ವಿಚ್ಚೇದನದ 6 ತಿಂಗಳ ನಂತರ ಅಕ್ಕಿನೇನಿ ಕುಟುಂಬದ ಬಗ್ಗೆ ಮೊದಲ ಪೋಸ್ಟ್ ಹಂಚಿಕೊಂಡ ನಟಿ ಸಮಂತಾ!!

Entertainment Featured-Articles News

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ವಿಚ್ಛೇದನದ ವಿಷಯ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಎಷ್ಟೆಲ್ಲ ಸುದ್ದಿಯಾಯಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಜೋಡಿಯು ತಮ್ಮ ವೈವಾಹಿಕ ಬಂಧನದಿಂದ ದೂರವಾಗಿ ಆರು ತಿಂಗಳುಗಳು ಕಳೆದು ಹೋಗಿದೆ.‌ ಆದರೂ ಸಹಾ ಇವರಿಗೆ ಸಂಬಂಧಿಸಿದಂತಹ ಒಂದಲ್ಲಾ ಒಂದು ವಿಷಯ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅತ್ತ ಸಮಂತಾ ಆಗಲೀ ಇತ್ತ ಕಡೆ ನಾಗಚೈತನ್ಯ ಆಗಲೀ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್ ಗಳು ವೈರಲ್ ಆಗುವುದು ಒಂದು ಪರಿಪಾಠದಂತೆ ನಡೆಯುತ್ತಿದೆ.

ಆದರೆ ಗಮನಿಸಬೇಕಾದ ವಿಷಯ ಏನೆಂದರೆ ಇವರಿಬ್ಬರಲ್ಲಿ ಯಾರೊಬ್ಬರೂ ಕೂಡಾ ವಿಚ್ಚೇದನದ ನಂತರ ಒಬ್ಬರು ಮತ್ತೊಬ್ಬರ ಕುರಿತಾಗಿ ಇದುವರೆಗೂ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ ಎನ್ನುವುದು. ಆದರೆ ಇದೀಗ ಸರಿ ಸುಮಾರು ಆರು ತಿಂಗಳುಗಳ ನಂತರ ಮೊಟ್ಟ ಮೊದಲ ಬಾರಿಗೆ ನಟಿ ಸಮಂತಾ, ಅಕ್ಕಿನೇನಿ ಕುಟುಂಬದ ಕುರಿತಾಗಿ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಶುಕ್ರವಾರ ಏಪ್ರಿಲ್ 9ರಂದು, ತೆಲುಗಿನ ಹಿರಿಯ ನಟ ನಾಗಾರ್ಜುನ ಅವರ ಕಿರಿಯ ಪುತ್ರ, ಯುವ ನಟ ಅಕ್ಕಿನೇನಿ ಅಖಿಲ್ ಅವರ ಜನ್ಮದಿನವಾಗಿತ್ತು. ಈ ಸಂದರ್ಭದಲ್ಲಿ ಚಿತ್ರರಂಗದ ಹಲವು ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಅಕ್ಕಿನೇನಿ ಅಖಿಲ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದರು. ಇದೇ ಹಿನ್ನೆಲೆಯಲ್ಲಿ ನಟಿ ಸಮಂತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಖಿಲ್ ಅವರಿಗೆ ಜನ್ಮದಿನದ ಶುಭಾಶಯಗಳು ಕೋರುತ್ತಾ, ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಸಮಂತಾ ಶೇರ್ ಮಾಡಿಕೊಂಡ ಈ ಪೋಸ್ಟ್ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದುಕೊಂಡು ವೈರಲ್ ಆಗಿದೆ. ಅಖಿಲ್ ಫೋಟೋವನ್ನು ಹಂಚಿಕೊಂಡ ಸಮಂತಾ, ಅದರ ಜೊತೆಗೆ, “ಜನ್ಮದಿನದ ಶುಭಾಶಯಗಳು ಅಖಿಲ್. ಈ ವರ್ಷಪೂರ್ತಿ ನಿನಗೆ ಒಳ್ಳೆಯದಾಗಬೇಕು ಎಂದು ನಾನು ಕೋರುತ್ತೇನೆ. ನೀನು ಬಯಸಿದ್ದೆಲ್ಲಾ ನಿನಗೆ ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇನೆ, ಗಾಡ್ ಬ್ಲೆಸ್ ಎಂದು ಬರೆದುಕೊಂಡು ಮಾಜಿ ಮೈದುನನ ಜನ್ಮದಿನಕ್ಕೆ ತಮ್ಮ ಕಡೆಯಿಂದ ಶುಭಾಶಯವನ್ನು ಕೋರಿದ್ದಾರೆ.

ಸಮಂತಾ ಹಂಚಿಕೊಂಡ ಪೋಸ್ಟ್ ನೋಡಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ವಿಚ್ಛೇದನ ಆದಮೇಲೆ ಬಹುದಿನಗಳ ನಂತರ ಸಮಂತಾ, ಅಕ್ಕಿನೇನಿ ಕುಟುಂಬದ ಒಬ್ಬ ಸದಸ್ಯನ ಕುರಿತಾಗಿ ಮಾಡಿದ ಮೊದಲ ಪೋಸ್ಟ್ ಇಂಡಸ್ಟ್ರಿಯಲ್ಲಿ ಟಾಕ್ ಅಪ್ ದಿ ಟೌನ್ ಆಗಿ ಮಾರ್ಪಟ್ಟಿದೆ. ಇನ್ಮು ವಿಚ್ಛೇದನದ ನಂತರ ಸಮಂತಾ ಚಿತ್ರಗಳಲ್ಲಿ ಸಾಕಷ್ಟು ಬ್ಯಸಿಯಾಗಿದ್ದಾರೆ. ಪುಷ್ಪ ಸಿನಿಮಾದ ಐಟಂ ಹಾಡಿನ ಮೂಲಕ ದೇಶದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿ, ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published.