ವಿಜಯ ದೇವರಕೊಂಡ ಜೊತೆಗೆ ಕಾಶ್ಮೀರದ ಕಡೆಗೆ ಪಯಣ ಬೆಳೆಸಿದ ನಟಿ ಸಮಂತಾ!! ಖುಷಿ ಪಟ್ಟ ಅಭಿಮಾನಿಗಳು

Entertainment Featured-Articles News

ದಕ್ಷಿಣ ಸಿನಿರಂಗದಲ್ಲಿ ಸದ್ಯಕ್ಕಂತೂ ನಟಿ ಸಮಂತಾ ಅವರ ಯಶಸ್ಸಿನ ಓಟ ಬಹಳ ಜೋರಾಗಿ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಪುಷ್ಪ ಸಿನಿಮಾದ ಐಟಂ ಸಾಂಗ್ ನ ನಂತರ ಟಾಕ್ ಆಫ್ ಟೌನ್ ಆಗಿದ್ದಾರೆ ಸಮಂತಾ. ಸಿನಿಮಾಗಳ ಒತ್ತಡದ ನಡುವೆಯೂ ಆಗಾಗ ವಿದೇಶಿ ಪ್ರವಾಸ, ಜಾಹೀರಾತುಗಳ ಚಿತ್ರೀಕರಣ ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ನಟಿ. ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಸಾಕಷ್ಟು ಸಕ್ರಿಯವಾಗಿದ್ದಾರೆ.

ನಟಿ ಸಮಂತಾ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವ ಫೋಟೋಗಳು ಹಾಗೂ ವಿಡಿಯೋಗಳು ಬಹಳಷ್ಟು ಬೇಗ ವೈರಲ್ ಆಗುತ್ತವೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಸಮಂತಾ ಹಾಗೂ ತೆಲುಗಿನ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಹೊಸ ಸಿನಿಮಾವೊಂದರ ಘೋಷಣೆಯಾಗಿತ್ತು. ಈಗ ಸಿನಿಮಾ ಘೋಷಣೆಯ ಬೆನ್ನಲ್ಲೇ ಚಿತ್ರೀಕರಣಕ್ಕಾಗಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಶ್ಮೀರದ ರಮ್ಯ ತಾಣಗಳಿಗೆ ಹಾರಿದ್ದಾರೆ.

ನಟಿ ಸಮಂತ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿ ನಟಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಇದೇ ಜೋಡಿ ಮಹಾನಟಿ ಸಿನಿಮಾದಲ್ಲಿ ಕೂಡಾ ಕಾಣಿಸಿಕೊಂಡಿತ್ತು, ಆ ಸಿನಿಮಾದಲ್ಲಿ ಇವರ ಜೋಡಿ ಜನ ಮೆಚ್ಚುಗೆಯನ್ನು ಸಹಾ ಪಡೆದುಕೊಂಡಿತ್ತು. ಇದೀಗ ಮಜಿಲಿ ಸಿನಿಮಾ ನಿರ್ದೇಶಕ ಶಿವಾ ತಮ್ಮ ಹೊಸ ಸಿನಿಮಾಕ್ಕೆ ಇದೇ ಜೋಡಿಯನ್ನು ನಾಯಕ ಹಾಗೂ ನಾಯಕಿಯನ್ನಾಗಿ ಮಾಡಿದ್ದಾರೆ.

ಮತ್ತೊಮ್ಮೆ ಜೋಡಿಯಾಗಿ ನಟಿಸುತ್ತಿರುವ ಸಮಂತಾ ಹಾಗುವ ವಿಜಯ್ ದೇವರಕೊಂಡ ಸಿನಿಮಾ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಸಿನಿಮಾ ಪ್ರಾಜೆಕ್ಟ್ ನ ವಿಷಯವಾಗಿ ತಾವು ಕಾಶ್ಮೀರಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಲು, ಸಣ್ಣದೊಂದು ವಿಡಿಯೋ ತುಣುಕನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ.

ನಿರ್ದೇಶಕ ಶಿವ ಮಣಿರತ್ನಂ ಅವರ ರೋಜಾ ಸಿನಿಮಾದ ರೀತಿಯಲ್ಲಿ, ಆದರೆ ಈ ಕಾಲಕ್ಕೆ ತಕ್ಕ ಹಾಗೆ ಪ್ರೇಮ ಕಥೆಯನ್ನಾಗಿ ತೋರಿಸುವ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಈ ಹೊಸ, ವಿಭಿನ್ನ ಪ್ರಯತ್ನಕ್ಕೆ ಸಮಂತ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿದ್ದು, ಈ ಹೊಸ ಸಿನಿಮಾದಲ್ಲಿ ಈ ಜೋಡಿಯು ಪ್ರೇಕ್ಷಕರ ಮೇಲೆ ಎಂತಹ ಜಾದು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.