ತೆರೆ ಮೇಲಿನ ಮಹಾನಟಿ ಕೀರ್ತಿ ಸುರೇಶ್ ದಳಪತಿ ವಿಜಯ್ ಅವರ ಪತ್ನಿ ಪಾಲಿಗೆ ಖಳನಟಿ ಆಗಿಬಿಟ್ರಾ?

0
762

ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್(Keerti Suresh) ಮಹಾನಟಿ(Mahanati) ಸಿನಿಮಾದ ಮೂಲಕ ಮತ್ತೊಂದು ಮಟ್ಟದ ಎತ್ತರಕ್ಕೆ ಬೆಳೆದು ನಿಂತ ನಟಿ. ಮಹಾನಟಿ ಸಿನಿಮಾದ ತಮ್ಮ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನಟಿ ಇವರು. ಪ್ರಸ್ತುತ ನಟಿ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ(mega star Chiranjeevi) ಅವರು ನಾಯಕನಾಗಿರುವ ಬೋಳಾ ಶಂಕರ್(Bola Shankar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ತಮಿಳಿನಲ್ಲಿ ನಟ ಅಜಿತ್(Ajith) ಅವರ ಜೊತೆ ನಾಯಕಿಯಾಗಿ ಒಂದು ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

ಆದರೆ ಈಗ ನಟಿ ಕೀರ್ತಿ ಸುರೇಶ್(Keerti Suresh) ಕುರಿತಾಗಿ ಒಂದು ಶಾಕಿಂಗ್ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವು ವಾರಗಳ ಹಿಂದೆ ಕಾಲಿವುಡ್ ಹೀರೋ ವಿಜಯ್(Thalapathi Vijay) ಅವರು ತಮ್ಮ ಪತ್ನಿಯೊಡನೆ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯೊಂದು ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸುದ್ದಿಗಳು ಬಂದ ನಂತರ ನಟ ವಿಜಯ್ ಮತ್ತು ಅವರ ಪತ್ನಿಯ‌ ನಡುವಿನ ವಿಚ್ಚೇದನಕ್ಕೆ(Vijay Divorce) ನಟಿ ಕೀರ್ತಿ ಸುರೇಶ್ ಎನ್ನುವ ಸುದ್ದಿಯೊಂದು ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ‌

ಇದೇ ವೇಳೆ ಹರಿದಾಡುತ್ತಿರುವ ಈ ಸುದ್ದಿಗೆ ನಟಿ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದರೆ ಚೆನ್ನಾಗಿರುತ್ತದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ವಿಜಯ್ ಮತ್ತು ಕೀರ್ತಿ ಸುರೇಶ್ (Vijay and Keerti Suresh) ಇಬ್ಬರೂ ಜೊತೆಯಾಗಿ ಭೈರವ, ಸರ್ಕಾರ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ವಿಜಯ್ ಕೀರ್ತಿ ಸುರೇಶ್ ಅವರ ಜೊತೆಗೆ ಕ್ಲೋಸ್ ಆಗಿದ್ದಾರೆ ಎನ್ನುವ ಕಾರಣಕ್ಕೆ ನಟನ ಪತ್ನಿ ಸಂಗೀತಾ ಅವರು ಗಂಡನಿಗೆ ಎಚ್ಚರಿಕೆಯನ್ನು ನೀಡಿದ್ದರೂ ವಿಜಯ್ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನಲಾಗಿದೆ.

ಪ್ರಸ್ತುತ ತಮಿಳುನಾಡಿನಲ್ಲಿ ಜಸ್ಟಿಸ್ ಫಾರ್ ಸಂಗೀತ ಎನ್ನುವ ಹ್ಯಾಷ್ ಟ್ಯಾಗ್ ವೈರಲ್ ಆಗುತ್ತಿದೆ ಎನ್ನಲಾಗಿದ್ದು, ನಟನ ವಿಚ್ಚೇದನದ ಸುದ್ದಿ ಯಾವ ಮಟ್ಟಕ್ಕೆ ಎನ್ನುವುದು ಇದರಲ್ಲೇ ಅರ್ಥವಾಗುತ್ತಿದೆ. ನಟ ವಿಜಯ್(Vijay) ಅವರ ವಾರಿಸು ಸಿನಿಮಾ ಹಿಟ್ ಬೆನ್ನಲ್ಲೇ ಅವರ ವಿಚ್ಚೇದನದ ವಿಷಯ ಸುದ್ದಿಯಾಗಿರುವುದು ನಟನ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ ನಟ ವಿಜಯ್ ಅಥವಾ ನಟಿ ಕೀರ್ತಿ ಸುರೇಶ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

LEAVE A REPLY

Please enter your comment!
Please enter your name here