ವಿಕ್ಕಿ-ಕತ್ರೀನಾ ಮದುವೆ: ಸಿಕ್ತು ಈ ಜೋಡಿಗೆ ಬಂಪರ್ ಆಫರ್, ಕೋಟಿ ಕೋಟಿ ಕೊಡ್ತೀನಿ ಅಂದ ಓಟಿಟಿ

Written by Soma Shekar

Updated on:

---Join Our Channel---

ಬಾಲಿವುಡ್ ನಲ್ಲಿ ಸದ್ಯಕ್ಕೆ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಮದುವೆಯ ರಂಗು ಎಲ್ಲೆಡೆ ಜೋರಾಗಿ ರಂಗೇರಿದೆ. ರಾಜಸ್ಥಾನದ ಹೆರಿಟೇಜ್ ಹೋಟೆಲ್ ಆಗಿ ಪರಿವರ್ತನೆಯಾಗಿರುವ ಬಾರ್ವಾಡಾ ಕೋಟೆಯಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆಯಲು ಎಲ್ಲಾ ಸಿದ್ಧತೆಗಳು ಆಗಿದ್ದು, ಮದುವೆಯ ಶಾಸ್ತ್ರಗಳು ಈಗಾಗಲೇ ಆರಂಭವಾಗಿದ್ದು, ನಿನ್ನೆ ಸಂಗೀತ ಕಾರ್ಯಕ್ರಮ ನಡೆದಿದೆ. ಇಂದು ಅರಿಶಿನ ಶಾಸ್ತ್ರ ನಡೆಯಲಿದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯ ಕುರಿತಾಗಿ ಸುದ್ದಿ ಆದ ಮೇಲೂ ಕೂಡಾ ಈ ಮದುವೆಯ ವಿಚಾರ ನಿಜವೋ ಸುಳ್ಳೋ ಎನ್ನುವ ಅನುಮಾನ ಹುಟ್ಟುಹಾಕಿತ್ತು.

ಏಕೆಂದರೆ ವಿಕ್ಕಿ ಅಥವಾ ಕತ್ರಿನಾ ಮದುವೆ ವಿಚಾರವಾಗಿ ಎಲ್ಲೂ ಯಾವುದೇ ಮಾದ್ಯಮದಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ಅಲ್ಲದೇ ಮಾದ್ಯಮಗಳಲ್ಲಿ ಈ ಮದುವೆಗೆ ಹಾಜರಾಗುವ ಸೆಲೆಬ್ರಿಟಿಗಳು ತಮ್ಮ ಮೊಬೈಲ್ ಫೋನ್ ಬಳಕೆ ಮಾಡಬಾರದು, ಮಂಟಪಕ್ಕೆ ಫೋನ್ ತರಬಾರದು ಎನ್ನುವ ಷರತ್ತನ್ನು ಕೂಡಾ ವಿಧಿಸಲಾಗಿದೆ ಎಂದು ಸುದ್ದಿಯಾಗಿತ್ತು. ಈಗ ಇದೆಲ್ಲದಕ್ಕೂ ಕಾರಣವೇನು ಎನ್ನುವ ವಿಷಯ ಹೊರ ಬಂದಿದೆ. ಹೌದು ವಿಕ್ಕಿ ಹಾಗೂ ಕತ್ರಿನಾ ಕೈಫ್ ಮದುವೆಯ ವೀಡಿಯೋ ಪ್ರಸಾರದ ಹಕ್ಕನ್ನು ಸುಪ್ರಸಿದ್ಧ ಓಟಿಟಿ ವೇದಿಕೆ ಒಂದಕ್ಕೆ ಭಾರಿ ಕೋಟಿಗಳ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

ವರದಿಗಳ ಪ್ರಕಾರ ವಿಕ್ಕಿ ಹಾಗೂ ಕತ್ರಿನಾ ಮದುವೆಯ ವಿಡಿಯೋ ಪ್ರಸಾರದ ಹಕ್ಕನ್ನು ಅಮೆಜಾನ್ ಪ್ರೈಮ್ ಖರೀದಿ ಮಾಡಿದೆ ಎನ್ನಲಾಗಿದೆ. ಈವಸೆಲೆಬ್ರಿಟಿ ಮದುವೆ ವಿಡಿಯೋ ಪ್ರಸಾರದ ಹಕ್ಕಿಗಾಗಿ ಯಾವುದೇ ಸ್ಟಾರ್ ನಟರ ಸಿನಿಮಾಗಳಿಗಿಂತ ಕಡಿಮೆ ಏನಿಲ್ಲ ಎನ್ನುವಷ್ಟು ದೊಡ್ಡ ಮೊತ್ತದ ಹಣವನ್ನು ಅಮೆಜಾನ್ ನೀಡಿ, ಹಕ್ಕನ್ನು ಖರೀದಿ ಮಾಡಿದೆ ಎನ್ನುವುದು ವಿಶೇಷವಾಗಿದೆ. ಅಮೆಜಾನ್ ಪ್ರೈಮ್ ಈ ವಿಶೇಷವಾದ ಅದ್ದೂರಿ ಮದುವೆಯ ವಿಡಿಯೋ ಪ್ರಸಾರದ ಹಕ್ಕಿಗಾಗಿ ಬರೋಬ್ಬರಿ 80 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ತಮ್ಮ ವಿವಾಹದ ವಿಡಿಯೋ ಪ್ರಸಾರದ ಹಕ್ಕು ಮಾರಾಟ ಮಾಡಿರುವ ಕಾರಣದಿಂದಲೇ ವಿಕ್ಕಿ ಹಾಗೂ ಕತ್ರಿನಾ ತಮ್ಮ ಮದುವೆಯ ಕಾರ್ಯಕ್ರಮಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೂ ಲೀಕ್ ಆಗದಂತೆ ಬಹಳಷ್ಟು ಎಚ್ಚರಿಕೆ ವಹಿಸಿದ್ದಾರೆ. ಮದುವೆಗೆ ಹಾಜರಾಗುವ ಅತಿಥಿಗಳಿಂದ ಅಗ್ರಿಮೆಂಟ್ ಗೆ ಸಹಿಯನ್ನು ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇವರ ವೆಡ್ಡಿಂಗ್ ಸಿರೀಸ್ ರೂಪದಲ್ಲಿ ಓಟಿಟಿ ಪ್ಲಾಟ್ ಫಾರಂ ನಲ್ಲಿ ಪ್ರಸಾರವನ್ನು ಕಾಣಲಿದೆ.

Leave a Comment