ವಿಜಯ ದೇವರಕೊಂಡ ಕೊನೆಯದಾಗಿ ಸೆ ಕ್ಸ್ ಮಾಡಿದ್ದು ಯಾವಾಗ? ನನಗೆ ಗೊತ್ತೆಂದು ಶಾಕ್ ನೀಡಿದ ಅನನ್ಯಾ ಪಾಂಡೆ

Entertainment Featured-Articles Movies News Viral Video

ಕಾಫಿ ವಿತ್ ಕರಣ್ ಬಾಲಿವುಡ್ ಕಿರುತೆರೆಯ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಆಗಿದೆ. ಈ ಕಾರ್ಯಕ್ರಮವು ಭರ್ಜರಿ ಆರ್ ಸೀಸನ್ ಗಳನ್ನು ಕಿರುತೆರೆಯಲ್ಲಿ ಮುಗಿಸಿದೆ. ಆದರೆ ಈ ಸಲ ಮೊದಲ ಬಾರಿಗೆ ವಿಶೇಷ ಎನ್ನುವಂತೆ ಓಟಿಟಿ ವೇದಿಕೆಯಲ್ಲಿ ಏಳನೇ ಹೊಸ ಸೀಸನ್ ಪ್ರಸಾರವಾಗುತ್ತಿದ್ದು, ಎಂದಿನಂತೆ ಶೋ ಈಗಾಗಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಬಾಲಿವುಡ್ ನ ಜನಪ್ರಿಯ ನಿರ್ಮಾಪಕ ಹಾಗೂ ನಿರೂಪಕ ಎನಿಸಿಕೊಂಡಿರುವ ಕರಣ್ ಜೋಹರ್ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಎಂದಿನಂತೆ ತಮ್ಮ ಬೋಲ್ಡ್ ಪ್ರಶ್ನೆಗಳ ಮೂಲಕ ಸೆಲೆಬ್ರಿಟಿಗಳ ಮುಂದೆ ಹಾಜರಾಗಿದ್ದಾರೆ.

ಕಾಫಿ ವಿತ್ ಕರಣ್ ನ ಪ್ರತಿ ಸೀಸನ್ ಕೂಡಾ ಒಂದಷ್ಟು ವಿ ವಾ ದಗಳನ್ನು ಹುಟ್ಟುಹಾಕುವುದು, ಚರ್ಚೆಗಳಿಗೆ ಕಾರಣವಾಗುವುದು ನಡೆದೇ ಇರುತ್ತದೆ. ಇನ್ನು ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷ ಸೇರಿದೆ. ಅದೇನೆಂದರೆ ಇದೇ ಮೊದಲ ಬಾರಿಗೆ ಈ ಶೋ ಗೆ ದಕ್ಷಿಣದ ಸೆಲೆಬ್ರಿಟಿಗಳಿಗೂ ಅತಿಥಿಗಳನ್ನಾಗಿ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಕರಣ್ ಬಹಳ ಬೋಲ್ಡಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಸೆಲೆಬ್ರಿಟಿಗಳು ಮುಜುಗರ ಅನುಭವಿಸುತ್ತಾರೆ, ಆದ್ದರಿಂದಲೇ ಕೆಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಇದೀಗ ಜುಲೈ 28 ರಂದು ಪ್ರಸಾರವಾಗಲಿರುವ ಎಪಿಸೋಡ್ ನ ಪ್ರೊಮೋ ಬಿಡುಗಡೆಯಾಗಿದೆ. ಈ ವಾರ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಸ್ಟಾರ್ ನಟ, ಯುವ ನಟ ವಿಜಯ್ ದೇವರಕೊಂಡ ಮತ್ತು ಬಾಲಿವುಡ್ ನಟಿ ಅನನ್ಯ ಪಾಂಡೆ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಜೋಡಿ ಬಂದಿರುವುದರ ಹಿಂದೆ ಒಂದು ನಿರ್ದಿಷ್ಟ ಕಾರಣವಿದೆ. ವಿಜಯ್ ದೇವರಕೊಂಡ ಅಭಿನಯದ ಹೊಸ ಸಿನಿಮಾ ಲೈಗರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಲೈಗರ್ ಸಿನಿಮಾದ ನಿರ್ಮಾಣದಲ್ಲಿ ಕರಣ್ ಕೂಡಾ ಹಣ ತೊಡಗಿಸಿದ್ದಾರೆ.

