ವಿಚ್ಚೇದನ, ಅವಮಾನ, ಮರಣ: ವೈರಲ್ ಆಗ್ತಿದೆ ನಟಿ ಸಮಂತಾ ಹೊಸ ಇನ್ಸ್ಟಾಗ್ರಾಂ ಪೋಸ್ಟ್

Entertainment Featured-Articles News

ಟಾಲಿವುಡ್ ನ ಸ್ಟಾರ್ ನಟಿ, ದಕ್ಷಿಣ ಸಿನಿಮಾ ರಂಗದ ಫುಲ್ ಬ್ಯುಸಿ ನಟಿ ಕೂಡಾ ಆಗಿರುವ ನಟಿ ಸಮಂತಾ ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಿಳಿದಿರುವುದೇ ಆಗಿದೆ. ವಿಚ್ಚೇದನದ ಬಳಿಕ ಸಮಂತಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಿನಿಮಾಗಳ ಮಧ್ಯೆ ಬಿಡುವು ಮಾಡಿಕೊಂಡು ಪ್ರವಾಸಗಳಿಗೆ ಹೋಗುವ ಸಮಂತಾ, ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಟಚ್ ನಲ್ಲಿ ಇರುತ್ತಾರೆ. ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡು ಸಮಂತಾ ಬಹಳ ಆ್ಯಕ್ಟೀವ್ ಆಗಿರುತ್ತಾರೆ.

ಸಮಂತಾ ಕೇವಲ ಫೋಟೋಗಳು ಮಾತ್ರವೇ ಅಲ್ಲದೇ ಆಗಾಗ ಅರ್ಥಗರ್ಭಿತವಾದ ಕೊಟೇಶನ್ ಗಳನ್ನು ಶೇರ್ ಮಾಡಿಕೊಳ್ಳುವ ಮೂಲಕವೂ ಸಹಾ ಜನರ ಗಮನವನ್ನು ಸೆಳೆಯುತ್ತಾರೆ. ಅವರ ಕೊಟೇಶನ್ ಗಳು ಬಹಳ ದೀರ್ಘ ಒಳ ಅರ್ಥವನ್ನು ಒಳಗೊಂಡಿರುತ್ತದೆ. ಸಮಂತಾ ತಮ್ಮ ಅನುಭವಕ್ಕೆ ಹೊಂದಿಕೆಯಾಗುವಂತಹ ಕೊಟೇಶನ್ ಗಳನ್ನು ಶೇರ್ ಮಾಡಿಕೊಳ್ಳುವ ಜೊತೆಗೆ ಪ್ರೋತ್ಸಾಹದ ಮಾತುಗಳನ್ನು ಸಹಾ ಹೇಳುವುದುಂಟು. ಈಗ ಸಮಂತಾ ಮಾಡಿರುವ ಒಂದು ಪೋಸ್ಟ್ ಜನರ ವಿಶೇಷ ಗಮನವನ್ನು ಸೆಳೆದಿದೆ.

ಹಾಲಿವುಡ್ ನ ಜನಪ್ರಿಯ ನಾಯಕ ನಟ ಮತ್ತು ಹಾಸ್ಯ ನಟ ವಿಲ್ ಸ್ಮಿತ್ ಅವರ ಪುಸ್ತಕದಿಂದ ಒಂದು ಕೊಟೇಶನ್ ಅನ್ನು ಸಮಂತಾ ಪೋಸ್ಟ್ ಮಾಡಿಕೊಂಡಿದ್ದಾರೆ. “ನಾನು ಕಳೆದ ಮೂವತ್ತು ವರ್ಷಗಳಲ್ಲಿ ವೈಫಲ್ಯ, ನಷ್ಟ, ಅವಮಾನ, ವಿಚ್ಛೇದನ, ಮರಣಗಳಿಂದ ವ್ಯವಹರಿಸಿದ್ದೇನೆ, ಹಣ ಕಳೆದುಕೊಂಡಿದ್ದೇನೆ, ನನ್ನ ಖಾಸಗಿ ತನದ ಮೇಲೆ ದಾ ಳಿ ನಡೆಯಿತು. ಆದರೆ ನಾನು ಅವೆಲ್ಲವುಗಳಿಂದ ಮೇಲೆದ್ದು ಒಂದು ಹೊಸ ನಿರ್ಮಾಣಕ್ಕೆ ಮುಂದಾದೆ.

ನೀವು ಯಾವುದೇ ಪರಿಸ್ಥಿತಿಯಿಂದ ಸಾಗುತ್ತಿದ್ದರೂ ಸರಿ, ನಿಮಗೆ ಹೊಸ ನಿರ್ಮಾಣಕ್ಕೊಂದು ಇಟ್ಟಿಗೆ ನಿಮಗಾಗಿ ಅಲ್ಲೇ ಎದುರಲ್ಲೇ ಇರುತ್ತದೆ. ಅದನ್ನು ಎತ್ತಿಕೊಂಡು ಹೊಸ ಅಡಿಪಾಯ ಹಾಕಬೇಕಷ್ಟೇ. ಆದರೆ ಪ್ರಶ್ನೆ ಏನೆಂದರೆ ನೀನು ಮೇಲೆದ್ದು ಹೊಸ ಅಡಿಪಾಯ ಹಾಕುವೆಯಾ? ಎನ್ನುವುದು, ಎನ್ನುವ ಸಾಲುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಮಂತಾ ಈ ಮೂಲಕ ಎಲ್ಲರಿಗೂ ಸಹಾ ಜೀವನದಲ್ಲಿ ಹಳೆಯದನ್ನು ದಾಟಿ ಮುಂದೆ ಹೋಗಬೇಕು ಎನ್ನುವುದನ್ನು ಈ ಸ್ಪೂರ್ತಿಯ ಸಾಲುಗಳಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.