ವಿಜಯ್ ದೇವರಕೊಂಡಗಾಗಿ ರಶ್ಮಿಕಾ ಮಾಡ್ತಾರಂತೆ ಈ ಕೆಲಸ: ಥ್ರಿಲ್ ಆದ ಅಭಿಮಾನಿಗಳು!!

Entertainment Featured-Articles Movies News

ಸದ್ಯಕ್ಕಂತೂ ದಕ್ಷಿಣ ಸಿನಿಮಾ ರಂಗದಲ್ಲಿ ಇಬ್ಬರು ನಟಿಯರು ಪ್ರತಿ ದಿನವೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ. ಆ ಇಬ್ಬರೇ ನಟಿಯರಾದ ಸಮಂತಾ ಮತ್ತು ರಶ್ಮಿಕಾ. ಇದೀಗ ನಟಿ ರಶ್ಮಿಕಾ ಕುರಿತಾಗಿ ಹೊಸದೊಂದು ಅಪ್ಡೇಟ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ನಟಿ ರಶ್ಮಿಕಾ ಟಾಲಿವುಡ್ ನ ಸ್ಟಾರ್ ನಟಿ, ಬಹುಬೇಡಿಕೆಯ ನಟಿ, ಈಗಾಗಲೇ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿಯಾಗಿದೆ, ಬಾಲಿವುಡ್ ನಲ್ಲಿ ಎರಡು ಸಿನಿಮಾ ಮುಗಿದಿವೆ. ಮೂರನೇ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಪಂಚಭಾಷಾ‌ ತಾರೆಯಾಗಿ ರಶ್ಮಿಕಾ ಮಿಂಚುತ್ತಿದ್ದಾರೆ.

ಇವೆಲ್ಲವುಗಳ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ರಶ್ಮಿಕಾ ಅವರ ಆಪ್ತ ಸ್ನೇಹಿತ ನಟ ವಿಜಯ ದೇವರಕೊಂಡ ಕುರಿತಾಗಿ ಒಂದು ಗಾಸಿಪ್ ಸದ್ದು ಮಾಡಿತ್ತು. ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವೆ ಮನಸ್ತಾಪ ಮೂಡಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ತಕ್ಕಂತೆ ನಟಿ ರಶ್ಮಿಕಾ ವಿಜಯ್ ದೇವರಕೊಂಡ ಜನ್ಮದಿನಕ್ಕೆ ವಿಶ್ ಮಾಡಲಿಲ್ಲ, ಕರಣ್ ಜೋಹರ್ ಪಾರ್ಟಿಯಲ್ಲಿ ಇಬ್ಬರೂ ಭಾಗವಹಸಿದರೂ ಸಹಾ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. ಇದೆಲ್ಲಾ ನೋಡಿ ಈ ಜೋಡಿಯ ನಡುವೆ ಏನೋ ಆಗಿದ ಎನ್ನುವ ಅನುಮಾನ ಮೂಡಿತ್ತು.

ನಟಿ ರಶ್ಮಿಕಾ ಟಾಲಿವುಡ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು ವಿಜಯ ದೇವರಕೊಂಡ ಜೊತೆಗೆ ನಟಿಸಿದ ಸಿನಿಮಾಗಳಿಂದಲೇ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಜೋಡಿ ಜೊತೆಯಾಗಿ ನಟಿಸಿದ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸದ್ದು ಮಾಡಿದ್ದವು. ಎರಡೂ ಸಿನಿಮಾಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅನಂತರ ರಶ್ಮಿಕಾ ಹಾಗೂ ವಿಜಯ ದೇವರಕೊಂಡ ವೈಯುಕ್ತಿಕ ಜೀವನದಲ್ಲಿ ಸಹಾ ಜೊತೆ ಜೊತೆಯಾಗಿ ಕಾಣಿಸಿಕೊಂಡು ಸಖತ್ ಸುದ್ದಿಯಾದರು. ಇವರ ನಡುವೆ ಏನೋ ಇದೆ ಎಂದು ಸುದ್ದಿಗಳಾದವು.

