ವಿಕ್ಕಿ ಕೌಶಲ್ ಜೊತೆ ಮದುವೆಗೆ ಮುನ್ನ ಕತ್ರೀನಾ ಕೈಫ್ ಗೆ ಎದುರಾಯ್ತು‌ ಸಂಕಷ್ಟ: ದಾಖಲಾಯ್ತು ದೂರು

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ಸದ್ಯಕ್ಕೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಯ ವೈಭವೋಪೇತ ಮದುವೆಯ ವಿಷಯವೇ ಹಾಟ್ ಟಾಪಿಕ್ ಆಗಿ ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡುತ್ತಲಿದೆ. ಐಶಾರಾಮೀ ಮದುವೆಗೆ ನಡೆಯುತ್ತಿರುವ ಸಿದ್ಧತೆಗಳ ಕುರಿತಾಗಿ ಈಗಾಗಲೇ ಬಹಳಷ್ಟು ಆಸಕ್ತಿಕರ ಹಾಗೂ ರೋಚಕ ಮಾಹಿತಿಗಳು ಹೊರಬಂದಿದೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ರಾಜಸ್ಥಾನದ ಸವಾಯಿ ಮಾಧೋಪುರ್ ನ ಚೌತ್ ಕಾ ಬರ್ವಾಡಾದಲ್ಲಿರುವ ಸಿಕ್ಸ್ ಸೈನ್ಸ್ ಹೋಟೆಲ್ ದರ್ಗ್ ಬರ್ವಾಡಾದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಅಡಿಯಿಡಲು ಎಲ್ಲಾ ಸಿದ್ಧತೆಗಳು ನಡೆದಿವೆ.

ಸೆಲೆಬ್ರಿಟಿಗಳ ಈ ಅದ್ದೂರಿ ಮದುವೆಯ ಕಾರಣದಿಂದ ಭದ್ರತೆಯ ಕಾರಣ‌ ನೀಡಿ ಸ್ಥಳೀಯ ಚೌತ್ ಮಾತಾ ಮಂದಿರದ ಮಾರ್ಗವನ್ನು ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮಂದಿರಕ್ಕೆ ಹೋಗುವುದಕ್ಕೆ ಮಾತ್ರವೇ ಅಲ್ಲದೆ ಆ ರಸ್ತೆಯಲ್ಲಿ ಸಂಚಾರಕ್ಕೆ ಕೂಡಾ ಅಡ್ಡಿಯುಂಟಾಗಿದೆ ಎಂದು ವಕೀಲ ನೇತ್ರಬಿಂದ್ ಸಿಂಗ್ ಜಾದೋನ್ ಅವರು ಸಿಕ್ಸ್ ಸೆನ್ಸ್ ಹೋಟೆಲ್ ಮ್ಯಾನೇಜರ್, ನಟ ವಿಕ್ಕಿ ಕೌಶಲ್ ಹಾಗೂ ಜಿಲ್ಲಾಧಿಕಾರಿಯ ವಿ ರು ದ್ಧ ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರದಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ಇದೇ ವೇಳೆ ಅವರು ಮಂದಿರಕ್ಕೆ ಹೋಗುವ ಭಕ್ತರಿಗೆ ತೊಂದರೆ ಉಂಟಾಗದಂತೆ ಮಂದಿರದ ಮಾರ್ಗವನ್ನು ತೆರೆಯುವಂತೆ ಆಗ್ರಹಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆ ನಡೆಯುತ್ತಿರುವುದು ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ. ಆದರೆ ಇತಿಹಾಸ ಪ್ರಸಿದ್ಧವಾದ ಚೌತ್ ಮಾತಾ ಮಂದಿರಕ್ಕೆ ದಿನವೊಂದಕ್ಕೆ ನೂರಾರು ಜನ ಭಕ್ತರು ಭೇಟಿ ನೀಡುವುದರಿಂದ, ಮದುವೆ ಕಾರಣವನ್ನು ನೀಡಿ ಮಂದಿರದ ಮಾರ್ಗವನ್ನು ಮುಚ್ಚುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಯಾಗುತ್ತಿರುವ ಸಿಕ್ಸ್ ಸೆನ್ಸ್ ಹೋಟೆಲ್ ಮಂದಿರಕ್ಕೆ ಹೋಗುವ ಮಾರ್ಗದಲ್ಲಿ ಇರುವುದರಿಂದ ಜಿಲ್ಲಾಧಿಕಾರಿಯವರು ಡಿಸೆಂಬರ್ 6 ರಿಂದ ಡಿಸೆಂಬರ್ 12 ರವರೆಗೆ ಮಂದಿರಕ್ಕೆ ಹೋಗುವ ಮಾರ್ಗವನ್ನು ಸಂಪೂರ್ಣವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವನ್ನು ಹೇರಿ ಬಂದ್ ಮಾಡಿದ್ದಾರೆ.‌ ಇದರಿಂದಾಗಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಅನಾನುಕೂಲ ಎದುರಾಗಿದೆ ಎನ್ನುವುದು ವಕೀಲರ ಆರೋಪವಾಗಿದೆ.

Leave a Comment