ಇದೇ ಕಾರಣದಿಂದಾಗಿ ಸಿನಿಮಾದ ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆಯನ್ನು ತಮ್ಮ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುವಂತೆ ಆಹ್ವಾನ ನೀಡಿದ್ದಾರೆ ಕರಣ್ ಜೋಹರ್.. ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ನೋಡಿದಾಗ, ಕಾರ್ಯಕ್ರಮದ ಕೆಲವೊಂದು ಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದಾಗಿದೆ. ಈ ಸನ್ನಿವೇಶಗಳಿಂದಾಗಿ ಇದೀಗ ಪ್ರೋಮೊ ಭರ್ಜರಿಯಾಗಿ ವೈರಲ್ ಆಗುತ್ತಿದೆ. .

ಪ್ರೊಮೊದಲ್ಲಿ ಗಮನಿಸಿದಾಗ ಕರಣ್ ಜೋಹರ್ ವಿಜಯ್ ದೇವರಕೊಂಡ ಅವರನ್ನು ನೀವು ಕೊನೆಯದಾಗಿ ಸೆ ಕ್ಸ್ ಮಾಡಿದ್ದು ಯಾವಾಗ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ವಿಜಯ್ ದೇವರಕೊಂಡ ಉತ್ತರ ನೀಡುವ ಮೊದಲೇ ಅನನ್ಯ ಪಾಂಡೆ ಬಹಳ ಉತ್ಸಾಹದಿಂದ ಅದಕ್ಕೆ ಉತ್ತರವನ್ನು ನಾನು ಗೆಸ್ ಮಾಡುತ್ತೇನೆ ಎಂದು ಹೇಳಿ ಬಹುಶಃ ಅವರು ಇಂದು ಬೆಳಗ್ಗೆ ಸೆ ಕ್ಸ್ ಮಾಡಿರಬಹುದು ಎಂದಿದ್ದಾರೆ. ಹಾಗೆ ಹೇಳುತ್ತಾ ಪ್ರಶ್ನಾರ್ಥಕವಾಗಿ ವಿಜಯ ದೇವರಕೊಂಡ ಕಡೆಗೆ ನೋಡಿದ್ದಾರೆ.

ಹೀಗೆ ಮಾತುಗಳು ಮುಂದುವರೆಯುತ್ತಾ ವಿಜಯ್ ದೇವರಕೊಂಡ ತಾನು ಕಾರಿನಲ್ಲಿ ಸೆ ಕ್ಸ್ ಮಾಡಿರುವುದಾಗಿ ಹೇಳಿದ್ದಾರೆ. ಆಗ ನಿರೂಪಕ ಕರಣ್ ಜೋಹರ್ ಆ ಜಾಗ ಅಷ್ಟೊಂದು ಕಂಫರ್ಟಬಲ್ ಹಲ್ಲ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಜಯ್ ದೇವರಕೊಂಡ ಹತಾಶೆಗೊಂಡ ಸಂದರ್ಭಗಳಲ್ಲಿ ಹಾಗೆ ಮಾಡಲೇಬೇಕಾಗುತ್ತದೆ ಎನ್ನುವ ಉತ್ತರವನ್ನು ನೀಡಿದ್ದಾರೆ. ಒಟ್ಟಾರೆ ಪ್ರೋಮೋ ಸಖತ್ ಸದ್ದು ಮಾಡುತ್ತಿತ್ತು, ಶೋನಲ್ಲಿ ವಿಜಯದೇವರಕೊಂಡ ಇನ್ನು ಯಾವೆಲ್ಲಾ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.‌

Leave a Reply

Your email address will not be published.