ವಿಘ್ನೇಶ್ ಜೊತೆ ಮದುವೆಗೆ ಮುಂಚೆ ಹೀಗೆ ಮಾಡಬೇಕೆಂತೆ: ಜ್ಯೋತಿಷಿ ಹೇಳಿದ ಮಾತಿಗೆ ಓಕೆ ಅಂದ್ರ ನಯನತಾರಾ??

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನ ತಾರಾ ಸಿನಿಮಾಗಳು ಮಾತ್ರವೇ ಅಲ್ಲದೇ ಆಗಾಗ ತಮ್ಮ ಗೆಳೆಯ ವಿಘ್ನೇಶ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಗಳಲ್ಲಿ ಕಾಣಿಸುತ್ತಾರೆ. ಕೆಲವೇ ದಿನಗಳ ಹಿಂದೆ ನಯನತಾರಾ ಹಾಗೂ ವಿಘ್ನೇಶ್ ತಿರುಮಲ ತಿರುಪತಿಗೆ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗಿ ಸುದ್ದಿಯಾಗಿತ್ತು. ಆದರೆ ಇದೀಗ ನಯನತಾರಾ ಮದುವೆಯ ವಿಚಾರವು ಸಖತ್ ಸುದ್ದಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಶೀಘ್ರದಲ್ಲೇ ನಯನತಾರಾ ಮದುವೆ ನಡೆಯಲಿದೆ ಎನ್ನುವ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ವಿಘ್ನೇಶ್ ಜೊತೆಗೆ ಬಹುಕಾಲದಿಂದ ನಯನತಾರಾ ಡೇಟಿಂಗ್ ನಡೆಸುತ್ತಿದ್ದು, ಅಭಿಮಾನಿಗಳು ಅವರ ಮದುವೆ ಯಾವಾಗ?? ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಈಗ ಅಚ್ಚರಿ ಎನ್ನುವಂತೆ ನಯನತಾರಾ ವಿಘ್ನೇಶ್ ಜೊತೆ ಮದುವೆಯಾಗುವ ಮುನ್ನವೇ ಮರವೊಂದರ ಜೊತೆಗೆ ಮದುವೆಯನ್ನು ಆಗಿದ್ದು, ಈ ವಿಷಯವೀಗ ಸುದ್ದಿಯಾಗಿ ಆಶ್ಚರ್ಯವನ್ನು ಉಂಟು ಮಾಡುತ್ತಿದೆ.

ವಿಘ್ನೇಶ್ ಶಿವನ್ ಹಾಗೂ ನಯನತಾರಾ ಪ್ರೇಮ ವಿಚಾರ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಪರಸ್ಪರ ಹೆಚ್ಚು ಸಮಯವನ್ನು ಜೊತೆಯಾಗಿಯೇ ಕಳೆಯುವ ಈ ಜೋಡಿ ತಮ್ಮ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಹೇಗೆ? ಎಲ್ಲಿ?? ಯಾವಾಗ?? ಮದುವೆ ಆಗಲಿದ್ದಾರೆ ಎನ್ನುವ ವಿಷಯಗಳು ಆಗಾಗ ಸುದ್ದಿಯಾಗುತ್ತಲೇ ಇದ್ದರೂ ಖಚಿತವಾಗಿ ಮದುವೆ ಯಾವಾಗ ಎನ್ನುವುದರ ಅಧಿಕೃತ ಘೋಷಣೆಯಾಗಿಲ್ಲ.

ಈಗ ಇವೆಲ್ಲವುಗಳ ನಡುವೆಯೇ ಮದುವೆಯ ಬಗ್ಗೆ ಹೊಸ ಅಚ್ಚರಿಯ ವಿಷಯವು ಕೇಳಿ ಬಂದಿದೆ. ವಿಘ್ನೇಶ್ ಹಾಗೂ ನಯನತಾರಾ ಇಬ್ಬರೂ ಸಹಾ ಜ್ಯೋತಿಷ್ಯ ವನ್ನು ಬಹಳವಾಗಿ ನಂಬುತ್ತಾರೆ ಎನ್ನಲಾಗಿದ್ದು, ತಮ್ಮ ಮದುವೆಯ ವಿಚಾರವಾಗಿ ಅವರು ತಮ್ಮ ಜಾತಕಗಳನ್ನು ಜ್ಯೋತಿಷಿಗಳಿಗೆ ನೀಡಿದ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಅವರ ಜಾತಕದಲ್ಲಿ ಕೆಲವು ದೋಷಗಳಿವೆ ಎನ್ನುವುದನ್ನು ತಿಳಿಸಿದ್ದು, ಅದಕ್ಕೆ ಪರಿಹಾರ ಮಾರ್ಗವನ್ನು ಸಹಾ ನೀಡಿದ್ದಾರೆ ಎನ್ನಲಾಗಿದೆ.

ಹಿಂದೂ ಧರ್ಮದ ಪ್ರಕಾರ ಜಾತಕದಲ್ಲಿನ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಮರ ಅಥವಾ ಪ್ರಾಣಿಯೊಂದಿಗೆ ಮದುವೆಯನ್ನು ಮಾಡಿಕೊಳ್ಳಬಹುದು ಎನ್ನುವ ನಂಬಿಕೆಯಿರುವುದರಿಂದ, ವಿಘ್ನೇಶ್ ಜೊತೆ ಮದುವೆಗೆ ಮುನ್ನ ಮರವೊಂದರ ಜೊತೆಗೆ ಮದುವೆ ಆಗಲು ಜ್ಯೋತಿಷಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ವಿಘ್ನೇಶ್ ಹಾಗೂ ನಯನತಾರಾ ಸಹಾ ಈಗ ಇಂತಹುದೊಂದು ಆಚರಣೆಯನ್ನು ಒಪ್ಪಿಕೊಂಡು ಅದನ್ನು ನೆರವೇರಿಸಲು ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Comment