ವಾಸ್ತು ಟಿಪ್ಸ್: ಮನೆಯಲ್ಲಿ ಇಂತಹ ಆಮೆ ಇಟ್ಟರೆ ಹಣದ ಹರಿವು ಹೆಚ್ಚಿ, ಯಶಸ್ಸು ನಿಮ್ಮದಾಗುವುದು
ಜೀವನದಲ್ಲಿ ಹಣ ಸಂಪಾದನೆ ಮಾಡಲು, ಒಬ್ಬರು ಕಷ್ಟಪಟ್ಟು, ಶ್ರಮ ವಹಿಸಿ ಕೆಲಸವನ್ನು ಮಾಡಬೇಕು. ಕೆಲವರಿಗೆ ತಮ್ಮ ಶ್ರಮದ ಫಲವಾಗಿ ತಾವು ಬಯಸಿದ ಭಾಗ್ಯ ಸುಲಭವಾಗಿ ದೊರೆಯುತ್ತದೆ. ಆದರೆ ಅದೇ ಸಮಯದಲ್ಲಿ, ಕೆಲವರು ಸಾಕಷ್ಟು ಕಷ್ಟಪಟ್ಟರೂ, ಶ್ರದ್ಧೆಯಿಂದ ದುಡಿದರೂ ಸಹಾ ಅವರು ಬಯಸಿದ ಹಣವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅವರ ಅದೃಷ್ಟ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಒಂದು ವೇಳೆ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ನೀವು ಬಯಸಿದ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ನಿಮಗಾಗಿ ಇಲ್ಲಿವೆ ವಾಸ್ತು ಸಲಹೆಗಳು.
ನಿಮ್ಮ ಸಮಸ್ಯೆಗಳ ನಿವಾರಣೆಗಾಗಿ ವಾಸ್ತು ಪ್ರಕಾರ ನೀವು ನಿಮ್ಮ ಮನೆಯಲ್ಲಿ ಒಂದು ವಸ್ತುವನ್ನು ಇಟ್ಟುಕೊಳ್ಳಬೇಕು. ಅದದನ್ನು ಇಟ್ಟುಕೊಂಡರೆ ನಿಮ್ಮ ಅದೃಷ್ಟ ಖಂಡಿತ ಬದಲಾಗುತ್ತದೆ. ಆ ವಿಶೇಷ ವಸ್ತು ಯಾವುದು ಎನ್ನುವುದಾದರೆ, ಅದು ಆಮೆ. ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಎರಡರಲ್ಲೂ, ಆಮೆಯನ್ನು ಬಹಳ ಅದೃಷ್ಟವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಇದರ ಉಪಸ್ಥಿತಿಯು ಹಣವನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ ಎನ್ನಲಾಗಿದ್ದು ಮನೆಯ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು ಎನ್ನಲಾಗಿದೆ.
ಅಶುಭ ಗ್ರಹಗಳ ತೊಂದರೆ ಇರುವ ಮನೆಯಲ್ಲಿ ಸ್ಫಟಿಕ ಆಮೆಯನ್ನು ಇಟ್ಟುಕೊಂಡರೆ ಶುಭ ಫಲಿತಾಂಶಗಳನ್ನು ನೀಡುತ್ತವೆ. ಲೋಹ ಅಥವಾ ತಾಮ್ರದ ಆಮೆಯನ್ನು ಇಟ್ಟುಕೊಳ್ಳುವುದರ ಬದಲಾಗಿ, ಜೀವಂತ ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅದು ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದು ಸಾಧ್ಯವಿಲ್ಲ ಅಂದಾಗ ಹರಳಿನ ಆಮೆಯನ್ನು ಇಡಬಹುದು. ಇದರಿಂದ ಮನೆಯಲ್ಲೊಂದು ದೈವಿಕ ಶಕ್ತಿ ನೆಲೆಗೊಳ್ಳುವುದು.
ಇನ್ನು ಸ್ಫಟಿಕದ ಆಮೆಯನ್ನು ಇಟ್ಟುಕೊಳ್ಳುವುದರಿಂದ ಜನರ ಅಶುಭ ಗ್ರಹಗಳು ಸಹಾ ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ ಎನ್ನಲಾಗಿದೆ. ಇದರಿಂದ ಅವರ ಬದುಕಿನ ಸಮಸ್ಯೆಗಳು ಸಹಾ ದಿನೇ ದಿನೇ ಒಂದೊಂದಾಗಿ ದೂರಾಗುವುದು. ಅದೇ ಸಮಯದಲ್ಲಿ, ನಕಾರಾತ್ಮಕತೆ ನಿವಾರಣೆಯಾಗಿ, ಆರೋಗ್ಯ ವೃದ್ಧಿಯಾಗುವುದು. ಅಷ್ಟೇ ಅಲ್ಲ, ಅವರ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳೂ ಕೊನೆಗೊಳ್ಳುತ್ತವೆ.
ಹಣದ ಹರಿವು ಹೆಚ್ಚಿ , ಯಶಸ್ಸು ನಿಮ್ಮದಾಗುವುದು:
ಮನೆಯಲ್ಲಿ ಆಮೆಯನ್ನು ಇಡುವುದರಿಂದ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಇದಲ್ಲದೇ ಪ್ರಗತಿ ಸಾಧಿಸಲು ಇರುವ ತೊಂದರೆಯು ದೂರಾಗುವುದು. ಮನೆಯಲ್ಲಿ ಇರಿಸಲಾಗಿರುವ ಆಮೆಯು ಬೇಗ ಯಶಸ್ಸನ್ನು ಪಡೆಯಲು ನೆರವಾಗುವುದು. ವಾಸ್ತು ಫೆಂಗ್ ಶೂಯಿಯಲ್ಲಿ ಆಮೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲು ಇದೇ ಪ್ರಮುಖ ಕಾರಣವಾಗಿದೆ.