ವಿಚಿತ್ರ ಚಟ! ಕಾಂಡೋಮ್ ಖರೀದಿಗೆ ಮುಂದಾದ ಪ.ಬಂಗಾಳ ಯುವಕರು: ಕಾರಣ ತಿಳಿದು ದಿಗ್ಭ್ರಮೆಗೊಂಡ ಜನ

Entertainment Featured-Articles News

ಪಶ್ಚಿಮ‌ ಬಂಗಾಳದ ದುರ್ಗಾಪುರದಲ್ಲಿ ನೆಲೆಸಿರುವ ಬೆರಳೆಣಿಕೆಯಷ್ಟು ಯುವಕರು ಈಗ ಒಂದು ವಿಚಿತ್ರ ಚಟಕ್ಕೆ ಸಿಲುಕಿದ್ದಾರೆ. ಈ ವಿಚಾರವು ಈಗ ಎಲ್ಲರಿಗೂ ಆ ಘಾ ತವನ್ನು ನೀಡುವಂತಾಗಿದೆ. ಹೌದು, ಕಳೆದ ಕೆಲವು ದಿನಗಳಲ್ಲಿ ದುರ್ಗಾಪುರದ ವಿವಿಧ ಭಾಗಗಳು ಅಂದರೆ ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ ಮತ್ತು ಮುಚಿಪಾರ, ಸಿ ವಲಯ, ಎ ವಲಯಗಳಲ್ಲಿ ಸುವಾಸನೆಯ ಕಾಂಡೋಮ್‌ಗಳ ಮಾರಾಟವು ತೀವ್ರವಾಗಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈಗ ಈ ವಿಲಕ್ಷಣ ಘಟನೆಯು ಎಲ್ಲರಲ್ಲೂ ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ವಿಚಾರ ಹೊರ ಬಂದ ಮೇಲೆ ಹೆಚ್ಚಿದ ಕುತೂಹಲದಿಂದ, ಸ್ಥಳೀಯ ಅಂಗಡಿಯವರೊಬ್ಬರು ತನ್ನ ಅಂಗಡಿಯಲ್ಲಿ ಸಾಮಾನ್ಯ ಗ್ರಾಹಕನಾಗಿದ್ದ ಒಬ್ಬ ಯುವಕನನ್ನು ಈ ವಿಚಾರವಾಗಿ ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಯುವಕ, ತಾನು ನಶೆ ಏರಿಸಿಕೊಳ್ಳಲು ನಿಯಮಿತವಾಗಿ ಕಾಂಡೋಮ್ ಖರೀದಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ದುರ್ಗಾಪುರದ ಯುವಜನರ ಈ ಹೊಸ ವ್ಯಸನದ ಬಗ್ಗೆ ತಿಳಿದ ನಂತರ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅನೇಕರು ಇದೆಂತ ವಿಚಿತ್ರ ಚಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುರ್ಗಾಪುರ ವಿಭಾಗೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಧೀಮನ್ ಮಂಡಲ್ ಅವರು ಈ ಅಸಾಮಾನ್ಯ ಆಕರ್ಷಣೆಗೆ ಪ್ರತಿಕ್ರಿಯೆ ನೀಡಿದ್ದು, “ಕಾಂಡೋಮ್ ಗಳು ಆರೊಮ್ಯಾಟಿಕ್ ಸಂಯುಕ್ತವನ್ನು ಹೊಂದಿರುತ್ತವೆ. ಇದು ಆಲ್ಕೋಹಾಲ್ ರೂಪಕ್ಕೆ ಪರಿವರ್ತನೆಯಾಗುತ್ತದೆ ಮತ್ತು ಬಹಳ ವ್ಯಸನಕಾರಿಯಾಗಿದೆ. ಈ ಆರೊಮ್ಯಾಟಿಕ್ ಸಂಯುಕ್ತವು ಡೆಂಡ್ರೈಟ್ ಅಂಟುಗಳಲ್ಲಿಯೂ ಕಂಡುಬರುತ್ತದೆ. ಆದ್ದರಿಂದ ಅನೇಕ ಜನರು ಡೆಂಡ್ರೈಟ್ ಅನ್ನು ವ್ಯಸನಕ್ಕಾಗಿ ಬಳಸುತ್ತಾರೆ ಎಂದಿದ್ದಾರೆ.

ಇದನ್ನು ಮತ್ತಷ್ಟು ವಿಶ್ಲೇಷಿಸಿರುವ ದುರ್ಗಾಪುರ ಆರ್‌ಇ ಕಾಲೇಜಿನ ರಸಾಯನಶಾಸ್ತ್ರ ಶಿಕ್ಷಕ ನೂರುಲ್ ಹಕ್, “ಕಾಂಡೋಮ್‌ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ದೊಡ್ಡ ಸಾವಯವ ಅಣುಗಳು ಆಲ್ಕೊಹಾಲ್‌ ಯುಕ್ತ ಸಂಯುಕ್ತಗಳಾಗಿ ವಿಭಜನೆಯಾಗುವುದರಿಂದ ಮಾದಕತೆ ಉಂಟಾಗುತ್ತದೆ” ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಾರೆ ದುರ್ಗಾಪುರದ ಸ್ಥಳೀಯ ಅಂಗಡಿಯವರು ಹೇಳುವಂತೆ ಮೊದಲು ದಿನಕ್ಕೆ ಮೂರು, ನಾಲ್ಕು ಕಾಂಡೋಮ್ ಸೇಲ್ ಆಗುತ್ತಿತ್ತು ಆದರೆ ಈಗ ಇಡೀ ಪ್ಯಾಕ್ ಖಾಲಿಯಾಗುತ್ತಿದೆ ಎನ್ನಲಾಗಿದೆ.

Leave a Reply

Your email address will not be published.