ವಿಚ್ಛೇದನದ ನಂತರ ಮೊದಲ ಬಾರಿಗೆ ಲವ್ ಬಗ್ಗೆ ಬರೆದ ನಾಗಚೈತನ್ಯಇದು ಗ್ರೀನ್ ಲೈಟ್ ಎಂದಿದ್ದೇಕೆ??
ನಾಗಚೈತನ್ಯ ಮತ್ತು ಸಮಂತಾ ವಿಚ್ಚೇದನದ ನಂತರ ಸಮಂತಾ ಕುರಿತಾಗಿ ಬಹಳಷ್ಟು ಸುದ್ದಿಗಳಾಗಿವೆ. ಅಲ್ಲದೇ ಸಮಂತಾ ಹೊಸ ಹೊಸ ಸಿನಿಮಾ ಗಳಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ಮೂಲಕ ಸಮಂತಾ ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಲೇ ಇರುತ್ತದೆ. ಆದರೆ ನಾಗಚೈತನ್ಯ ಮಾತ್ರ ಅಷ್ಟಾಗಿ ಯಾವುದೇ ಸುದ್ದಿಯಲ್ಲಾಗಲೀ, ಸೋಶಿಯಲ್ ಮೀಡಿಯಾಗಳಲ್ಲೇ ಆಗಲೀ ಕಾಣಿಸಿಕೊಂಡಿಲ್ಲ. ಆದರೆ ವಿಚ್ಚೇದನದ ನಂತರ ಮೊದಲು ಬಾರಿಗೆ ನಾಗಚೈತನ್ಯ ಒಂದು ಪೋಸ್ಟ್ ಮಾಡಿದ್ದಾರೆ.
ನಾಗಚೈತನ್ಯ ಅವರು ವಿಚ್ಚೇದನದ ನಂತರ ಮೊದಲ ಪೋಸ್ಟ್ ನಲ್ಲಿ ಪ್ರೇಮದ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ನಾಗಚೈತನ್ಯ ಈ ಹಿಂದೆ ಕೂಡಾ ಸಂದರ್ಶನವೊಂದರಲ್ಲಿ ತಾನು ಖಾಸಗಿ ಜೀವನಕ್ಕೆ ಹೆಚ್ಚು ಮಹತ್ವ ನೀಡುವುದರಿಂದ ಸೋಶಿಯಲ್ ಮೀಡಿಯಾಗಳಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ ಎಂದಿದ್ದರು. ನಾಗಚೈತನ್ಯ ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡಿದಾಗಲೂ ನಮಗೆ ಅಲ್ಲಿ ಕೇವಲ 52 ಪೋಸ್ಟ್ ಗಳು ಮಾತ್ರವೇ ಕಾಣಿಸುತ್ತದೆ.
ಅಕ್ಟೋಬರ್ 2 ರಂದು ನಾಗಚೈತನ್ಯ ಮತ್ತು ಸಮಂತಾ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಣೆ ಮಾಡಿದರು. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದ ನಂತರ, ಸಮಂತಾ ರಿಂದ ದೂರವಾದ ಮೇಲೆ ನಾಗಚೈತನ್ಯ ತಮ್ಮ ಇನ್ಸ್ಟಾಗ್ರಾಂ ನಿಂದ ಒಂದು ತಿಂಗಳಿಗಿಂತ ಹೆಚ್ಚಿನ ಕಾಲ ದೂರ ಉಳಿದಿದ್ದರು. ಆದರೆ ಈಗ ಬಹು ದಿನಗಳ ನಂತರ ನಾಗಚೈತನ್ಯ ಒಂದು ಅರ್ಥಪೂರ್ಣ ಪೋಸ್ಟ್ ನೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ನಾಗಚೈತನ್ಯ ಶನಿವಾರ ನವೆಂಬರ್ 20 ರಂದು ತಾನು ಓದಿದ ಪುಸ್ತಕವೊಂದರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ನಾಗಚೈತನ್ಯ ಅವರು ಮ್ಯಾಥ್ಯೂ ಮ್ಯಾಕ್ನೋಯಿ ಬರೆದಿರುವ “ಎ ಲವ್ ಲೆಟರ್ ಟು ಲೈಫ್ ” ಎನ್ನುವ ಪುಸ್ತಕ ಓದಿದ್ದು, ಅದರ ಫೋಟೋ ಶೇರ್ ಮಾಡಿಕೊಂಡು ‘ ಎ ಲವ್ ಲೆಟರ್ ಟು ಲೈಫ್, ಮ್ಯಾಥ್ಯು ಮ್ಯಾಕ್ನೋಯಿ ನಿಮ್ಮ ಪಯಣವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಈ ಓದು ನನಗೆ ಗ್ರೀನ್ ಲೈಟ್ ( ಮುನ್ನಡೆಯಲು ಬೆಳಕು ) ಆಗಿದೆ” ಎಂದು ಬರೆದುಕೊಂಡಿದ್ದಾರೆ.