ವಿಚ್ಚೇದನದ ನಂತರ ಬರೋಬ್ಬರಿ 250 ಕೋಟಿ ಜೀವನಾಂಶ!! IT ಧಾಳಿ ನಿರೀಕ್ಷಿಸಿದ್ದೆ ಎಂದ ಸಮಂತಾ

Entertainment Featured-Articles Movies News

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ, ಸ್ಟಾರ್ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ದಿಢೀರ್ ವಿಚ್ಛೇದನ ದಕ್ಷಿಣ ಸಿನಿಮಾ ರಂಗದಲ್ಲೊಂದು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಬಹಳ ಆತ್ಮೀಯವಾಗಿದ್ದ, ಟಾಲಿವುಡ್ ನ ಕ್ಯೂಟ್ ಕಪಲ್ ಎಂದೆಲ್ಲಾ ಹೆಸರಾಗಿದ್ದು , ಇದ್ದಕ್ಕಿದ್ದ ಹಾಗೆ ಹರಡಿದ್ದ ಗಾಸಿಪ್ ಗಳೇ ನಿಜ ಎನ್ನುವಂತೆ ಈ ಜೋಡಿ ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದಾಗ ಅಭಿಮಾನಿಗಳಷ್ಟೇ ಅಲ್ಲ ಸಿನಿ ಸೆಲೆಬ್ರಿಟಿಗಳೂ ಸಹಾ ಶಾ ಕ್ ಆಗಿದ್ದರು, ಪ್ರಮುಖ ಸುದ್ದಿಗಳಾಗಿದ್ದವು.

ಸದಾ ಮೋಜು ಮಸ್ತಿಯಲ್ಲಿ ಹಾಗೂ ಖುಷಿಯಾಗಿ ಇರುವಂತೆ ಕಾಣುತ್ತಿದ್ದ ಈ ಜೋಡಿಯು ಇದ್ದಕ್ಕಿದ್ದ ಹಾಗೆ ವಿಚ್ಚೇದನ ಪಡೆದು ದೂರಾಗಿದ್ದಕ್ಕೆ ಕಾರಣಗಳು ಮಾತ್ರ ಇನ್ನೂ ತಿಳಿದುಬಂದಿಲ್ಲ. ಬ್ರೇಕಪ್ ಆದ ನಂತರ ಇಬ್ಬರೂ ಸಹಾ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾದರು. ಇನ್ನು ಇತ್ತೀಚಿಗೆ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಕೊಂಡಿರುವ ನಟಿ ಸಮಂತಾ ಎಲ್ಲೆಲ್ಲೂ ಸುದ್ದಿ ಮಾಡುತ್ತಿದ್ದಾರೆ. ಅದೇ ಜನಪ್ರಿಯತೆ ಹಿನ್ನೆಲೆಯಲ್ಲಿ ನಟಿ ಇತ್ತೀಚಿಗೆ ಬಾಲಿವುಡ್ ನ ಬಹು ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದರು.

ಈ ವೇಳೆ ಕರಣ್ ಜೋಹರ್ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಸಮಂತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೌದು, ಮಾತುಕತೆಯ ವೇಳೆ ಸಮಂತಾ ತಮ್ಮ ವಿಚ್ಛೇದನದ ವೇಳೆ ರೂ.250 ಕೋಟಿ ಜೀವನಾಂಶ ತೆಗೆದುಕೊಂಡಿರುವ ಬಗ್ಗೆ ಎದ್ದಿದ್ದ ಸುದ್ದಿಯ ಬಗ್ಗೆ ಸಹಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಮಾತನಾಡುತ್ತಾ, ವಿಚ್ಛೇದನ ಬಹಳ ಕಷ್ಟದ ಪ್ರಕ್ರಿಯೆ. ಅದು ಅಷ್ಟು ಸಲೀಸಾಗಿ ನಡೆಯಲಿಲ್ಲ.

ಆದರೆ ಈಗ ಎಲ್ಲವೂ ಸರಿಯಾಗಿದೆ. ನಾನು ಮೊದಲಿಗಿಂತ ಗಟ್ಟಿಯಾಗಿದ್ದೇನೆ. ಅಲ್ಲದೇ 250 ಕೋಟಿ ರೂ. ಜೀವನಾಂಶ ತೆಗೆದುಕೊಂಡಿದ್ದೇನೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತಾ, “ನಾನು 250 ಕೋಟಿ ರೂಪಾಯಿ ತೆಗೆದುಕೊಂಡಿದ್ದೇನೆ ಎಂದು ಹಲವು ವದಂತಿಗಳು ಹಬ್ಬಿವೆ, ಆದರೆ ಆ ಸುದ್ದಿಯಲ್ಲಿ ಖಂಡಿತ ಸತ್ಯಾಂಶವಿಲ್ಲ. ಈ ವದಂತಿಗಳು ಬಂದಾಗ, ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡುತ್ತಾರೆ ಎಂದು ನಾನು ಕಾಯುತ್ತಿದ್ದೆ, ”ಎಂದು ಸಮಂತಾ ಹೇಳಿದ್ದಾರೆ.

ಇದೇ ವೇಳೆ ಸಮಂತಾ ಅವರನ್ನು ನಿಮ್ಮ ಹಾಗೂ ನಾಗ ಚೈತನ್ಯ ನಡುವೆ ಏನಾದರೂ ಕಠಿಣವಾದ ಭಾವನೆಗಳಿವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮಂತಾ, ನಮ್ಮಿಬ್ಬರನ್ನು ಏನಾದರೂ ಒಂದೇ ಕೋಣೆಯಲ್ಲಿ ಇರಿಸಿದರೆ ನೀವು ಚೂಪಾದ ವಸ್ತುಗಳನ್ನು ಮರೆ ಮಾಚಿ ಇಡಬೇಕಾಗುತ್ತದೆ ಎಂದು ಸಮಂತಾ ಹೇಳಿದ್ದಾರೆ. ಪ್ರಸ್ತುತ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಸಮಂತಾ ಕೈಯಲ್ಲಿ ಯಶೋದಾ, ಶಾಕುಂತಲಂ ಮತ್ತು ಖುಷಿ ಸಿನಿಮಾಗಳಿವೆ.

Leave a Reply

Your email address will not be published.