ವಿದೇಶದಲ್ಲಿ ಡೇ ಔಟಿಂಗ್: ಮೇಘನಾ ರಾಜ್ ಖುಷಿ ಕಂಡು ಸೋ ಕ್ಯೂಟ್ ಎಂದ ಅಭಿಮಾನಿಗಳು

0 0

ಸ್ಯಾಂಡಲ್ವುಡ್ ನಟಿ ಮೇಘನ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಆಗಾಗ ಫೋಟೋಗಳು, ವೀಡಿಯೊಗಳು ಹಂಚಿಕೊಳ್ಳುವ ಮೂಲಕ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ. ಮೇಘನಾ ರಾಜ್ ಅವರು ಹಂಚಿಕೊಳ್ಳುವ ಫೋಟೋಗಳು ಮತ್ತು ವಿಡಿಯೋಗಳಿಗೆ ಅವರ ಅಭಿಮಾನಿಗಳು ಸಹಾ ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಜೊತೆಗೆ, ಕಾಮೆಂಟ್ ಗಳನ್ನು ಮಾಡುವ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈಗ ನಟಿಯು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಡೇ ಔಟಿಂಗ್ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಮತ್ತೊಮ್ಮೆ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.

ಮೇಘನಾ ಅವರು ತಮ್ಮ ಗೆಳತಿ ಸ್ಮಿತಾ ಜೊತೆಗೆ ಔಟಿಂಗ್ ಹೋಗಿದ್ದು, ಸುಂದರ ಕ್ಷಣಗಳನ್ನು ಸಖತ್ ಎಂಜಾಯ್ ಮಾಡಿದ್ದು, ತಮ್ಮ ಗೆಳತಿಯ ಜೊತೆಗೆ ಸೆಲ್ಫಿ ಅನ್ನು ಕ್ಲಿಕ್ಕಿಸಿ ಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯ ಎಂದು ಹೇಳುತ್ತಾ, ಅಲ್ಲಿನ ಸುಂದರವಾದ ಪ್ರದೇಶದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಚಿರಾರ್ ಡೆಲ್ಲಿಯಲ್ಲಿ ತಾನು ಇರುವ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಅವರು, ಮತ್ತಷ್ಟು ಐಸ್‌ಕ್ರೀಮ್‌ಗಳನ್ನು ತಿನ್ನಲು, ಹೆಚ್ಚು ಚೈನೀಸ್ ಫುಡ್ ಎಂಜಾಯ್ ಮಾಡೋದಕ್ಕೆ sanfrancisco ನಲ್ಲಿ ಸಾಕಷ್ಟು ಏರಿ ಇಳಿದು ಪ್ರಯಾಣ ಮತ್ತು ಶಾಪಿಂಗ್‌ ಮಾಡಿದೆವು.

ಅದರ ಪ್ರತಿ ನಿಮಿಷವನ್ನು ಇಷ್ಟಪಟ್ಟಿದ್ದೇನೆ. ನಿಮ್ಮನ್ನು ಮತ್ತೆ ನೋಡಲು ಮತ್ತಷ್ಟು ಕಾಯಲು ಸಾಧ್ಯವಿಲ್ಲ  ಎಂದು ಹೇಳಿದ್ದಾರೆ. ನಟಿ ಮೇಘನಾ ರಾಜ್ ಅವರ ಶೇರ್ ಮಾಡಿಕೊಂಡ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು, ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಅವರ ವಿದೇಶ ಪ್ರವಾಸ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. ಮೇಘನಾ ರಾಜ್ ಯವರು ತಮ್ಮ ವಿದೇಶಿ ಪ್ರವಾಸದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಲ್ಲಿನ ಸುಂದರವಾದ ಸ್ಥಳಗಳ ಚಿತ್ರಗಳನ್ನು ತಮ್ಮ ಅಭಿಮಾನಿಗಳ ಮುಂದೆ ಇರಿಸಿ, ತಮ್ಮ ಪ್ರವಾಸದ ಖುಷಿಯನ್ನು ಎಲ್ಲರೂ ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ.

Leave A Reply

Your email address will not be published.