ಕಳೆದ ಕೆಲವು ತಿಂಗಳುಗಳಲ್ಲಿ ಮಾದ್ಯಮಗಳಲ್ಲಿ ದೊಡ್ಡ ಚರ್ಚೆಯಾದ ವಿಷಯ ಎಂದರೆ ಅದು ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ. ಇದು ಅಭಿಮಾನಿಗಳಿಗೆ ದೊಡ್ಡ ಶಾ ಕ್ ಆಗಿತ್ತು, ಈ ಅನಿರೀಕ್ಷಿತ ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು, ತಮ್ಮ ಅಭಿಮಾನ ಜೋಡಿ ಮತ್ತೆ ಒಂದಾಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ಎಲ್ಲದರ ನಡುವೆಯೇ ಸಮಂತಾ, ನಾಗಚೈತನ್ಯ ಅಧಿಕೃತವಾಗಿ ತಮ್ಮ ವಿಚ್ಛೇದನದ ಘೋಷಣೆಯನ್ನು ಮಾಡಿಯೇ ಬಿಟ್ಟರು.
ಸಮಂತಾ ಹಾಗೂ ನಾಗಚೈತನ್ಯ ಜೋಡಿ ಬೇರೆಯಾದ ಮೇಲೆ ಸಮಂತಾ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು, ಆಕೆಯನ್ನು ಟ್ರೋಲ್ ಮಾಡಲಾಯಿತು, ಸಮಂತಾ ತನ್ನ ವಿಚ್ಛೇದನದ ಬಗ್ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಭಾವನೆಗಳನ್ನು ಹಂಚಿಕೊಂಡರು. ಆದರೆ ಇವೆಲ್ಲವುಗಳ ನಡುವೆ ನಟ ನಾಗಚೈತನ್ಯ ಮಾತ್ರ ತಮ್ಮ ವಿಚ್ಛೇದನದ ಕುರಿತಾಗಿ ಎಲ್ಲೂ, ಏನೂ ಹೇಳಲಿಲ್ಲ. ವಿಚ್ಛೇದನದ ವಿಚಾರವಾಗಿ ನಾಗಚೈತನ್ಯ ಮಾತನಾಡಲಿಲ್ಲ.
ನಾಗಚೈತನ್ಯ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಕಡಿಮೆ ಸಕ್ರಿಯವಾಗಿರುವ ಸೆಲೆಬ್ರಿಟಿ ಆಗಿದ್ದಾರೆ. ಅಲ್ಲದೇ ಅವರು ತನಗೆ ಇದರಲ್ಲಿ ಹೆಚ್ಚು ಆಸಕ್ತಿಯಿಲ್ಲ ಎನ್ನುವ ಮಾತನ್ನು ಸಹಾ ಈ ಹಿಂದೆ ಹೇಳಿದ್ದರು. ಆದ್ದರಿಂದಲೇ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಹಾ ಅವರ ವಿಚ್ಛೇದನದ ಬಗ್ಗೆಯಾಗಲೀ, ಸಮಂತಾ ಕುರಿತಾಗಿ ಆಗಲೀ ಏನಾದರೂ ಹೇಳುವರು ಅಂದುಕೊಂಡವರಿಗೆ ಅಲ್ಲೂ ಯಾವುದೇ ರೀತಿಯ ಸುದ್ದಿ, ಮಾಹಿತಿ ಸಿಗಲಿಲ್ಲ.
ಆದರೆ ಇದೀಗ ನಾಗಚೈತನ್ಯ ಮೊದಲ ಬಾರಿಗೆ ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ನಾಗಚೈತನ್ಯ ವಿಚ್ಛೇದನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ವಿಚ್ಚೇದನ ಎನ್ನುವುದು ನಾವಿಬ್ಬರೂ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಆಕೆ ಅದರಿಂದ ಸಂತೋಷವಾಗಿದ್ದರೆ ನನಗೂ ಕೂಡಾ ಅದು ಸಂತೋಷ. ನಾವಿದ್ದ ಪರಿಸ್ಥಿತಿಯಲ್ಲಿ ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವದು” ಎಂದಿದ್ದಾರೆ ನಾಗಚೈತನ್ಯ.
ಪ್ರಸ್ತುತ ನಾಗಚೈತನ್ಯ ತಮ್ಮ ತಂದೆ ನಾಗಾರ್ಜುನ ಅವರ ಜೊತೆಗೆ ನಟಿಸಿರುವ ಬಂಗರ್ರಾಜು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ನಾಗಾರ್ಜುನ, ರಮ್ಯಕೃಷ್ಣ, ಕೃತಿ ಶೆಟ್ಟಿ ನಟಿಸಿದ್ದಾರೆ. ಇನ್ನು ಸಮಂತಾ ಕೂಡಾ ತೆಲುಗು, ತಮಿಳು ಹಾಗೂ ಹಿಂದಿ ಪ್ರಾಜೆಕ್ಟ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಅಲ್ಲದೇ ಶೀಘ್ರದಲ್ಲೇ ಒಂದು ಹಾಲಿವುಡ್ ಪ್ರಾಜೆಕ್ಟ್ ಕೂಡಾ ಮಾಡಲಿದ್ದಾರೆ ಎನ್ನಲಾಗಿದೆ.