ಸೆಲೆಬ್ರಿಟಿ ಯಾರೇ ಆದ್ರೂ ಆಗ್ಲಿ, ವಿಕ್ಕಿ-ಕತ್ರೀನಾ ಮದುವೇಲಿ ಈ ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕಂತೆ

Written by Soma Shekar

Updated on:

---Join Our Channel---

ಬಾಲಿವುಡ್ ನ ಕ್ಯೂಟ್ ಕಪಲ್ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಇದೇ ಡಿಸೆಂಬರ್ ನಲ್ಲಿ ನಡೆಯುವ ವಿಷಯ ಇದೀಗ ಬಾಲಿವುಡ್ ನಲ್ಲಿ ಹಾಟ್ ಹಾಟ್ ಟಾಪಿಕ್ ಆಗಿದೆ. ಈ ಜೋಡಿಯ ಮದುವೆ ರಾಜಸ್ಥಾನದ ಒಂದು ಐಶಾರಾಮೀ ಹೋಟೇಲ್ ನಲ್ಲಿ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎನ್ನಲಾಗಿದ್ದು, ಮದುವೆಯು ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ಕುರಿತಾಗಿ ಅನೇಕ ವಿಚಾರಗಳು ಸುದ್ದಿಯಾಗುತ್ತಿದೆ. ಈಗ ಇದೇ ಮದುವೆಗೆ ಸಂಬಂಧಿಸಿದ ಹಾಗೆ ಹೊಸದೊಂದು ಅಪ್ಡೇಟ್ ಹೊರಗೆ ಬಂದಿದೆ. ಈ ಹೊಸ ಮಾಹಿತಿ ಕೂಡಾ ವಿಶೇಷವಾಗಿದೆ ಏಕೆಂದರೆ ಇದು ಮದುವೆಗೆ ಬರುವ ಅತಿಥಿಗಳಿಗೆ ಈಗ ಒಂದು ಕಂಡೀಶನ್ ಹಾಕಲಾಗಿದೆ.

ಹೌದು ಈ ಮಾತು ನಿಜ, ಸಿನಿಮಾ ಸೆಲೆಬ್ರಿಟಿಗಳ ಮದುವೆಗೆ ಬರುವವರೂ ಸಹಾ ಸೆಲೆಬ್ರಿಟಿಗಳೇ ಆಗಿದ್ದರೂ ಸಹಾ ಮದುವೆಗೆ ಬರುವ ಅತಿಥಿಗಳ ಮೊಬೈಲ್ ಬಳಕೆಗೆ ನಿಷೇಧವನ್ನು ಹೇರಲಾಗಿದೆ. ಡಿಸೆಂಬರ್ 12 ರಿಂದ 17 ತಾರೀಖಿನಲ್ಲಿ ವಿಕ್ಕಿ ಹಾಗೂ ಕತ್ರೀನಾ ಮದುವೆ ರಾಜಸ್ಥಾನದ ಹೊಟೇಲ್ ನಲ್ಲಿ ನಡೆಯಲಿದೆ. ಈ ವೇಳೆ ತಮ್ಮ ಮದುವೆಯಲ್ಲಿ ಭಾಗಿಯಾಗುವ ಅತಿಥಿಗಳು ಮೊಬೈಲ್ ಅನ್ನು ಬಳಕೆ ಮಾಡಬಾರದು ಎನ್ನುವಂತೆ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆನ್ನಲಾಗಿದೆ.

ತಮ್ಮ ವಿವಾಹದ ಫೋಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಕ್ಕೆ ಅವಕಾಶವನ್ನು ನೀಡಬಾರದು ಎನ್ನುವುದು ಈ ಉದ್ದೇಶಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ವಿವಾಹದ ವೇಳೆಯಲ್ಲಿ, ವಿವಾಹದ ಸ್ಥಳದಲ್ಲಿ ತಮ್ಮ ಖಾಸಗೀತನಕ್ಕೆ ಯಾವುದೇ ರೀತಿಯಲ್ಲಿ ಸಹಾ ಧಕ್ಕೆಯಾಗಬಾರದು ಎನ್ನುವುದಕ್ಕಾಗಿ ವಿಕ್ಕಿ ಕತ್ರೀನಾ ಜೋಡಿಯು ಇಂತಹುದೊಂದು ನಿರ್ಧಾರವನ್ನು ಮಾಡಿದೆ. ತಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆಗಾಗಿ ಜೋಡಿ ಆಯೋಜಕರಲ್ಲಿ ಮನವಿ ಮಾಡಿಕೊಂಡಿದೆ.

ಈಗಾಗಲೇ ಮದುವೆಯ ಸಿದ್ಧತೆಗಳ ಬಗ್ಗೆ ಪರಿವೀಕ್ಷಣೆ ನಡೆಸಲು ಹತ್ತು ಜನರ ತಂಡವೊಂದು ರಾಜಸ್ಥಾನದ ಹೊಟೇಲ್ ಗೆ ತಲುಪಿದೆ ಎನ್ನಲಾಗಿದೆ. ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳಾದ ಪ್ರಿಯಾಂಕ ಹಾಗೂ ನಿಕ್ ಮದುವೆಯ ವೇಳೆಯಲ್ಲಿ ಹಾಗೂ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯ ವೇಳೆಯಲ್ಲೂ ಸಹಾ ಮದುವೆಗೆ ಬರುವ ಅತಿಥಿಗಳ ಮೊಬೈಲ್ ಬಳಕೆಯ ಮೇಲೆ ನಿರ್ಬಂಧವನ್ನು ಹೇರಲಾಗಿತ್ತು.

Leave a Comment