ವಿಜಯ ದೇವರಕೊಂಡ ಹೊಸ ಗರ್ಲ್ ಫ್ರೆಂಡ್?? ರಶ್ಮಿಕಾ ಮೌನಕ್ಕೆ ಕಾರಣವಂತೆ!! ಅಸಲಿಗೆ ನಡೆದಿದ್ದೇನು??

Entertainment Featured-Articles Movies News

ಟಾಲಿವುಡ್ ನ ಯುವ ಸ್ಟಾರ್ ನಟರಲ್ಲಿ ವಿಜಯ್ ದೇವರಕೊಂಡ ಸಹಾ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ನಟನಾಗಿದ್ದಾರೆ. ಈ ನಟನಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ, ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ, ಅನಂತರ ನಾಯಕನಾಗಿ ಕಾಣಿಸಿಕೊಂಡು, ಇಂದು ಟಾಲಿವುಡ್ ನ ಸ್ಟಾರ್ ನಟನಾಗಿ ಬೆಳೆದಿರುವ ವಿಜಯ ದೇವರಕೊಂಡ ಎಂದರೆ ಯುವ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಾಗಿದೆ ಎನ್ನುವುದು ವಾಸ್ತವ‌. ಅಲ್ಲದೇ ಯುವತಿಯರಿಗೆ ವಿಜಯ್ ದೇವರಕೊಂಡ ಲವರ್ ಬಾಯ್ ಕೂಡಾ ಹೌದು.

ಸಿನಿಮಾ ರಂಗದಲ್ಲಿ ಈ ನಟನ ಜೊತೆಗೆ ಹೆಚ್ಚು ತಳಕು ಹಾಕಿಕೊಂಡಿರುವುದು ನಟಿ ರಶ್ಮಿಕಾ ಮಂದಣ್ಣ‌ ಹೆಸರು. ಗೀತ ಗೋವಿಂದಂ ಸಿನಿಮಾ‌ ಮೂಲಕ ಈ ಜೋಡಿ ತೆರೆಯ ಮೇಲೆ ಮಾಡಿದ ಜಾದೂವನ್ನು ಅಭಿಮಾನಿಗಳು ಮರೆತಿಲ್ಲ. ಅದಾದ ನಂತರ ರಿಯಲ್ ಲೈಫ್ ನಲ್ಲೂ ಈ ಜೋಡಿ ಸಿಕ್ಕಾಪಟ್ಟೆ ಸದ್ದು ಮಾಡಿದರು. ಇವರ ನಡುವಿನ ಆತ್ಮೀಯ ಒಡನಾಟ ಕಂಡು, ಅಭಿಮಾನಿಗಳು ಇವರ ನಡುವೆ ಏನೋ ಇದೆ ಎಂದರು, ಈ ಜೋಡಿಯ ಕುರಿತಾಗಿ ಹತ್ತು ಹಲವು ಗಾಸಿಪ್ ಗಳು ಹರಿದಾಡಿದವು.

ಆದರೆ ಈ ಜೋಡಿ ಮಾತ್ರ ನಾವು ಫ್ರೆಂಡ್ಸ್ ಮಾತ್ರ ಎಂದರು. ಆಗಾಗ ಜೊತೆಯಲ್ಲಿ ಕಾಣಿಸಿಕೊಂಡು ಮತ್ತೆ ಸದ್ದು ಮಾಡಿದರು. ಇನ್ನು ಇವೆಲ್ಲವುಗಳ ನಡುವೆ ಮೊನ್ನೆ ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಜನ್ಮದಿನ ದಂದು ಅನೇಕ ಸಿನಿಮಾ ಸೆಲೆಬ್ರಿಟಿಗಳು ಅವರಿಗೆ ಶುಭಾಶಯವನ್ನು ಕೋರಿದ್ದರು. ಆದರೆ ಈ ವೇಳೆ ರಶ್ಮಿಕಾ ಮಾತ್ರ ತಮ್ಮ ಗೆಳಯನಿಗೆ ಅಭಿಮಾನಿಗಳಿಗೆ ಕಾಣುವ ಹಾಗೆ ಯಾವುದೇ ರೀತಿಯಲ್ಲೂ ನಟನಿಗೆ ವಿಶ್ ಮಾಡಿಯೇ ಇಲ್ಲ.

ಈ ಘಟನೆಯ ನಂತರ ರಶ್ಮಿಕಾ ವಿಶ್ ಮಾಡದೇ ಇರಲು ಕಾರಣವೇನು ಎನ್ನುವ ವಿಚಾರವಾಗಿ ಸಹಾ ಸಾಕಷ್ಟು ಗಾಸಿಪ್ ಗಳು ಹುಟ್ಟು ಕೊಂಡಿವೆ. ಅದರಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವುದು ಬಾಲಿವುಡ್ ನ ಯುವ ನಟಿ ಅನನ್ಯ ಪಾಂಡೆಯ ಹೆಸರು. ಹೌದು, ಅನನ್ಯ ಪಾಂಡೆ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾ ಲೈಗರ್ ನಲ್ಲಿ ನಾಯಕಿಯಾಗಿದ್ದಾರೆ. ಅಲ್ಲದೇ ಕೆಲವೇ ದಿನಗಳ ಹಿಂದೆ ನಟಿ ತಮ್ಮ ಗೆಳೆಯ ಇಶಾನ್ ಕಟ್ಟರ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು, ಈ ವಿಷಯವನ್ನು ಇಬ್ಬರೂ ಬಹಿರಂಗ ಪಡಿಸಿದ್ದಾರೆ.

ಇನ್ನು ಗಾಸಿಪ್ ಗಳಲ್ಲಿ ವಿಜಯ್ ದೇವರಕೊಂಡ ಹೆಸರು ಇತ್ತೀಚಿಗೆ ಅನನ್ಯಾ ಪಾಂಡೆ ಜೊತೆಗೂ ತಳಕು ಹಾಕಿಕೊಳ್ಳುತ್ತಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಅನನ್ಯ ಎಂಟ್ರಿಯಾಗಿದೆ, ಅದಕ್ಕೆ ರಶ್ಮಿಕಾ ವಿಜಯ್ ದೇವರಕೊಂಡ ಅವರಿಗೆ ಜನ್ಮದಿನಕ್ಕೆ ವಿಶ್ ಮಾಡಿಲ್ಲ ಎಂದು ಕೂಡಾ ಸುದ್ದಿಗಳು ಹರಡಿವೆ. ಒಂದು ಕಡೆ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ವಿಜಯ್ ದೇವರಕೊಂಡ ಅವರಿಗೆ ವಿಶ್ ಮಾಡದೇ ಇರುವುದು ಅವರ ಬ್ಯುಸಿ ಶೆಡ್ಯೂಲ್ ನ ಕಾರಣದಿಂದ ಎಂದು ಸಹಾ ಹೇಳಲಾಗಿದೆ.

Leave a Reply

Your email address will not be published. Required fields are marked *