ವಿಕ್ಕಿ-ಕತ್ರೀನಾ ಮದುವೆ ಬೆನ್ನಲ್ಲೇ ಆಲಿಯಾ, ರಣಬೀರ್ ಮದುವೆ ಬಗ್ಗೆ ಹೊಸ ಅಪ್ಡೇಟ್: ಅಭಿಮಾನಿಗಳಿಗೆ ಖುಷಿ

0 5

ಬಾಲಿವುಡ್ ನ ಲವ್ ಬರ್ಡ್ಸ್ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರಿಗೆ ಶುಭಾಶಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುತ್ತಿವೆ.‌ ಈ ಜೋಡಿ ಮಾತ್ರವೇ ಅಲ್ಲದೇ ಈ ವರ್ಷದಲ್ಲಿ ಬಾಲಿವುಡ್ ನ ಮತ್ತೊಂದು ಕ್ಯೂಟ್ ಕಪಲ್ ಎನಿಸಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಕೂಡಾ ನಡೆಯುತ್ತದೆ ಎಂದು ಅವರ ಅಭಿಮಾನಿಗಳು ಬಹಳ ಕಾತರತೆಯಿಂದ ನಿರೀಕ್ಷೆಯನ್ನು ಮಾಡುತ್ತಿದ್ದರು. ಆದರೆ ಅವರ ಆಸೆ ಮಾತ್ರ ನಿಜವಾಗಿರಲಿಲ್ಲ.

ಅಲ್ಲದೇ ಈ ಬಂದಿರುವ ತಾಜಾ ಸುದ್ದಿಗಳ ಪ್ರಕಾರ ಈ ಜೋಡಿಯ ಮದುವೆ ಸದ್ಯಕ್ಕಂತೂ ಇಲ್ಲ, ಬಹುತೇಕ ಇವರ ಮದುವೆ ಮುಂಬರುವ ವರ್ಷದ ಅಂತ್ಯಕ್ಕೆ 2022 ರ ಡಿಸೆಂಬರ್ ನಲ್ಲಿ ಅಥವಾ 2023 ರ ಜನವರಿಯಲ್ಲಿ ಮದುವೆಯಾಗಲು ನಿರ್ಣಯಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಮದುವೆ ವಿಚಾರವಾಗಿ ಆಲಿಯಾ ಆಪ್ತರೊಬ್ಬರು ಕೆಲವು ಮಾಹಿತಿಗಳನ್ನು ಮಾದ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಅಲಿಯಾ ಆಪ್ತರು ಕೊಟ್ಟಿರುವ ಮಾಹಿತಿ ಹೀಗಿದೆ.

ಆಲಿಯಾ ಮತ್ತು ರಣಬೀರ್ ಅವರು ಡೆಸ್ಟಿನೇಷನ್ ವಿವಾಹವನ್ನು ಮಾಡಿಕೊಳ್ಳುವ ಆಸಕ್ತಿಯನ್ನು ಹೊಂದಿಲ್ಲ ಎನ್ನಲಾಗಿದ್ದು, ಅವರು ಮುಂಬೈನಲ್ಲೇ ಮದುವೆ ಆಗಲು ನಿರ್ಧಾರ ಮಾಡಿದ್ದು, ಕೇವಲ ಅವರ ಕುಟುಂಬದವರು ಮತ್ತು ಆಪ್ತರು ಮಾತ್ರವೇ ಭಾಗಿಯಾಗಲು ಬಯಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಗ್ರಾಂಡ್ ಮದುವೆ ಬೇಡ ಎಂದಿದ್ದಾರೆಂದು ತಿಳಿದು ಬಂದಿದೆ. ಈ ವಿಚಾರಗಳನ್ನು ಹಂಚಿಕೊಂಡವರು ಆಲಿಯಾಗೆ ಬಹಳ ಆಪ್ತರು ಎನ್ನಲಾಗಿದೆ.

ರಣಬೀರ್ ಕಪೂರ್ ಅವರ ಚಿಕ್ಕಪ್ಪ ಹಾಗೂ ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಮದುವೆಗಾಗಿ ದೂರ ಪ್ರಯಾಣ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಮದುವೆಯನ್ನು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ನ ಗ್ರೌಂಡ್ ನಲ್ಲೇ ನಡೆಸುವ ಆಲೋಚನೆ ಇದೆ ಎನ್ನಲಾಗಿದೆ. ಮುಂದಿನ ವರ್ಷ ಅವರ ಮದುವೆಯ ಹೊಸ ಅಪ್ಡೇಟ್ ಸಿಗಲಿದೆ ಎನ್ನಲಾಗಿದೆ.

Leave A Reply

Your email address will not be published.