ವಿಚಾರಣೆಗೆ ತಡವಾಗಿ ಬಂದ ನಟಿಗೆ ಛೀಮಾರಿ ಹಾಕಿ, NCB ಅಧಿಕಾರಿ ಸಮೀರ್ ವಾಂಖೇಡೆ ಕೊಟ್ರು ಖಡಕ್ ಎಚ್ಚರಿಕೆ

Written by Soma Shekar

Published on:

---Join Our Channel---

ಮುಂಬೈ ಡ್ರ ಗ್ಸ್ ಪ್ರಕರಣಕ್ಮೆ ಸಂಬಂಧಿಸಿದ ಹಾಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಹೆಸರು ಸದ್ದು ಮಾಡಿದೆ. ಶಾರೂಖ್ ಪುತ್ರ ಆರ್ಯನ್ ಖಾನ್ ನ ಜೊತೆಗೆ ಆಪ್ತ ಸ್ನೇಹವನ್ನು ಹೊಂದಿರುವ ಅನನ್ಯಾ ಪಾಂಡೆಯನ್ನು ನಿನ್ನೆ ಹಾಗೂ ಇಂದು ಎನ್ ಸಿ ಬಿ ವಿಚಾರಣೆ ನಡೆಸಿದೆ. ಶಾರೂಖ್ ಪುತ್ರ ಕಳೆದ ಇಪ್ಪತ್ತು ದಿನದಿಂದಲೂ ನ್ಯಾಯಾಂಗ ಬಂಧನದಲ್ಲಿ ಇದ್ದು ಆತನ ಜಾಮೀನು ಅರ್ಜಿಗಳು ವಜಾ ಆಗುತ್ತಲೇ ಬರುತ್ತಿದೆ. ಇವೆಲ್ಲವುಗಳ ನಡುವೆ ಆರ್ಯನ್ ಜೊತೆ ಡ್ರ ಗ್ಸ್ ವಿಚಾರದಲ್ಲಿ ನಂಟು ಹೊಂದಿದ್ದಾರೆನ್ನುವ ಅನುಮಾನದ ಮೇಲೆ ಎನ್ ಸಿ ಬಿ ನಟಿ ಅನನ್ಯಾ ಪಾಂಡೆಯ ವಿಚಾರಣೆ ನಡೆಸಿದೆ.

ನಟಿ ಅನನ್ಯಾ ಪಾಂಡೆಗೆ ಎರಡನೇ ಸುತ್ತಿನ ವಿಚಾರಣೆಗಾಗಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಎನ್ ಸಿ ಬಿ ಕಛೇರಿಯಲ್ಲಿ ಹಾಜರಾಗುವಂತೆ ಸೂಚನೆಯನ್ನು ನೀಡಲಾಗಿತ್ತು. ಆದರೆ ನಟಿ ಅನನ್ಯಾ ಪಾಂಡೆ ಸಮಯ ಪಾಲನೆ ಮಾಡದೇ, ಬರೋಬ್ಬರಿ ಮೂರು ಗಂಟೆಗಳ ಕಾಲ ತಡವಾಗಿ ವಿಚಾರಣೆಗೆ ಹಾಜರಾಗಿದ್ದು ಈ ವೇಳೆ ಎನ್ ಸಿ ಬಿ ವಲಯ ಅಧಿಕಾರಿ ಸಮೀರ್ ವಾಂಖೇಡೆ ಅವರು ನಟಿಯ ಈ ಸಮಯ ಪಾಲಿಸದ ವರ್ತನೆಗೆ ಸಿಟ್ಟಾಗಿ, ನಟಿಗೆ ಖಡಕ್ಕಾಗಿಯೇ ಎಚ್ಚರಿಕೆಯನ್ನು ನೀಡಿದ್ದಾರೆಂದು ವರದಿಯಾಗಿದೆ.

ವಿಚಾರಣೆಗೆ ತಡವಾಗಿ ಬಂದ ನಟಿ ಸಮೀರ್ ವಾಂಖೇಡೆ ಅವರು ಇದು ಯಾವುದೇ ಸಿನಿಮಾ ಪ್ರೊಡಕ್ಷನ್ ಹೌಸ್ ಅಲ್ಲ, ಮನಸ್ಸಿಗೆ ಬಂದ ಹಾಗೆ ಬರುವುದಕ್ಕೆ, ಇದು ಕೇಂದ್ರ ಸರ್ಕಾರದ ಏಜನ್ಸಿ ಎಂದು ನೆನಪಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ವಿಚಾರಣೆಗೆ ಸರಿಯಾದ ಸಮಯದಲ್ಲಿ ಹಾಜರಾಗಬೇಕು ಎನ್ನುವ ಎಚ್ಚರಿಕೆಯನ್ನು ಸಹಾ ನೀಡಿದ್ದಾರೆ ಎನ್ನಲಾಗಿದೆ. ನಟಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಅನಂತರ ಅವರನ್ನು ಬಿಡಲಾಗಿದೆ. ಅಲ್ಲದೇ ಅಕ್ಟೋಬರ್ 25 ಕ್ಕೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಅನನ್ಯಾ ಪಾಂಡೆ ಮತ್ತು ಆರ್ಯನ್ ನಡುವೆ ನಡೆದಿದೆ ಎನ್ನಲಾಗಿರುವ ಅನುಮಾನಾಸ್ಪದ ವಾಟ್ಸಾಪ್ ಚಾಟ್ ಗಳ ಆಧಾರದ ಮೇಲೆ ನಟಿಯನ್ನು ವಿಚಾರಣೆಗೆ ಕರೆಸಲಾಗಿತ್ತು. ಅಲ್ಲದೇ ತನಿಖೆ ಮುಂದುವರೆದು ಸೂಕ್ತವಾದ ಸಾಕ್ಷಿಗಳು ದಕ್ಮಿದಲ್ಲಿ ನಟಿ ಅನನ್ಯಾ ಪಾಂಡೆಯ ನ್ನು ಬಂಧಿಸುವ ಸಾಧ್ಯತೆಗಳು ಕೂಡಾ ಇದೆ ಎಂದು ಹೇಳಲಾಗುತ್ತಿದೆ. ಅನನ್ಯಾ ಪಾಂಡೆ ಬಾಲಿವುಡ್ ನ ಹಿರಿಯ ನಟ ಚುಂಕಿ ಪಾಂಡೆ ಅವರ ಮಗಳಾಗಿದ್ದು, ಶಾರೂಖ್ ಹಾಗೂ ಚುಂಕಿ ಪಾಂಡೆ ಕುಟುಂಬದ ನಡುವೆ ಉತ್ತಮ ಬಾಂಧವ್ಯವಿದೆ.

Leave a Comment