ಕಾರ್ಗಿಲ್ ಯು ದ್ಧದಲ್ಲಿ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬ ಲಿ ಕೊಟ್ಟ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನದ ಕಥೆಯನ್ನು ಆದರಿಸಿ ತಯಾರಾಗಿರುವ ಶೇರ್ ಷಾ ಹೆಸರಿನ ಸಿನಿಮಾ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಜನರಿಂದ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರ ವಿಕ್ರಮ್ ಬಾತ್ರಾ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕಿಯಾರಾ ಅಡ್ವಾನಿ ನಾಯಕಿಯಾಗಿ ಸಿನಿಮಾದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪ್ರೇಯಸಿಯಾಗಿ ನಟಿಸಿ ಜನರ ಮನಸ್ಸನ್ನು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರಚಕ್ರ ವನ್ನು ಪಡೆದಿರುವ ವಿಕ್ರಮ್ ಬಾತ್ರಾ ಅವರ ಸಾಹಸದ ಕಥೆಯು ಒಂದು ಕಡೆಯಾದರೆ, ಅವರ ಜೀವನದಲ್ಲಿ ಅವರ ಪ್ರೇಮಕಥೆಯೂ ಒಂದು ಮರೆಯದ ಅಧ್ಯಾಯವಾಗಿದೆ.
ಹೌದು ದೇಶ ಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವ ವಿಕ್ರಂ ಬಾತ್ರಾ ಅವರ ಪ್ರೇಯಸಿ ಡಿಂಪಲ್ ಚೀಮಾ ಅವರು ಇಂದಿಗೂ ಸಹಾ ವಿಕ್ರಮ್ ಬಾತ್ರಾ ಅವರ ನೆನಪಿನಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಸಿನಿಮಾದಲ್ಲಿ ವಿಕ್ರಮ್ ಬಾತ್ರಾ ಅವರ ಪ್ರೇಮಕಥೆಯನ್ನು ಜನರ ಮುಂದೆ ಇರಿಸಲಾಗಿದೆ. ಪಂಜಾಬ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಎಂಎ ಮಾಡುತ್ತಿದ್ದ ವಿಕ್ರಮ್ ಬಾತ್ರಾ ಅವರಿಗೆ ಪರಿಚಯವಾದವರು ಡಿಂಪಲ್ ಚೀಮಾ. ಅವರಿಬ್ಬರ ಸ್ನೇಹ ಪ್ರೇಮವಾಗಿ ಅರಳಿದ ಮೇಲೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅವರು ಹತ್ತಿರವಾದರು.
ವಿಕ್ರಮ್ ಹಾಗೂ ಡಿಂಪಲ್ ಇಬ್ಬರೂ ಮದುವೆಯಾಗುವ ನಿರ್ಧಾರವನ್ನು ಮಾಡಿದರು. ಎಂಎ ಮುಗಿದ ಮೇಲೆ ವಿಕ್ರಮ್ ಸೇನೆಗೆ ಸೇರಿದರು. ಅವರು ಆಗಾಗ ಗೆಳತಿಯನ್ನು ಭೇಟಿ ಮಾಡುತ್ತಿದ್ದರು. ಮನೆಯಲ್ಲಿ ಪ್ರೇಮದ ವಿಚಾರವನ್ನು ತಿಳಿಸಿ, ತನಗಾಗಿ ಹುಡುಗಿಯನ್ನು ಹುಡುಕುವ ಅವಶ್ಯಕತೆ ಇಲ್ಲ ತಾನು ಮದುವೆಯಾದರೆ ಅದು ಡಿಂಪಲ್ ಅನ್ನು ಮಾತ್ರ ಎಂದು ಹೇಳಿದ್ದರು. ಮನೆಯಲ್ಲಿ ಅವರ ಮದುವೆಗೆ ಒಪ್ಪಿಗೆ ದೊರೆತು, ಎಲ್ಲರೂ ಸಂತೋಷದಿಂದ ಒಪ್ಪಿಕೊಂಡಿದ್ದರು. ಆ ವರ್ಷ ರಜೆಯಲ್ಲಿ ವಿಕ್ರಮ್ ಊರಿಗೆ ಬಂದಾಗ ಮದುವೆ ಮಾಡಲು ನಿರ್ಧಾರ ಮಾಡಿದ್ದರು.
