ವಿಚ್ಛೇದನದ ವದಂತಿಗಳ ಬೆನ್ನಲ್ಲೇ ನಟಿ ಸಮಂತ ತೆಗೆದುಕೊಂಡಿದ್ದಾರೆ 2 ಪ್ರಮುಖ ನಿರ್ಧಾರಗಳು

Entertainment Featured-Articles News
86 Views

ತೆಲುಗು ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿರುವ ನಟಿ ಸಮಂತ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ತಾನು ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆಯಲಿರುವ ವಿಷಯವನ್ನು ಹೇಳಿದಾಗ ಅವರ ಅಭಿಮಾನಿಗಳ ಜೊತೆಗೆ, ಸಿನಿ ಪ್ರೇಕ್ಷಕರು ಸಹಾ ಅಚ್ಚರಿಯನ್ನು ಹೊರ ಹಾಕಿದ್ದರು. ಅಲ್ಲದೇ ಇತ್ತೀಚಿಗೆ ಸಮಂತಾ ಹಾಗೂ ನಾಗ ಚೈತನ್ಯ ನಡುವಿನ ಸಂಬಂಧವು ಕೂಡಾ ಅಷ್ಟೊಂದು ಸರಿಯಿಲ್ಲ. ಇಬ್ಬರ ನಡುವಿನ ಸಂಬಂಧ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿವೆ‌.

ಸಮಂತಾ ಮತ್ತು ನಾಗ ಚೈತನ್ಯ ಆಗಲೀ ಅಥವಾ ಅವರ ಕುಟುಂಬ ವರ್ಗದವರೇ ಆಗಲೀ ಈ ವಿಚಾರವಾಗಿ ಯಾವುದೇ ರೀತಿಯ ಅಧಿಕೃತ ಹೇಳಿಕೆಯನ್ನು ಮಾತ್ರ ಇನ್ನೂ ನೀಡಿಲ್ಲ. ಈ ನಡುವೆ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆಯುತ್ತೇನೆ ಎಂದು ಹೇಳಿದ್ದ ವಿಚಾರವನ್ನು ಇದೀಗ ಕೈ ಬಿಟ್ಟಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಬ್ಯುಸಿಯಾಗಿರುವ ನಟಿಗೆ ಇದೀಗ ಬಾಲಿವುಡ್ ನಿಂದಲೂ ಕೆಲವು ಹೊಸ ಪ್ರಾಜೆಕ್ಟ್ ಗಳಿಗೆ ಅವಕಾಶಗಳು ಅರಸಿ ಬಂದಿವೆ ಎನ್ನಲಾಗಿದೆ.

ಹೌದು ನಟಿ ಸಮಂತಾ ನಟಿಸಿದ್ದ ದಿ ಫ್ಯಾಮಿಲಿ ಮ್ಯಾನ್ ಟು ನಲ್ಲಿ ಅವರ ಅಭಿನಯ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರಕ್ಕಾಗಿ ಒಂದು ಪ್ರಶಸ್ತಿ ಕೂಡಾ ಪಡೆದಿದ್ದಾರೆ ಸಮಂತ. ಹಿಂದಿ ಪ್ರೇಕ್ಷಕರಿಗೆ ಸಮಂತ ನಟನೆ ಹಿಡಿಸಿದೆ ಎನ್ನಲಾಗಿದ್ದು, ಬಾಲಿವುಡ್ ನ ಕೆಲವು ನಿರ್ಮಾಪಕರು ಇದೇ ಕಾರಣದಿಂದ ಸಮಂತಾ ಅವರಿಗೆ ತಮ್ಮ ಹೊಸ ಪ್ರಾಜೆಕ್ಟ್‌ ಗಳಲ್ಲಿ ಆಫರ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ ಮತ್ತು ಡಿಕೆ ನಿರ್ದೇಶನದ ಒಂದು ವೆಬ್ ಸಿರೀಸ್ ನಲ್ಲಿ ಸಮಂತಾ ಅವರಿಗೆ ಮುಖ್ಯ ಪಾತ್ರಕ್ಕೆ ಆಫರ್ ಬಂದಿದೆ ಎನ್ನಲಾಗಿದೆ. ಒಂದು ಸುಪ್ರಸಿದ್ಧ ಓಟಿಟಿ ಪ್ಲಾಟ್ ಫಾರಂ ಇದನ್ನು ನಿರ್ಮಾಣ ಮಾಡಲಿದ್ದು, ಸಮಂತಾ ಗೆ ದೊಡ್ಡ ಸಂಭಾವನೆ ಸಿಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅಲ್ಲದೇ ಇದರ ಜೊತೆಗೆ ಇನ್ನೊಂದೆರಡು ಪ್ರಾಜೆಕ್ಟ್ ಗಳು ಸಮಂತಾ ಕೈಯಲ್ಲಿದೆ ಎನ್ನಲಾಗಿದೆ.

ಮೂರು ಹಿಂದಿ ಪ್ರಾಜೆಕ್ಟ್ ಒಪ್ಪಿದರೆ ಹೆಚ್ಚಿನ ಸಮಯ ಮುಂಬೈನಲ್ಲಿ ಇರಬೇಕಾದ್ದರಿಂದ ಸಮಂತಾ ಮುಂಬೈ ಮಹಾನಗರದಲ್ಲಿ ಮನೆಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದ್ದು, ಸಮಂತಾ ಸಿನಿಮಾದಿಂದ ಬ್ರೇಕ್ ಪಡೆಯುವ ವಿಷಯ ಕೈ ಬಿಟ್ಟಿರುವ ಕಾರಣವನ್ನು ಕೇಳಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಅಭಿಮಾನ ನಟಿಯ ಈ ಎರಡು ನಿರ್ಧಾರಗಳು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.‌

ನಟಿ ಸಮಂತ ಜುಲೈನಲ್ಲಿ ತಮ್ಮ‌ ಹೆಸರಿನಿಂದ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದು ಹಾಕಿದ್ದಾರೆ. ಅಲ್ಲದೇ ಅವರು ನಾಗಾರ್ಜುನ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಸಹಾ ಗೈರಾಗಿದ್ದರು. ಇದೆಲ್ಲವನ್ನೂ ನೋಡಿದ ಮೇಲೆ ಸಮಂತ ಹಾಗೂ ನಾಗ ಚೈತನ್ಯ ಸಂಬಂಧದ ಬಗ್ಗೆ ಅನುಮಾನಗಳು ಮೂಡಿವೆ‌. ಅಲ್ಲದೇ ಸಮಂತ ಈ ವಿಷಯದ ಬಗ್ಗೆ ತಾನು ಏನೂ ಮಾತನಾಡಲು ಬಯಸುವುದಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *