ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ವೈಯಕ್ತಿಕ ಜೀವನ ಈಗ ದೊಡ್ಡ ಸುದ್ದಿಗಳಾಗಿದೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ನಂತರ ಸಮಂತಾ ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಅಲ್ಲದೇ ನಟಿಯ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಗಳು ಹರಡಿದ್ದು, ಕೆಲವು ನ್ಯೂಸ್ ಚಾನೆಲ್ ಗಳು ಹಾಗೂ ಯೂಟ್ಯೂಬ್ ಗಳು ಸುಳ್ಳು ಸುದ್ದಿ ಗಳನ್ನು ಹರಡಿದ ಹಿನ್ನೆಲೆಯಲ್ಲಿ ನಟಿ ಬೇಸರಗೊಂಡು ಅಂತಹವರಿಗೆ ಪಾಠ ಕಲಿಸಬೇಕೆಂದು ಕೆಲವು ಚಾನೆಲ್ ಗಳ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವ ಮೂಲಕ ಸುದ್ದಿಯಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ಸಮಂತಾ ಟ್ವೀಟ್ ಮಾಡಿ ತನ್ನ ಬಗ್ಗೆ ಅನಗತ್ಯವಾಗಿ ಹರಡುತ್ತಿರುವ ಗಾಸಿಪ್ ಗಳ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದರು. ವಿಚ್ಚೇದನ ಎನ್ನುವುದೇ ಒಂದು ನೋವಿನ ಪ್ರಕ್ರಿಯೆ ಆದರೆ ಅದರ ನಡುವೆ ವೈಯಕ್ತಿಯ ಧಾ ಳಿಗಳು ಇನ್ನೂ ನೋವನ್ನು ನೀಡುತ್ತಿವೆ. ಇದರಿಂದ ಗುಣವಾಗಲು ಸ್ವಲ್ಪ ಸಮಯವನ್ನು ನೀಡಿ ಎಂದು ಸಹಾ ಹೇಳಿದ್ದರು. ಅಲ್ಲದೇ ಇಂತಹ ದಾ ಳಿಗಳಿಂದ ನನ್ನನ್ನು ಮುರಿಯಲು ಸಾಧ್ಯವಿಲ್ಲ ಎಂದು ಸಹಾ ಸಮಂತಾ ದಿಟ್ಟತನದ ಮಾತುಗಳನ್ನು ಆಡಿದ್ದರು.
ಇದೀಗ ಇವೆಲ್ಲವುಗಳ ಬೆನ್ನಲ್ಲೇ ನಟಿ ಸಮಂತಾ ಮಾನಸಿನ ನೆಮ್ಮದಿ ಹಾಗೂ ಶಾಂತಿಯನ್ನು ಪಡೆಯುವ ಸಲುವಾಗಿ ರಿಷಿಕೇಷ್ ನ ಆಶ್ರಮವೊಂದಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಹೌದು ನಟಿ ಸಮಂತಾ ಉತ್ತರಾಖಂಡ್ ನ ರಿಷಿಕೇಷ್ ನಲ್ಲಿ ಇರುವ ಆಶ್ರಮವೊಂದಕ್ಕೆ ತಮ್ಮ ಆತ್ಮೀಯರ ಜೊತೆಗೆ ಭೇಟಿ ನೀಡಿದ್ದಾರೆ. ರಿಷಿಕೇಶ್ ಆಶ್ರಮ ಹಾಗೂ ರೆಸಾರ್ಟ್ ನ ಫೋಟೋಗಳನ್ನು ಸಮಂತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸಮಂತಾ ರಿಷಿಕೇಷ್ ನಲ್ಲಿ ಇರುವ ರೆಸಾರ್ಟ್ ಹಾಗೂ ಶ್ರೀಪುರುಷೊತ್ತಮಾನಂದಜೀ ಮಹಾರಾಜ್ ವಸಿಷ್ಠ್ ಸ್ವಾಮಿಯವರ ಆಶ್ರಮದ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಆಶ್ರಮದ ಫಲಕವೊಂದರ ಮೇಲೆ “ಖುಷಿ ಎನ್ನುವುದು ಬೇರೆ ಎಲ್ಲೂ ಇಲ್ಲ, ನಮ್ಮೊಳಗೇ ಇದೆ” ಎಂದು ಬರೆದಿರುವುದನ್ನು ಫೋಟೋ ಕ್ಲಿಕ್ ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ.
ಸಮಂತಾ ಶೇರ್ ಮಾಡಿದ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಬಹುಶಃ ಇತ್ತೀಚಿಗೆ ನಡೆದ ಘಟನೆಗಳಿಂದ ಮಾನಸಿಕವಾಗಿ ನೊಂದಿರುವ ಸಮಂತಾ ಮಾನಸಿಕ ನೆಮ್ಮದಿಗಾಗಿ ಆಶ್ರಮಕ್ಕೆ ಭೇಟಿಯನ್ನು ನೀಡಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಟ್ಟಾರೆ ಸಮಂತಾ, ನಾಗಚೈತನ್ಯ ವಿಚ್ಚೇದನದ ನಂತರ ನಾಗಚೈತನ್ಯ ಅವರಿಗಿಂತ ಹೆಚ್ಚು ಟ್ರೋಲ್ ಹಾಗೂ ಗಾಸಿಪ್ ಗಳಿಗೆ ನಟಿ ಸಮಂತಾ ಆಹಾರವಾಗಿದ್ದಾರೆ ಎನ್ನುವುದು ವಾಸ್ತವ.