ಹೀಗಿದ್ದ ಇವರು ಇತ್ತೀಚಿಗೆ ದೂರವಾಗಿದ್ದರು ಎನ್ನುವ ಸುದ್ದಿಗಳು ದಟ್ಟವಾಗಿಯೇ ಇದ್ದವು. ಆದರೆ ಲೈಗರ್ ಸಿನಿಮಾದ ಪೋಸ್ಟರ್ ಬಿಡುಗಡೆ ನಂತರ ರಶ್ಮಿಕಾ ಟ್ವೀಟ್ ಮಾಡಿ ವಿಜಯ್ ದೇವರಕೊಂಡಾಗೆ ಶುಭಾಶಯ ತಿಳಿಸಿದ್ದರು. ಅದಕ್ಕೆ ನಟ ಕೂಡಾ ಪ್ರತಿಕ್ರಿಯೆ ನೀಡಿದ್ದರು. ಇವರ ಟ್ವೀಟ್ ಗಳು ವೈರಲ್ ಆಗಿದ್ದವು. ಅಲ್ಲಿಗೆ ಇವರ ನಡುವೆ ಸಮಸ್ಯೆ ಇದೆ ಎಂದು ಎದ್ದಿದ್ದ ಊಹಾ ಪೋಹಗಳಿಗೆ ಹಾಗೆಲ್ಲಾ ಏನಿಲ್ಲ ಎಂದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪರೋಕ್ಷವಾಗಿ ಉತ್ತರ ನೀಡಿದ್ದರು.

ಈಗ ಹೊಸ ಸುದ್ದಿಯ ಪ್ರಕಾರ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳಲಿದೆ. ಆದರೆ ಅದು ಒಂದು ವಿಶೇಷ ಹಾಡಿಗಾಗಿ ಎನ್ನುವುದೇ ವಿಶೇಷವಾಗಿದೆ. ನಟ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾ‌ ಜನ ಗಣ ಮನದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಈ ಸಿನಿಮಾದ ಒಂದು ವಿಶೇಷ ಹಾಡಿಗಾಗಿ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳು ಈ ವಿಷಯವನ್ನು ಕೇಳಿ ಸಖತ್ ಥ್ರಿಲ್ ಆಗಿದ್ದಾರೆ.

ಸಿನಿಮಾದಲ್ಲಿ ವಿಶೇಷ ಹಾಡಿಗಾಗಿ ಈ ಜೋಡಿ ಹೆಜ್ಜೆ ಹಾಕಲಿದ್ದಾರೆ ಎನ್ನುವ ಕಾರಣಕ್ಕೆ ಹಾಡು ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲವನ್ನು ಕೆರಳಿಸಿದೆ ಈ ಸುದ್ದಿ. ಅಭಿಮಾನಿಗಳು ಇದೊಂದು ಸೂಪರ್ ಹಿಟ್ ಹಾಡಾಗುತ್ತದೆ ಎಂದು ಊಹೆ ಮಾಡಲು ಆರಂಭಿಸಿದ್ದಾರೆ. ಅಲ್ಲದೇ ಈ ಜೋಡಿ ಪೂರ್ಣ ಪ್ರಮಾಣದಲ್ಲಿ ನಾಯಕ, ನಾಯಕಿಯಾಗಿ ಯಾವಾಗ ಮತ್ತೊಮ್ಮೆ ತೆರೆಯ ಮೇಲೆ ಬರಲಿದ್ದಾರೆ ಎಂದು ಸಹಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಹೆಜ್ಜೆ ಹಾಕಲಿರುವ ಹಾಡಿನ ಸುದ್ದಿ ಈಗ ಹಾಟ್ ಟಾಪಿಲ್ ಆಗಿದೆ.

Leave a Reply

Your email address will not be published.