ವಿಚ್ಚೇದನದ ಪ್ರಸ್ತಾಪ ನಾಗಚೈತನ್ಯ ಮಾಡಿದ್ದಲ್ಲ: ಮಗ ಸೊಸೆಯ ವಿಚ್ಛೇದನದ ಬಗ್ಗೆ ನಾಗಾರ್ಜುನ ಹೇಳಿದ ಸತ್ಯ!!

Entertainment Featured-Articles News
56 Views

ಅವರಿಬ್ಬರೂ ಬೇರೆ ಆಗ್ತಾರೆ ಅಂತ ಯಾರೂ ಕೂಡಾ ಊಹೆ ಮಾಡಿರಲಿಲ್ಲ. ಆದರೆ ಅಂತಹುದೊಂದು ಘಟನೆ ನಡೆದಾಗ ಆ ಜೋಡಿಯ ಅಭಿಮಾನಿಗಳ ಹೃದಯ ಮುರಿದು ಬಿದ್ದಿತ್ತು. ನೀವು ಮತ್ತೆ ಒಂದಾಗಬೇಕೆಂದು ಹಾರೈಸಿದರು. ಆದರೆ ಅದು ಆಗಲೇ ಇಲ್ಲ. ಹೌದು ಕಳೆದ ಅಕ್ಟೋಬರ್ 2 ರಂದು ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿದ್ದ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ವಿಚ್ಚೇದನದ ಘೋಷಣೆಯನ್ನು ಮಾಡಿದರು. ಅವರ ವಿಚ್ಛೇದನ ಅಧಿಕೃತವಾಗಿ ಘೋಷಣೆ ಆದ ಮೇಲೂ ಸಹಾ ಆ ವಿಷಯದ ಬಗ್ಗೆ ಆಗಾಗ ಸುದ್ದಿಗಳು ಆಗುತ್ತಲೇ ಇದೆ.

ನಾಗಚೈತನ್ಯ ಮತ್ತು ಸಮಂತಾ ಬೇರೆಯಾದ ಮೇಲೆ ಅವರು ಎಲ್ಲೂ ಸಹಾ ತಮ್ಮ ವಿಚ್ಚೇದನಕ್ಕೆ ಕಾರಣವೇನು ಎನ್ನುವುದನ್ನು ಮಾತ್ರ ಎಲ್ಲೂ ಹಂಚಿಕೊಳ್ಳಲೇ ಇಲ್ಲ. ಅಭಿಮಾನಿಗಳು ಅವರು ಬೇರೆಯಾಗಲು ಕಾರಣವಾದರೂ ಏನು?? ಎಂದು ಪ್ರಶ್ನೆ ಗಳನ್ನು ಮಾಡಿದ್ದರು. ಆದರೆ ಅದಕ್ಕೆ ಉತ್ತರ ಮಾತ್ರ ಸಿಗಲೇ ಇಲ್ಲ. ಆದರೆ ಇದೀಗ ಬಹುದಿನಗಳ ನಂತರ ಸಮಂತಾ ಅವರ ಮಾಜಿ ಮಾವ, ನಾಗಚೈತನ್ಯ ಅವರ ತಂದೆ ಹಿರಿಯ ನಟ ನಾಗಾರ್ಜುನ ಅವರು ಮಗ ಸೊಸೆಯ ವಿಚ್ಚೇದನದ ಬಗ್ಗೆ ದೊಡ್ಡ ಸತ್ಯವೊಂದನ್ನು ಹಂಚಿಕೊಂಡಿದ್ದಾರೆ.‌

ಹೌದು, ನಾಗಾರ್ಜುನ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗ ಸೊಸೆಯ ವಿಚ್ಚೇದನದ ಬಗ್ಗೆ ಮಾತನಾಡುತ್ತಾ, ವಿಚ್ಚೇದನವನ್ನು ಮೊದಲು ಬಯಸಿದ್ದು ಸಮಂತಾ, ಅವರೇ ಮೊದಲು ಅದಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಮಂತಾ ನಿರ್ಧಾರವನ್ನು ನಾಗಚೈತನ್ಯ ಒಪ್ಪಿಕೊಂಡ ಅಷ್ಟೇ.‌ ಆದರೆ ನಾಗಚೈತನ್ಯ ನಿಗೆ ನನ್ನದೇ ಹೆಚ್ಚು ಚಿಂತೆಯಾಗಿತ್ತು. ನಾನು ಏನೆಂದು ಕೊಳ್ಳುತ್ತೀನೋ ಎಂದು, ಕುಟುಂಬದ ಗೌರವಕ್ಕೆ ಧ ಕ್ಕೆ ಉಂಟಾಗುವುದೇನೋ ಎನ್ನುವ ಆಲೋಚನೆಗಳು ಅವನಿಗೆ ಇತ್ತು.

ನಾನು ಬೇಸರ ಮಾಡಿಕೊಳ್ಳುತ್ತೇನೋ ಎಂದು ಅವನು ನನಗೆ ಸಾಂತ್ವನವನ್ನು ಹೇಳಿದ. ನಾಲ್ಕು ವರ್ಷಗಳಿಂದ ಅವರಿಬ್ಬರು ಅನೋನ್ಯವಾಗಿಯೇ ಇದ್ದರು. ಅವರ ನಡುವೆ ಯಾವುದೇ ಸಮಸ್ಯೆಗಳು ಸಹಾ ಇರಲಿಲ್ಲ. ಆದರೆ ಇಂತಹ ನಿರ್ಧಾರ ಏಕೆ ಮಾಡಿದರೋ ಗೊತ್ತಿಲ್ಲ ಎಂದಿದ್ದಾರೆ. 2021 ರ ಹೊಸ ವರ್ಷವನ್ನು ಇಬ್ಬರೂ ಸಹಾ ಜೊತೆಯಲ್ಲಿ ಸಂಭ್ರಮದಿಂದ ಆಚರಿಸಿದ್ದರು, ಬಹುಶಃ ಅವರ ನಡುವೆ ಸಮಸ್ಯೆ ಅದಾದ ನಂತರವೇ ಆಗಿರಬಹುದು ಎಂದಿರುವ ನಾಗಾರ್ಜುನ ಅವರು ವಿಚ್ಚೇದನದ ಪ್ರಸ್ತಾವ ಮೊದಲು ಮಾಡಿದ್ದು ಸಮಂತಾ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *