ವಿಜಯ ದೇವರಕೊಂಡ ಇಟ್ಟ ಬೇಡಿಕೆಗೆ ಸುಸ್ತಾದ ನಿರ್ದೇಶಕ: ಇದು ದುರಹಂಕಾರ ಅಂದ್ರು ಅಭಿಮಾನಿಗಳು

0 0

ತೆಲುಗು ಚಿತ್ರ ಸೀಮೆಯಲ್ಲಿ ವಿಜಯ್ ದೇವರಕೊಂಡ ಸೃಷ್ಟಿಸಿರುವ ಕ್ರೇಜ್ ನ ಕುರಿತಾಗಿ ಎಲ್ಲರಿಗೂ ತಿಳಿದೇ ಇದೆ. ಅರ್ಜುನ್ ರೆಡ್ಡಿ,‌ ಗೀತ ಗೋವಿಂದಂ‌‌ ಸಿನಿಮಾಗಳ ಮೂಲಕ ಯುವ ಜನರಿಗೆ ಫೇವರಿಟ್ ಆಗಿರುವ ವಿಜಯ್ ದೇವರಕೊಂಡ ತನ್ನ ಸ್ಟೈಲಿಷ್ ಲುಕ್ ಗಳಿಂದಾಗಿ ಅದೆಷ್ಟೋ ಜನ ಯುವತಿಯರ ಹಾರ್ಟ್ ಗೆದ್ದಿದ್ದಾರೆ. ತನ್ನದೇ ಆದಂತಹ ಅಭಿಮಾನಿಗಳ‌ ಬಳಗವನ್ನು ಹೊಂದಿರುವ ವಿಜಯ್ ದೇವರಕೊಂಡ‌ ಟಾಲಿವುಡ್ ನ ಸ್ಟಾರ್ ನಟ ಎನ್ನುವುದರಲ್ಲಿ ಯಾವುದೇ ಅನುಮಾನ ಸಹಾ ಇಲ್ಲ. ಇನ್ನು ಇತ್ತೀಚಿಗೆ ಅವರು ಲೈಗರ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ‌. ಈ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಒಂದು ಸಲ ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಅದರ ಗತ್ತು, ಗಮ್ಮತ್ತು ಬೇರೇನೇ‌ ಇರುತ್ತೆ. ಅದಾದ ಮೇಲೆ ಹೀರೋಗಳು ಸಹಜವಾಗಿಯೇ ತಮ್ಮ ಮುಂದಿನ ಸಿನಿಮಾಗಳು ಸಹಾ ಪ್ಯಾನ್ ಇಂಡಿಯಾ ಸಿನಿಮಾಗಳಾಗಬೇಕೆಂದು ಬಯಸುತ್ತಾರೆ.

ಆದರೆ ಇದೀಗ ವಿಜಯ್ ದೇವರಕೊಂಡ ಅವರ ಅಂತಹ ಒಂದು ಇಚ್ಛೆಯೇ ನಿರ್ದೇಶಕರಿಗೆ ಬೇಸರವನ್ನು ಉಂಟು ಮಾಡಿದೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಪರ ವಿ ರೋ ಧ ಚರ್ಚೆಗಳನ್ನು ಹುಟ್ಟು ಹಾಕಿದೆ. ಲೈಗರ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿರುವ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಸಿನಿಮಾಗಳು ಸಹಾ ಪ್ಯಾನ್ ಇಂಡಿಯಾ ಸಿನಿಮಾಗಳು ಆಗಿರಬೇಕೆಂದು ಬಯಸಿದ್ದಾರೆ. ಪ್ರಸ್ತುತ ವಿಜಯ್ ದೇವರಕೊಂಡ ಅವರು ಸುಕುಮಾರ್ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಅದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಇದೇ ವೇಳೆ ವಿಜಯ್ ದೇವರಕೊಂಡ ಅವರು ಮತ್ತೋರ್ವ ನಿರ್ದೇಶಕ ಶಿವ ನಿರ್ವಾಣ ಅವರ ಸಿನಿಮಾದಲ್ಲಿ ಸಹಾ ನಟಿಸುತ್ತಿದ್ದಾರೆ.

ಶಿವ ನಿರ್ವಣ ಅವರಿಗೆ ವಿಜಯ್ ದೇವರಕೊಂಡ ಅವರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಶಿವ ಹಾಗೂ ಅವರ ಸಿನಿಮಾ ನಿರ್ಮಾಪಕರು ಸಿನಿಮಾವನ್ನು ಕೇವಲ ತೆಲುಗಿನಲ್ಲಿ ಮಾತ್ರವೇ ನಿರ್ಮಾಣ ಮಾಡಿ, ಬಿಡುಗಡೆ ಮಾಡುವ ಆಲೋಚನೆಯನ್ನು ಹೊಂದಿದ್ದರು. ಆದರೆ ವಿಜಯ್ ದೇವರಕೊಂಡ ಅವರು ಈ ಸಿನಿಮಾ ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ಹೇಳಿದ್ದು, ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್ ಬದಲಿಸುವ ಸೂಚನೆ ನೀಡಿದಾಗ ನಿರ್ದೇಶಕರು ಒಪ್ಪಿ ಅದರಂತೆ ಮಾಡಿದ್ದು, ಅದು ವಿಜಯ್ ದೇವರಕೊಂಡ ಅವರಿಗೆ ಸಮಾಧಾನ ತಂದಿಲ್ಲ ಎನ್ನಲಾಗಿದೆ. ಅವರು ಇನ್ನೂ ಕೆಲವು ಬದಲಾವಣೆ ಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ ವಿಜಯ್ ದೇವರಕೊಂಡ ಅವರು ಹೇಳಿದಂತೆ ಮಾಡಲು ಹೋದರೆ ಸಿನಿಮಾ‌ದ ಬಜೆಟ್ ಹೆಚ್ಚಾಗಲಿದೆ ಹಾಗೂ ನಿರ್ಮಾಪಕರು ಆ ವೆಚ್ಚವನ್ನು ಭರಿಸಲು ಸಿದ್ಧರಾಗಿಲ್ಲ ಎಂದು ಎನ್ನುವ ಕಾರಣಕ್ಕೆ ನಿರ್ದೇಶಕ ಶಿವ ಬೇಸರ ಪಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಷಯ ಸುದ್ದಿಯಾದ ಬೆನ್ನಲ್ಲೇ ಅಭಿಮಾನಿಗಳು ವಿಜಯ್ ದೇವರಕೊಂಡ ಸಿನಿಮಾ ಒಪ್ಪಿಕೊಳ್ಳುವಾಗಲೇ ಈ ಮಾತು ಹೇಳಬೇಕಿತ್ತು, ಅವರಿಗೆ ದುರಹಂಕಾರ ಎಂದೆಲ್ಲಾ ಟೀಕೆ ಮಾಡಿದ್ದರೆ, ಇನ್ನೂ ಕೆಲವರು ಪ್ಯಾನ್ ಇಂಡಿಯಾ ಸ್ಟಾರ್ ಆದ ವಿಜಯ್ ಅವರು ಹೀಗೆ ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

Leave A Reply

Your email address will not be published.