ಆದರೆ ಆ ಕನಸು ನನಸಾಗಲಿಲ್ಲ. ಏಕೆಂದರೆ ವಿಕ್ರಮ್ ಬಾತ್ರಾ ಮನೆಗೆ ಮರಳಿದ್ದು ಜೀವಂತವಾಗಿಲ್ಲ, ಅವರು ಒಂದು ಸ್ಮರಣೆಯಾಗಿ ಮನೆಗೆ ಮರಳಿದ್ದರು. ಅದೇ ವರ್ಷ ನಡೆದಿದ್ದ ಕಾರ್ಗಿಲ್ ಯು ದ್ಧ ದಲ್ಲಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ತಾನು ಪ್ರೀತಿಸಿದ ಹುಡುಗನನ್ನು ಕೊನೆಯ ಬಾರಿ ನೋಡಲು ಡಿಂಪಲ್ ಮೊದಲ ಬಾರಿಗೆ ವಿಕ್ರಮ್ ಬಾತ್ರಾ ಅವರ ಮನೆಗೆ ಬಂದರು. ಅವರ ಕುಟುಂಬದವರನ್ನು ಆಕೆ ನೇರವಾಗಿ ಭೇಟಿಯಾದದ್ದು ಅದೇ ಮೊದಲ ಬಾರಿ ಎನ್ನುವುದು ವಾಸ್ತವ. ತಮ್ಮ ಭಾವೀ ಸೊಸೆಯನ್ನು ಈ ರೀತಿ ನೋಡಬೇಕಾಗುತ್ತದೆ ಎಂದು ವಿಕ್ರಮ್ ಅವರ ತಂದೆ ತಾಯಿ ಎಂದು ಊಹೆ ಮಾಡಿರಲಿಲ್ಲ.
ಅವರನ್ನು ಒಂದು ನೋವು ಕಾಡಿತ್ತು. ಜೀವ ಕಳೆದುಕೊಂಡು ಮಲಗಿದ್ದ ವಿಕ್ರಮ್ ಬಾತ್ರಾ ಅವರ ಪಾರ್ಥಿವ ಶರೀರದ ಪಕ್ಕ ನಿಂತ ಡಿಂಪಲ್, ತಾನು ಇನ್ನಾರನ್ನು ಮದುವೆಯಾಗುವುದಿಲ್ಲ, ತನ್ನ ಕೊನೆಯ ಉಸಿರಿನವರೆಗೂ ವಿಕ್ರಮ್ ನೆನಪಿನಲ್ಲೇ ಇರುವುದಾಗಿ ಹೇಳಿದರು. ಡಿಂಪಲ್ ಅವರ ಮಾತು ಅಲ್ಲಿದ್ದವರಿಗೆ ಒಂದು ಶಾ ಕ್ ಆಗಿತ್ತು. ವಿಕ್ರಂ ಕಾರ್ಗಿಲ್ ಗೆ ಹೋಗುವ ಮುನ್ನ ಮಾನಸಾ ದೇವಿಯ ಮಂದಿರದಲ್ಲಿ ಬೆರಳನ್ನು ಕೊ ಯ್ದು ಕೊಂಡು ರಕ್ತದಲ್ಲಿ ಡಿಂಪಲ್ ಗೆ ಸಿಂಧೂರ ಇಟ್ಟಿದ್ದರಂತೆ. ಅದೇ ನೆನಪಿನಲ್ಲಿ 22 ವಯಸ್ಸಿನ ತಾನು ಇನ್ಯಾರನ್ನು ಮದುವೆಯಾಗುವುದಿಲ್ಲ ಎಂದು ನಿರ್ಧಾರ ಮಾಡಿದರು.
ವಿಕ್ರಮ್ ಬಾತ್ರಾ ಅವರ ಪ್ರೇಯಸಿ ಡಿಂಪಲ್ ಚೀಮಾ ಅವರಿಗೆ ಈಗ 44 ವರ್ಷ ವಯಸ್ಸು. ಅವರು ಅಂದು ಹೇಳಿದ ಮಾತಿನಂತೆ ಮದುವೆಯಾಗದೆ ವಿಕ್ರಮ್ ಅವರ ನೆನಪಿನಲ್ಲೇ ಜೀವನ ಕಳೆಯುತ್ತಿದ್ದಾರೆ. ಸಂದರ್ಶನವೊಂದರಲ್ಲಿ ವಿಕ್ರಮ್ ಬಾತ್ರಾ ಅವರ ತಾಯಿ ಡಿಂಪಲ್ ಅವರ ಬಗ್ಗೆ ಮಾತನಾಡುತ್ತಾ, ನನ್ನ ಮಗನಿಗೆ ಆಕೆಯ ಪವಿತ್ರ ಪ್ರೇಮ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡರು ವಿಕ್ರಮ್ ಅವರ ತಾಯಿ ಸ್ವತಃ ಡಿಂಪಲ್ ಅವರಿಗೆ ಮದುವೆಯಾಗುವಂತೆ ಸಲಹೆ ನೀಡಿದರೂ ಸಹಾ ಡಿಂಪಲ್ ಅದನ್ನು ಒಪ್ಪಲಿಲ್ಲ. ಅವರು ಇಂದಿಗೂ ವಿಕ್ರಮ ನೆನಪಿನಲ್ಲೇ ಜೀವನವನ್ನು ಕಳೆಯುತ್ತಿದ್ದಾರೆ.