥಿಸೋಣ. ಅವರು ಈ ನೋವಿನಿಂದ ಹೊರ ಬರಲಿ ಎಂದು ಹಾರೈಸೋಣ.

Leave A Reply

Your email address will not be published.