ವಿಕ್ಕಿ-ಕತ್ರೀನಾ ಆಸ್ತಿ ಮೌಲ್ಯ ಎಷ್ಟು?? ವಿಕ್ಕಿಗಿಂತ ಶ್ರೀಮಂತೆ ಕತ್ರೀನಾ ಅಂದ್ರೆ ನಂಬ್ತೀರಾ?? ಇಲ್ಲಿದೆ ಮಾಹಿತಿ

0 4

ಬಾಲಿವುಡ್‌ ಸ್ಟಾರ್ ಗಳಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಬಹಳ ವೈಭವೋಪೇತ, ಅದ್ದೂರಿ ಸಮಾರಂಭದಲ್ಲಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಅಡಿಯಿಡಲು ಸಜ್ಜಾಗುತ್ತಿದ್ದಾರೆ. ಇವರ ಮದುವೆ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದೆ. ತಮ್ಮ ಮದುವೆಯ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ವಹಿಸಿರುವ ಈ ಜೋಡಿಯ ಮದುವೆಯ ಫೋಟೋಗಳು ವೀಡಿಯೊಗಳು ಲೀಕ್ ಆಗದಂತೆ ಎಚ್ಚರ ವಹಿಸಿದ್ದಾರೆ. ಅಲ್ಲದೇ ಇವರ ಮದುವೆ ವಿಡಿಯೋ ಪ್ರಸಾರದ ಹಕ್ಕನ್ನು ಕೂಡಾ ಅಮೆಜಾನ್ ಪ್ರೈಮ್ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ ಎನ್ನುವ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.

ಈ ಜೋಡಿಯ ಮದುವೆ ವಿಚಾರದ ಬೆನ್ನಲ್ಲೇ ಇವರಿಬ್ಬರ ಆಸ್ತಿ ಮೌಲ್ಯ ಎಷ್ಟು?? ಎನ್ನುವ ಚರ್ಚೆಗಳು ಕೂಡಾ ಪ್ರಾರಂಭವಾಗಿದೆ. ನಿಮಗೂ ಅಂತಹ ಒಂದು ಪ್ರಶ್ನೆ ಇದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಫೋರ್ಬ್ಸ್ ಇಂಡಿಯಾ 2019ರಲ್ಲಿ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡುವುದರ ಜೊತೆಗೆ ಅವರ ಒಟ್ಟು ಆಸ್ತಿ ಮೌಲ್ಯದ ಕುರಿತಾಗಿ ಕೂಡಾ ಮಾಹಿತಿಯನ್ನು ನೀಡಿತ್ತು. ಅದರ ಪ್ರಕಾರ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಗಳಿಕೆ ಹೇಗಿದೆ, ಅವರ ಆಸ್ತಿಯೆಷ್ಟು ಎನ್ನುವುದನ್ನು ತಿಳಿಯೋಣ ಬನ್ನಿ.

2019ರಲ್ಲಿ ಕತ್ರಿನಾ 23.63 ಕೋಟಿ ಹಣವನ್ನು ಗಳಿಸಿದರೆ, ಅದೇ ವರ್ಷದಲ್ಲಿ ವಿಕ್ಕಿ ಅವರ ಗಳಿಕೆ 10.42 ಕೋಟಿಗಳಾಗಿದೆ. ಈ ಇಬ್ಬರೂ ಕೂಡಾ ಸಿನಿಮಾಗಳಲ್ಲಿ ಮಾಡುವ ಕೆಲಸ ಮಾತ್ರವೇ ಅಲ್ಲದೇ ಹಲವು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಗಳು ಕೂಡಾ ಆಗಿದ್ದು, ಜಾಹಿರಾತುಗಳಲ್ಲೂ ಕಾಣಿಸಿಕೊಳ್ಳುವುದರಿಂದ ಹಲವು ಬ್ರ್ಯಾಂಡ್ ಗಳ ಕಡೆಯಿಂದ ಹರಿದು ಬಂದಿತ್ತು. ಇನ್ನು ವರ್ಷಗಳು ಕಳೆದಂತೆ ನಟಿಯರಿಗೆ ಸಾಮಾನ್ಯವಾಗಿಯೇ ಬೇಡಿಕೆ ಕಡಿಮೆಯಾಗುತ್ತದೆ ಎನ್ನುವ ಹಾಗೆ ಕತ್ರಿನಾಗೂ ಈಗ ಮೊದಲಷ್ಟು ಬೇಡಿಕೆ ಇಲ್ಲ ಎನ್ನುವಂತೆ ಭಾಸವಾಗುತ್ತಿದೆ.

ಕತ್ರಿನಾಗೆ ಅಷ್ಟೊಂದು ಅವಕಾಶಗಳು ಸಿಗುತ್ತಿಲ್ಲ ಎನ್ನುವುದು ವಾಸ್ತವ. ಏಕೆಂದರೆ 2018ರಲ್ಲಿ ಕತ್ರಿನಾ ಗಳಿಕೆ 33.67 ಕೋಟಿಗಳಾಗಿತ್ತು. ಆದರೆ 2019 ರ ವೇಳೆಗೆ ಅದು ಕಡಿಮೆಯಾಗಿರುವುದು ಅವರ ಬೇಡಿಕೆ ಕಡಿಮೆಯಾಗಿರುವುದಕ್ಕೆ ಸಾಕ್ಷಿ ಆಗಿದೆ. ಇನ್ನು ಒಟ್ಟು ಆಸ್ತಿಯ ಮೌಲ್ಯ ಹೇಳುವುದಾದರೆ ಕತ್ರಿನಾ 240 ಕೋಟಿ ಮೌಲ್ಯದ ಆಸ್ತಿಗೆ ಒಡತಿಯಾಗಿದ್ದಾರೆ. ವಿಕ್ಕಿ ಕೌಶಲ್ ಅವರ ಆಸ್ತಿಯ ಮೊತ್ತ ಸುಮಾರು 25 ರಿಂದ 30 ಕೋಟಿಗಳು ಎನ್ನಲಾಗಿದೆ.

ಕತ್ರೀನಾ, ವಿಕ್ಕಿ ಕೌಶಲ್ ಗಿಂತ ಮೊದಲೇ ಬಾಲಿವುಡ್ ಗೆ ಎಂಟ್ರಿ ನೀಡಿ ಹಲವು ಸೂಪರ್ ಹಿಟ್ ಸಿನಿಮಾಗಳು ಹಾಗೂ ಸುಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿಯಾಗಿದ್ದ ಕಾರಣ ಅವರ ಜನಪ್ರಿಯತೆ ಹಾಗೂ ಗಳಿಕೆ ಸಹಜವಾಗಿಯೇ ವಿಕ್ಕಿ ಕೌಶಲ್ ಅವರಿಗಿಂತ ಹೆಚ್ಚಾಗಿದೆ ಎನ್ನುವುದು ನಿಜ. ಆದರೆ ಕಳೆದ ಮೂರು ವರ್ಷಗಳಲ್ಲಿ ಕತ್ರೀನಾ ಬೇಡಿಕೆ ಮೊದಲಿಗೆ ಹೋಲಿಕೆ ಮಾಡಿದಾಗ ಕುಗ್ಗಿರುವುದು ಕೂಡಾ ವಾಸ್ತವ.

Leave A Reply

Your email address will not be published.